Success Story: 71ನೇ ವಯಸ್ಸಿನಲ್ಲೂ ಜೆಸಿಬಿ, ಲಾರಿಯಂತಹ 11 ರೀತಿಯ ವಾಹನಗಳನ್ನು ಚಲಾಯಿಸುತ್ತಾರೆ ಈ ಅಜ್ಜಿ!

Inspiring Story: 71ನೇ ವಯಸ್ಸಿನಲ್ಲೂ ರಾಧಾಮಣಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಕೋರ್ಸ್ ಮಾಡುತ್ತಿದ್ದಾರೆ. ಮಣಿ ಅಮ್ಮ ಎಂದೇ ಕರೆಯಲ್ಪಡುವ ರಾಧಾಮಣಿ ಕ್ರೇನ್, ಬುಲ್ಡೋಜರ್, ರೋಡ್ ರೋಲರ್ ಸೇರಿದಂತೆ 11 ವಾಹನಗಳ ಲೈಸೆನ್ಸ್ ಹೊಂದಿದ್ದಾರೆ.

Success Story: 71ನೇ ವಯಸ್ಸಿನಲ್ಲೂ ಜೆಸಿಬಿ, ಲಾರಿಯಂತಹ 11 ರೀತಿಯ ವಾಹನಗಳನ್ನು ಚಲಾಯಿಸುತ್ತಾರೆ ಈ ಅಜ್ಜಿ!
ರಾಧಾಮಣಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 14, 2022 | 4:21 PM

‘ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗಲಾರದು’. ಕೇರಳದಲ್ಲಿ ಮಣಿ ಅಮ್ಮ (Mani Amma) ಎಂದು ಪ್ರೀತಿಯಿಂದ ಕರೆಯುವ ರಾಧಾಮಣಿ ತಮ್ಮ 71ನೇ ವಯಸ್ಸಿನಲ್ಲಿ 11 ವಾಹನಗಳಿಗೆ ಡ್ರೈವಿಂಗ್ ಲೈಸೆನ್ಸ್​​ ಹೊಂದಿರುವ ಭಾರತದ ಏಕೈಕ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1978ರಲ್ಲಿ ಡ್ರೈವಿಂಗ್ ಶಾಲೆಯನ್ನು (Driving School) ಪ್ರಾರಂಭಿಸಿದ ಆಕೆಯ ಗಂಡನಾದ ಟಿವಿ ಲಾಲ್ ತನ್ನ ಹೆಂಡತಿಗೆ ಪ್ರೋತ್ಸಾಹ ನೀಡಿದರು. ಡ್ರೈವಿಂಗ್ ಸ್ಕೂಲ್ ಪ್ರಾರಂಭವಾದಾಗಿನಿಂದ ಅವರು ತಮ್ಮ ಹೆಂಡತಿಗೂ ಡ್ರೈವಿಂಗ್ ಕಲಿಸಲು ಪ್ರಾರಂಭಿಸಿದರು. ಗಂಡನ ಪ್ರೋತ್ಸಾಹದಿಂದ ರಾಧಾಮಣಿಗೂ ಡ್ರೈವಿಂಗ್​ನಲ್ಲಿ ಆಸಕ್ತಿ ಉಂಟಾಯಿತು. ಕಾರು, ಸ್ಕೂಟಿ ಸೇರಿದಂತೆ ಮಾತ್ರವಲ್ಲದೆ ಲಾರಿ, ಜೆಸಿಬಿಯಂತಹ ದೊಡ್ಡ ವಾಹನಗಳ ಡ್ರೈವಿಂಗ್ ಲೈಸೆನ್ಸ್​ ಕೂಡ ಪಡೆದುಕೊಂಡರು.

ಮಹಿಳೆಯರು ಡ್ರೈವಿಂಗ್ ಕಲಿಯಲು ಹಿಂದೇಟು ಹಾಕುವ ಸಮಯದಲ್ಲೇ ರಾಧಾಮಣಿ ಡ್ರೈವಿಂಗ್ ಶಾಲೆಯಲ್ಲಿ ಡ್ರೈವಿಂಗ್ ಕಲಿತರು. ರಾಧಾಮಣಿ ಮೊದಲು ಬಸ್ ಮತ್ತು ಲಾರಿಯನ್ನು ಚಲಾಯಿಸಲು ಕಲಿತರು. ಕ್ರಮೇಣ, ಕ್ರೇನ್‌ಗಳು, ಟ್ರೇಲರ್‌ಗಳು, ಫೋರ್ಕ್‌ಲಿಫ್ಟ್‌ಗಳು, ರೋಡ್ ರೋಲರ್‌ಗಳು ಮತ್ತು ಜೆಸಿಬಿಗಳನ್ನು ಹೇಗೆ ಆಪರೇಟ್ ಮಾಡಬೇಕೆಂದು ಕಲಿತರು. ಅವುಗಳಲ್ಲಿ ಪ್ರತಿಯೊಂದನ್ನು ಚಾಲನೆ ಮಾಡಲು ಲೈಸೆನ್ಸ್​ ಕೂಡ ಪಡೆದರು.

2004ರಲ್ಲಿ ತನ್ನ ಗಂಡನ ಮರಣದ ನಂತರ ತನ್ನ ಕುಟುಂಬವನ್ನು ಬೆಂಬಲಿಸಲು ಡ್ರೈವಿಂಗ್ ಸ್ಕೂಲ್ ಅನ್ನು ವಹಿಸಿಕೊಂಡ ರಾಧಾಮಣಿ “ಆಗ, ಹೆವಿ ವಾಹನವನ್ನು ಓಡಿಸುವ ಮಹಿಳೆಯನ್ನು ನೋಡಿ ಜನರು ತುಂಬಾ ಕುತೂಹಲ ಮತ್ತು ಆಶ್ಚರ್ಯಚಕಿತರಾಗಿದ್ದರು. ನನ್ನನ್ನು ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು” ಎಂದು ಹೇಳಿದ್ದಾರೆ.

ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಕೇರಳದ 71ರ ಹರೆಯದ ರಾಧಾಮಣಿ. ಮಣಿ ಅಮ್ಮ ಎಂದೇ ಕರೆಯಲ್ಪಡುವ ರಾಧಾಮಣಿ ಕ್ರೇನ್, ಬುಲ್ಡೋಜರ್, ರೋಡ್ ರೋಲರ್ ಸೇರಿದಂತೆ 11 ವಾಹನಗಳ ಲೈಸೆನ್ಸ್ ಹೊಂದಿದ್ದಾರೆ. ಗಂಡನ ಸಾವಿನ ನಂತರ ಎಲ್ಲಾ ಡ್ರೈವಿಂಗ್ ತಿಳಿದಿದ್ದ ರಾಧಾಮಣಿಗೆ ಡ್ರೈವಿಂಗ್ ಸ್ಕೂಲ್ ಮುನ್ನಡೆಸಲು ಕಷ್ಟವಾಗಲಿಲ್ಲ. ಅಂದಿನಿಂದ ಅವರ ಡ್ರೈವಿಂಗ್ ಸ್ಕೂಲ್​​ನಲ್ಲಿ ಮಹಿಳೆಯರಿಗೆ ಸಾಕಷ್ಟು ಕೆಲಸಗಳನ್ನು ನೀಡಿದ್ದಾರೆ. ನೂರಾರು ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿರುವ ಮಣಿ ಅಮ್ಮ ಕೇರಳದಲ್ಲಿ ಬಹಳ ಹೆಸರು ಪಡೆದಿದ್ದಾರೆ. 71ರ ಇಳಿವಯಸ್ಸಿನಲ್ಲೂ ರಾಧಾಮಣಿ ಈಗಲೂ ಜೆಸಿಬಿ, ಬೊಲ್ಡೋಜರ್, ಲಾರಿ ಮುಂತಾದ ಬೃಹತ್ ವಾಹನಗಳನ್ನು ಓಡಿಸುತ್ತಾರೆ.

ಅಂದಹಾಗೆ, 71ನೇ ವಯಸ್ಸಿನಲ್ಲೂ ರಾಧಾಮಣಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಕೋರ್ಸ್ ಮಾಡುತ್ತಿದ್ದಾರೆ. ಕಲಾಮಸರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ ಮಾಡುತ್ತಿರುವ ರಾಧಾಮಣಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಟವರ್ ಕ್ರೇನ್ ಚಲಾಯಿಸಬೇಕು ಎಂಬುದು ರಾಧಾಮಣಿಯವರ ಕನಸು.

ಇದನ್ನೂ ಓದಿ: Success Story: ಕೇವಲ ಎರಡೂವರೆ ರೂ.ಗೆ ಇಡ್ಲಿ, 5 ರೂ.ಗೆ ದೋಸೆ ಮಾರುವ ಬೆಂಗಳೂರಿನ ಅಮ್ಮ; ವಿಡಿಯೋ ಇಲ್ಲಿದೆ

Success Story: 6ನೇ ಕ್ಲಾಸ್​ ಫೇಲ್ ಆದವನ ಆದಾಯವೀಗ 2,000 ಕೋಟಿ ರೂ.!; ಕೂಲಿಯ ಮಗನ ಯಶೋಗಾಥೆ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್