Success Story: 6ನೇ ಕ್ಲಾಸ್​ ಫೇಲ್ ಆದವನ ಆದಾಯವೀಗ 2,000 ಕೋಟಿ ರೂ.!; ಕೂಲಿಯ ಮಗನ ಯಶೋಗಾಥೆ

iD Fresh Food | 6ನೇ ಕ್ಲಾಸ್​ನಲ್ಲಿ ಫೇಲ್ ಆಗಿದ್ದ ಆತನಿಗೆ ಏನಾದರೂ ಸಾಧಿಸಲೇಬೇಕು ಎಂಬ ಛಲ ಮಾತ್ರ ಬೆಟ್ಟದಷ್ಟಿತ್ತು. ಆ ಛಲವೇ ಆತನ ಈಗಿನ ಯಶಸ್ಸಿಗೆ ಕಾರಣ. ಆ ಬಡ ಕೂಲಿ ಕಾರ್ಮಿಕನ ಮಗನ ಆದಾಯವೀಗ ಬರೋಬ್ಬರಿ 2,000 ಕೋಟಿ ರೂ!

Success Story: 6ನೇ ಕ್ಲಾಸ್​ ಫೇಲ್ ಆದವನ ಆದಾಯವೀಗ 2,000 ಕೋಟಿ ರೂ.!; ಕೂಲಿಯ ಮಗನ ಯಶೋಗಾಥೆ
ಪಿ.ಸಿ ಮುಸ್ತಫಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 03, 2021 | 7:49 PM

ಕನಸು ಯಾರಿಗೆ ತಾನೇ ಇರುವುದಿಲ್ಲ? ತಾನು ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಹಿಡಿಯಬೇಕು. ಸಾಕಷ್ಟು ದುಡ್ಡು ಮಾಡಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ಕೇರಳದ ಬಡ ಕೂಲಿ ಕಾರ್ಮಿಕನ ಮಗನಾಗಿದ್ದ ಆ ಬಾಲಕನಿಗೂ ತಾನು ಚೆನ್ನಾಗಿ ದುಡ್ಡು ಮಾಡಿ, ತನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿತ್ತು. ಆದರೆ, ಅದು ಅಷ್ಟು ಸುಲಭವಾಗಿರಲಿಲ್ಲ. 6ನೇ ಕ್ಲಾಸ್​ನಲ್ಲಿ ಫೇಲ್ ಆಗಿದ್ದ ಆತನ ಮುಂದೆ ಆಗ ಯಾವ ಆಯ್ಕೆಗಳೂ ಇರಲಿಲ್ಲ. ಆದರೆ, ಏನಾದರೂ ಸಾಧಿಸಲೇಬೇಕು ಎಂಬ ಛಲ ಮಾತ್ರ ಬೆಟ್ಟದಷ್ಟಿತ್ತು. ಆ ಛಲವೇ ಆತನ ಈಗಿನ ಯಶಸ್ಸಿಗೆ ಕಾರಣ. ಆ ಬಡ ಕೂಲಿ ಕಾರ್ಮಿಕನ ಮಗನ ಆದಾಯವೀಗ ಬರೋಬ್ಬರಿ 2,000 ಕೋಟಿ ರೂ!

ಕೇರಳದ ದಿನಗೂಲಿ ಕೆಲಸಗಾರನ ಮಗನಾದ ಮುಸ್ತಫಾ 6ನೇ ತರಗತಿಯಲ್ಲಿ ಫೇಲ್ ಆಗಿದ್ದ. ನಂತರ ಮತ್ತೆ ಶಾಲೆಗೆ ಹೋಗಲು ಹಣಕಾಸಿನ ತೊಂದರೆಯೂ ಇತ್ತು. ಇದರಿಂದ ಅನಿವಾರ್ಯವಾಗಿ ತಂದೆಯ ಕೂಲಿ ಕೆಲಸದಲ್ಲಿ ಆತ ಸಹಾಯ ಮಾಡುತ್ತಿದ್ದ. ಅಪ್ಪ ಕೆಲಸಕ್ಕೆ ಹೋಗುತ್ತಿದ್ದ ಜಮೀನಿನಲ್ಲಿಯೇ ತಾನೂ ಕೆಲಸಕ್ಕೆ ಸೇರಿದ. ಅಂದು 6ನೇ ತರಗತಿ ಫೇಲ್ ಆಗಿದ್ದ ಆ ಬಾಲಕ ಈಗ ಐಡಿ ಫ್ರೆಷ್​ ಫುಡ್ ಎಂಬ ಕಂಪನಿಯ ಸಿಇಓ! ಈ ಯುವ ಉದ್ಯಮಿಯ ಆದಾಯ ಈಗ 2 ಸಾವಿರ ಕೋಟಿಗೂ ಹೆಚ್ಚು ಎಂದರೆ ನಂಬಲು ಕಷ್ಟವಾಗದೇ ಇರದು.

ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ ತನ್ನ ಯಶಸ್ಸಿನ ಕತೆಯನ್ನು ಹಂಚಿಕೊಂಡಿರುವ ಮುಸ್ತಫಾ, ನಾನು 6ನೇ ಕ್ಲಾಸ್​ ಫೇಲ್ ಆದಾಗ ವಾಪಾಸ್ ಶಾಲೆಗೆ ಬಂದು ಪರೀಕ್ಷೆ ಬರೆಯಬೇಕೆಂದು ನನ್ನ ಶಿಕ್ಷಕರು ಒತ್ತಾಯ ಮಾಡಿದರು. ಆದರೆ, ಆಗ ನಾನು ಕೆಲಸಕ್ಕೂ ಹೋಗಲೇಬೇಕಾಗಿತ್ತು. ಹೀಗಾಗಿ, ಖಾಸಗಿಯಾಗಿ ಆ ಶಿಕ್ಷಕರು ಸಂಜೆ ಮೇಲೆ ಉಚಿತವಾಗಿ ನನಗೆ ಟ್ಯೂಷನ್ ಮಾಡಿದರು. ಅದರಿಂದ ನಾನು ನನ್ನ ತರಗತಿಯಲ್ಲಿ ಗಣಿತದಲ್ಲಿ ಟಾಪ್ ಸ್ಥಾನ ಪಡೆದೆ. ಹೈಸ್ಕೂಲ್ ಮುಗಿದ ನಂತರ ನನ್ನ ಶಿಕ್ಷಕರೇ ನನ್ನ ಕಾಲೇಜು ಶುಲ್ಕವನ್ನು ಕೂಡ ಕಟ್ಟಿದರು. ಅದರಿಂದ ನಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂದು ಮುಸ್ತಫಾ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಆರಂಭದಲ್ಲಿ ಭಾರತದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಮುಸ್ತಫಾ ನಂತರ ವಿದೇಶಕ್ಕೆ ತೆರಳಿದರು. ಅಲ್ಲಿ ತನ್ನ ಅಪ್ಪ ಮಾಡಿದ್ದ ಸಾಲವನ್ನು ತೀರಿಸುವಷ್ಟು ಸಂಬಳ ಸಿಕ್ಕಿದ್ದರಿಂದ ಎರಡೇ ತಿಂಗಳಲ್ಲಿ ಸಾಲವನ್ನು ತೀರಿಸಿದರು. ಆದರೆ, ಯಾರದ್ದೋ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ಅವರಿಗೆ ತಮ್ಮದೇ ಆದ ಸ್ವಂತ ಉದ್ಯಮ ಶುರು ಮಾಡಬೇಕೆಂಬ ಕನಸಿತ್ತು. ಹೀಗಾಗಿ, ಭಾರತದಲ್ಲಿ ಉತ್ತಮ ಗುಣಮಟ್ಟದ ಇಡ್ಲಿ- ದೋಸೆ ಹಿಟ್ಟನ್ನು ಪೂರೈಕೆ ಮಾಡುವ ನಿರ್ಧಾರಕ್ಕೆ ಬಂದರು ಅದಕ್ಕಾಗಿ 50,000 ರೂ. ಹೂಡಿಕೆ ಮಾಡಿದ ಮುಸ್ತಫಾ ತನ್ನ ಕಸಿನ್​ಗಳಿಗೆ ಅದರ ಜವಾಬ್ದಾರಿಯನ್ನು ವಹಿಸಿದರು.

ಆರಂಭದಲ್ಲಿ ಸಣ್ಣದಾಗಿ ಶುರುವಾದ ಉದ್ಯಮ ಮೂರು ವರ್ಷವಾಗುವಷ್ಟರಲ್ಲಿ ದೊಡ್ಡದಾಗಿ ಬೆಳೆಯತೊಡಗಿತು. ಆಗ ಮುಸ್ತಫಾ ತಮ್ಮ ಸಂಪೂರ್ಣ ಹಣ ಮತ್ತು ಸಮಯವನ್ನು ಆ ಉದ್ಯಮಕ್ಕೆ ಮೀಸಲಿಡಬೇಕಿತ್ತು. ಹೀಗಾಗಿ, ಅವರು ವಿದೇಶದಿಂದ ಭಾರತಕ್ಕೆ ವಾಪಾಸ್ ಬಂದರು. ಉದ್ಯಮವನ್ನು ದೊಡ್ಡದಾಗಿ ಬೆಳೆಸಬೇಕೆಂದುಕೊಂಡ ಅವರಿಗೆ ಆರಂಭದಲ್ಲಿ ಸಾಕಷ್ಟು ತೊಡಕುಗಳಿದ್ದವು. ಆರಂಭದಲ್ಲಿ ಉದ್ಯೋಗಿಗಳಿಗೆ ಸಂಬಳ ಕೊಡಲು ಸಾಧ್ಯವಾಗದೆ ಅನೇಕ ಕಡೆ ಸಾಲ ಮಾಡಬೇಕಾಯಿತು. ಆದರೆ, ಒಂದುವೇಳೆ ಆ ಐಡಿ ಫ್ರೆಶ್​ ಫುಡ್ ಕಂಪನಿ ಯಶಸ್ವಿಯಾದರೆ ಕಂಪನಿಯ ಎಲ್ಲ 25 ಉದ್ಯೋಗಿಗಳನ್ನೂ ಲಕ್ಷಾಧಿಪತಿಯನ್ನಾಗಿ ಮಾಡುತ್ತೇನೆಂದು ಮಾತು ಕೊಟ್ಟಿದ್ದೆ. ನನ್ನ ಮಾತನ್ನು ನಂಬಿ, ನನ್ನ ಮೇಲೆ ವಿಶ್ವಾಸವಿಟ್ಟು ಅವರು ಸಂಬಳವಿಲ್ಲದೆಯೂ ಕೆಲಸ ಮಾಡಿದರು. ಅವರೆಲ್ಲರ ಪ್ರಯತ್ನದಿಂದ ಇಂದು ನಾನು ಯಶಸ್ವಿ ಉದ್ಯಮಿಯಾಗಿದ್ದೇನೆ ಎಂದು ಮುಸ್ತಫಾ ಹೇಳಿದ್ದಾರೆ.

ಕಷ್ಟಕಾಲದಲ್ಲಿ ನನ್ನ ಸಹಾಯಕ್ಕೆ ನಿಂತ ಉದ್ಯೋಗಿಗಳಿಗೆ ನಾನು ನನ್ನ ಕಂಪನಿಯ ಕೆಲವು ಷೇರುಗಳನ್ನು ನೀಡಿದ್ದೆ. ಅದಾದ 8 ವರ್ಷಗಳಲ್ಲಿ ನನ್ನ ಕಂಪನಿ ಬಹಳ ದೊಡ್ಡದಾಗಿ ಬೆಳೆಯಿತು. ಈಗ ಈ ಕಂಪನಿಯ ಷೇರಿಗೆ ಭಾರೀ ಬೆಲೆಯಿದೆ. ಇದೀಗ ಐಡಿ ಫ್ರೆಷ್ ಫುಡ್ ಕಂಪನಿ 2,000 ಕೋಟಿ ರೂ. ಆದಾಯವನ್ನು ಹೊಂದಿದೆ. ಈ ಕಂಪನಿಯ ಷೇರುಗಳಿರುವ ಉದ್ಯೋಗಿಗಳು ಈಗ ಲಕ್ಷಾಧಿಪತಿಯಾಗಿದ್ದಾರೆ. ನನಗೆ ಸಹಾಯ ಮಾಡಿದ ನನ್ನ ಶಿಕ್ಷಕರು ಈಗ ಬದುಕುಳಿದಿಲ್ಲ. ತಮ್ಮ ಸಹಾಯದಿಂದ ಕೂಲಿ ಕಾರ್ಮಿಕನ ಮಗನೊಬ್ಬ ಹೇಗೆ ಕೋಟ್ಯಧಿಪತಿಯಾದ ಎಂಬುದನ್ನು ನನ್ನ ಶಿಕ್ಷಕರು ನೋಡಬೇಕೆಂಬ ಆಸೆಯಿತ್ತು. ಅದೊಂದು ಈಡೇರಲಿಲ್ಲ ಎಂದು ಮುಸ್ತಫಾ ಹೇಳಿದ್ದಾರೆ.

ಇದನ್ನೂ ಓದಿ: Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್​ನ ಆದಾಯವೀಗ ವರ್ಷಕ್ಕೆ 100 ಕೋಟಿ!

Business Success Story: ಕಂಪೆನಿಯ ಷೇರಿನ ಪಾಲು ಮಾರಿ ತಲಾ 3500 ಕೋಟಿ ರೂಪಾಯಿ ಪಡೆದ ಮೂವರ ಯಶೋಗಾಥೆ

(Success Story: Daily Wager Son School Dropout PC Musthafa Built Rs 2000 Crore Company Idli Dosa Batter iD Fresh Food)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ