ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದು ಬಾಳ್ ಠಾಕ್ರೆ ಹೇಳುತ್ತಿರುವ ವಿಡಿಯೊ ಹಂಚಿಕೊಂಡ ರಾಜ್ ಠಾಕ್ರೆ
"ಮಹಾರಾಷ್ಟ್ರದಲ್ಲಿ ನಾವು ಸರ್ಕಾರ ರಚಿಸಿದಾಗ ಜನರು ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯುವಲ್ಲಿ ಯಶಸ್ವಿಯಾಗುವವರೆಗೆ ನಾವು (ಶಿವಸೇನಾ) ನಿಲ್ಲುವುದಿಲ್ಲ" ಎಂದು ಬಾಳ್ ಠಾಕ್ರೆ ಹೇಳುತ್ತಾರೆ. ಹಿಂದೂ ಧರ್ಮದ ಬಗ್ಗೆ ಯಾರಿಗಾದರೂ ದೂರು ಇದ್ದರೆ ಅವರು ನಮ್ಮ ಬಳಿಗೆ ಬರಬಹುದು.
ಮುಂಬೈ: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಅವರು ರಾಜ್ಯ ಸರ್ಕಾರಕ್ಕೆ ಅಂತಿಮ ಸೂಚನೆ ನೀಡಿದ್ದರಿಂದ ಮುಂಬೈನಲ್ಲಿ ತೀವ್ರ ಉದ್ವಿಗ್ನತೆಯ ನಡುವೆ, ಮಹಾರಾಷ್ಟ್ರದಲ್ಲಿ ಶಾಂತಿ ನೆಲೆಸಿದೆ. ರಾಜ್ಯದಲ್ಲಿ ಯಾವುದೇ ಪ್ರತಿಭಟನೆ ನಡೆಯುತ್ತಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ (Sanjay Raut) ಹೇಳಿದ್ದಾರೆ. ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಎಂಎನ್‌ಎಸ್ ಮುಖ್ಯಸ್ಥರು ಏಪ್ರಿಲ್ 12 ರಂದು ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಿದ್ದರು. ಅದು ವಿಫಲವಾದರೆ ಎಂಎನ್‌ಎಸ್ ಕಾರ್ಯಕರ್ತರು ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ (Hanuman Chalisa) ನುಡಿಸುತ್ತಾರೆ ಎಂದು ಅವರು ಎಚ್ಚರಿಸಿದ್ದು, ಅದನ್ನು ಪದೇ ಪದೇ ಪುನರುಚ್ಚರಿಸಿದ್ದಾರೆ. ಠಾಕ್ರೆ ವಿರುದ್ಧ ಮಹಾರಾಷ್ಟ್ರ ಸರ್ಕಾರ ಪ್ರಕರಣ ದಾಖಲಿಸಿದ್ದರೂ ಬುಧವಾರ ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಧ್ವನಿವರ್ಧಕಗಳ ಬಳಕೆ ಮತ್ತು ರಸ್ತೆಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದರ ವಿರುದ್ಧ ಬಾಳ್ ಠಾಕ್ರೆ ಮಾತನಾಡುತ್ತಿದ್ದಾರೆ. ರಾಜ್ ಠಾಕ್ರೆ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಜನರು ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯುವಲ್ಲಿ ಶಿವಸೇನಾ ಯಶಸ್ವಿಯಾಗುವವರೆಗೆ ವಿಶ್ರಮಿಸುವುದಿಲ್ಲ ಎಂದು ಬಾಳ್ ಠಾಕ್ರೆ ಹೇಳಿದ್ದಾರೆ.
“ಮಹಾರಾಷ್ಟ್ರದಲ್ಲಿ ನಾವು ಸರ್ಕಾರ ರಚಿಸಿದಾಗ ಜನರು ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯುವಲ್ಲಿ ಯಶಸ್ವಿಯಾಗುವವರೆಗೆ ನಾವು (ಶಿವಸೇನಾ) ನಿಲ್ಲುವುದಿಲ್ಲ” ಎಂದು ಬಾಳ್ ಠಾಕ್ರೆ ಹೇಳುತ್ತಾರೆ. ಹಿಂದೂ ಧರ್ಮದ ಬಗ್ಗೆ ಯಾರಿಗಾದರೂ ದೂರು ಇದ್ದರೆ ಅವರು ನಮ್ಮ ಬಳಿಗೆ ಬರಬಹುದು. ನಾವು ಸಮಸ್ಯೆಯನ್ನು ಪರಿಹರಿಸುತ್ತೇವೆ. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗುವುದು ಎಂದು ರಾಜ್ ಠಾಕ್ರೆ ಹಂಚಿಕೊಂಡ ವಿಡಿಯೊದಲ್ಲಿ ಬಾಳ್ ಠಾಕ್ರೆ ಹೇಳಿದ್ದಾರೆ.
— Raj Thackeray (@RajThackeray) May 4, 2022
ಧ್ವನಿವರ್ಧಕ ವಿವಾದ ಕುರಿತು ಪ್ರತಿಕ್ರಿಯಿಸಿದ ಶಿವಸೇನಾ ನಾಯಕ ಸಂಜಯ್ ರಾವುತ್, ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಅಕ್ರಮ ಧ್ವನಿವರ್ಧಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. “ರಾಜ್ಯದಲ್ಲಿ ಯಾವುದೇ ಅಕ್ರಮ ಧ್ವನಿವರ್ಧಕಗಳು ನಡೆಯುತ್ತಿಲ್ಲ. ದೇಶಕ್ಕೆ ಹಿಂದುತ್ವವನ್ನು ಕಲಿಸಿದವರು ಬಾಳ್ ಠಾಕ್ರೆ ಮತ್ತು ವೀರ್ ಸಾವರ್ಕರ್. ಶಿವಸೇನಾ ಹಿಂದುತ್ವದ ಶಾಲೆಯೂ ನಿಜವಾದುದು” ಎಂದು ರಾವ ರಾವತ್ ಹೇಳಿದ್ದಾರೆ.
ನಿನ್ನೆ ಸಂಜೆ ಟ್ವೀಟ್ ಮಾಡಿದ ಹೇಳಿಕೆಯಲ್ಲಿ ಠಾಕ್ರೆ ಅವರು ಧ್ವನಿವರ್ಧಕಗಳನ್ನು ತೆಗೆದುಹಾಕದ ಮಸೀದಿಗಳ ಬಳಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸುವ ಯೋಜನೆಯನ್ನು ಪುನರುಚ್ಚರಿಸಿದ್ದಾರೆ. “ನಾಳೆ, ಮೇ 4 ರಂದು, ನೀವು ಧ್ವನಿವರ್ಧಕದಲ್ಲಿ ಕೇಳಿದರೆ ಆಜಾನ್ ಮೊಳಗುವುದನ್ನು, ಆ ಸ್ಥಳಗಳಲ್ಲಿ ಹನುಮಾನ್ ಚಾಲೀಸಾವನ್ನು ಧ್ವನಿವರ್ಧಕದಲ್ಲಿ ನುಡಿಸಿ, ಆಗ ಅವರಿಗೆ ಈ ಧ್ವನಿವರ್ಧಕಗಳ ಅಡಚಣೆಯ ಅರಿವಾಗುತ್ತದೆ ಎಂದು ನಾನು ಎಲ್ಲಾ ಹಿಂದೂಗಳಲ್ಲಿ ಮನವಿ ಮಾಡುತ್ತೇನೆ ಎಂದು ಕರೆ ನೀಡಿದ್ದರು.
ಎಲ್ಲಿ ಆಜಾನ್ ಪಠಿಸಿದರೂ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸುವುದಾಗಿ ರಾಜ್ ಠಾಕ್ರೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಮತ್ತು ಸಮೀಪವಿರುವ ಹಲವಾರು ಮಸೀದಿಗಳು ಇಂದು ಬೆಳಿಗ್ಗೆ ಆಜಾನ್ ಸಮಯದಲ್ಲಿ ಧ್ವನಿವರ್ಧಕಗಳನ್ನು ನಿಲ್ಲಿಸಿದ್ದವು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ