AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೆಟ್ರೋ ಸ್ಟೇಶನ್​ ಗೋಡೆ ಹತ್ತಿ, ಆತ್ಮಹತ್ಯೆಗೆ ಯತ್ನಿಸಿದ ಹುಡುಗಿಯನ್ನು ಉಪಾಯದಿಂದ ಕಾಪಾಡಿದ ಸಿಐಎಸ್​ಎಫ್ ಸಿಬ್ಬಂದಿ

ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಪ್ರತಿಯೊಬ್ಬರು ವಿಧವಿಧವಾಗಿ ಮನವಿ ಮಾಡಿದರೂ ಆಕೆ ಕೆಳಗೆ ಇಳಿಯಲಿಲ್ಲ.

Video: ಮೆಟ್ರೋ ಸ್ಟೇಶನ್​ ಗೋಡೆ ಹತ್ತಿ, ಆತ್ಮಹತ್ಯೆಗೆ ಯತ್ನಿಸಿದ ಹುಡುಗಿಯನ್ನು ಉಪಾಯದಿಂದ ಕಾಪಾಡಿದ ಸಿಐಎಸ್​ಎಫ್ ಸಿಬ್ಬಂದಿ
ದೆಹಲಿ ಮೆಟ್ರೋ ಸ್ಟೇಶನ್​ ಗೋಡೆ ಹತ್ತಿ ನಿಂತ ಯುವತಿ
TV9 Web
| Edited By: |

Updated on:Apr 14, 2022 | 2:16 PM

Share

ದೆಹಲಿಯ ಅಕ್ಷರಧಾಮ ಮೆಟ್ರೋ ಸ್ಟೇಶನ್​​ನಲ್ಲಿ ಇಂದು ಬೆಳಗ್ಗೆ ಒಂದು ಹೈಡ್ರಾಮಾ ನಡೆದಿದೆ. ಅದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.  ಇಂದು ಮುಂಜಾನೆ 7.28ರ ಹೊತ್ತಿಗೆ ಹುಡುಗಿಯೊಬ್ಬಳು ಮೆಟ್ರೋ ಸ್ಟೇಶನ್​ನ ಎತ್ತರದ ಗೋಡೆಯನ್ನು ಹತ್ತಿ, ಅಲ್ಲಿಂದ ಹಾರಲು ಮುಂದಾಗುತ್ತಿದ್ದಳು. ಆದರೆ ಆಕೆಯ ಆತ್ಮಹತ್ಯೆ ಪ್ರಯತ್ನವನ್ನು ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆ (CISF) ಸಿಬ್ಬಂದಿ ತಡೆದಿದ್ದಾರೆ. ಯುವತಿಯನ್ನು ರಕ್ಷಿಸಿದ್ದಾರೆ. ಗೋಡೆ ಏರಿ ನಿಂತ ಹುಡುಗಿಯ ಬಳಿ, ಕೆಳಗೆ ಇಳಿಯುವಂತೆ ಸಿಐಎಸ್​ಎಫ್​ ಅಧಿಕಾರಿಯೊಬ್ಬರು ಮನವಿ ಮಾಡುತ್ತಾರೆ. ಆಕೆಯ ಮನವೊಲಿಸಲೂ ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಪ್ರತಿಯೊಬ್ಬರು ವಿಧವಿಧವಾಗಿ ಮನವಿ ಮಾಡಿದರೂ ಆಕೆ ಕೆಳಗೆ ಇಳಿಯಲಿಲ್ಲ. ಬಳಿಕ ಅವರಲ್ಲೊಬ್ಬ ಕಾನ್​ಸ್ಟೆಬಲ್​ ಯುವತಿಯೊಂದಿಗೆ ಮಾತನಾಡುತ್ತಲೇ ಇದ್ದು, ಇನ್ನಷ್ಟು ಜನ ಹುಡುಗಿ ನಿಂತಿರುವ ಜಾಗಕ್ಕೆ ಕಂಬಳಿ ಹಿಡಿದುಕೊಂಡು ಹೋಗಿ ನಿಂತಿದ್ದರು. ಆಕೆ ಆ ಕಂಬಳಿಯಲ್ಲೇ ಬಿದ್ದಿದ್ದೆ. ಕಾಲಿಗೆ ಏಟಾಗಿದ್ದು ಬಿಟ್ಟರೆ, ಇನ್ಯಾವುದೇ ಗಂಭೀರ ಸ್ವರೂಪದ ಸಮಸ್ಯೆ ಆಕೆಗೆ ಆಗಿಲ್ಲ.

ಇದನ್ನೂ ಓದಿ: ಅಮೆರಿಕದ ಹೆದ್ದಾರಿಯಲ್ಲಿ ಟ್ರಕ್​ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಸ್ಫೋಟ; ವೈರಲ್ ವಿಡಿಯೋ ಇಲ್ಲಿದೆ

Published On - 2:16 pm, Thu, 14 April 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ