Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲಿನ ಆರೈಕೆ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳಿಗೆ ಇಲ್ಲಿದೆ ಉತ್ತರ

ಕೂದಲಿನ ಆರೈಕೆ ಕುರಿತು ಸಾಕಷ್ಟು ಮಿಥ್ಯಗಳಿವೆ, ಈಗಿನ ಜೀವನಶೈಲಿಯಲ್ಲಿ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ, ಕೂದಲಿನ ಆರೈಕೆ ಬಗ್ಗೆ ಯಾರು ಏನೇ ಹೇಳಿದರೂ ಅಲರ್ಟ್ ಆಗಿಬಿಡುತ್ತೇವೆ, ಒಮ್ಮೆ ನೀವು ಪಾಲಿಸಬೇಕಾದ ಸಲಹೆಗಳ ಬಗ್ಗೆ ತಿಳಿಯುವುದು ಅಗತ್ಯ.

ಕೂದಲಿನ ಆರೈಕೆ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳಿಗೆ ಇಲ್ಲಿದೆ ಉತ್ತರ
ಕೂದಲು ಆರೈಕೆ
Follow us
TV9 Web
| Updated By: ನಯನಾ ರಾಜೀವ್

Updated on: May 08, 2022 | 12:38 PM

ಕೂದಲಿನ ಆರೈಕೆ ಬಗ್ಗೆ ಒಬ್ಬೊಬ್ಬರು ಒಂದೊಂದು ಸಲಹೆಯನ್ನು ನೀಡುತ್ತಾರೆ, ಆಗಾಗ ಕೂದಲು ಕತ್ತರಿಸಿದರೆ ದಪ್ಪವಾಗಿ ಬೆಳೆಯುತ್ತದೆ. ಶ್ಯಾಂಪೂ ಹಾಕಿದ ಬಳಿಕ ಕಂಡೀಷನರ್ ಬಳಕೆ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಎಂಬೆಲ್ಲಾ ಸಲಹೆಗಳನ್ನು ನೀಡುತ್ತಾರೆ. ಈಗಿನ ಜೀವನಶೈಲಿಯಲ್ಲಿ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ, ಕೂದಲಿನ ಆರೈಕೆ ಬಗ್ಗೆ ಯಾರು ಏನೇ ಹೇಳಿದರೂ ಅಲರ್ಟ್ ಆಗಿಬಿಡುತ್ತೇವೆ, ಒಮ್ಮೆ ನೀವು ಪಾಲಿಸಬೇಕಾದ ಸಲಹೆಗಳ ಬಗ್ಗೆ ತಿಳಿಯುವುದು ಅಗತ್ಯ.

ಆಯಿಲಿ ಕೂದಲಾಗಿದ್ದರೆ ಶ್ಯಾಂಪೂ ಬಳಿಕ ಕಂಡೀಷನರ್ ಬಳಕೆ ಮಾಡಬೇಡಿ ಎಂದು ಕೆಲವರು ಸಲಹೆ ನೀಡುತ್ತಾರೆ ಆದರೆ ಕೂದಲಿನ ಸಂರಕ್ಷಣೆಗೆ ಶ್ಯಾಂಪೂ ಜತೆಯಲ್ಲಿ ಕಂಡೀನರ್ ಬಳಕೆ ಮಾಡಲೇಬೇಕು.

ಒಂದು ನೆರೆ ಕೂದಲು ಕಿತ್ತರೆ ಎರಡು ನೆರೆ ಕೂದಲು ಹುಟ್ಟುತ್ತದೆ ಎಂಬುದು ನಿಜವೇ?: ಒಂದು ಕೂದಲು ಕಿತ್ತ ತಕ್ಷಣ ಎರಡು ನೆರೆ ಕೂದಲು ಹುಟ್ಟುವುದಿಲ್ಲ. ಬದಲಿಗೆ ದೇಹದಲ್ಲಿ ಕೂದಲಿಗೆ ಅಗತ್ಯವಾದ ಪೋಷಕಾಂಶದ ಕೊರತೆ ಉಂಟಾದಾಗ ಅಥವಾ ಒತ್ತಡದ ಜೀವನ ಶೈಲಿಯಿಂದ ಅಕಾಲಿಕ ನೆರೆ ಮೂಡುತ್ತದೆ. ಮೊದ ಮೊದಲು ಅಲ್ಲಲ್ಲಿ ಒಂದೊಂದು ನೆರೆ ಕೂದಲು ಕಾಣಿಸಬಹುದು. ನಂತರ ನೆರೆ ಕೂದಲು ಸಂಖ್ಯೆ ಹೆಚ್ಚಾಗುವುದು. ಆದ್ದರಿಂದ ಕೀಳುವುದರಿಂದ ನೆರೆ ಕೂದಲು ಹೆಚ್ಚಾಯಿತು ಎಂದು ಭಾವಿಸುವುದು ತಪ್ಪು. ನೆರೆಕೂದಲು ಬಂದರೆ ಅದನ್ನು ಕೀಳುವುದು ಮಾಡಬೇಡಿ. ಅದು ಕಾಣಬಾರದು ಎಂದಾದರೆ ಡೈ ಮಾಡಿ ಅಥವಾ ಹೆನ್ನಾ ಹಚ್ಚಿ.

ಕೂದಲನ್ನು ಕತ್ತರಿಸಿದರೆ ದಪ್ಪವಾಗಿ ಬೆಳೆಯುತ್ತದೆ: ಕೂದಲು ಕತ್ತರಿಸುವುದರಿಂದ ಕೂದಲು ದಪ್ಪವಾಗಿ ಬೆಳೆಯುವುದಿಲ್ಲ. ಕೂದಲು ದಪ್ಪವಾಗಿ ಬೆಳೆಯಬೇಕಾದರೆ ಕೂದಲಿನ ಬುಡದ ಆರೈಕೆ ಮಾಡಬೇಕು. ಕೂದಲು ಕವಲೊಡೆದಿದ್ದರೆ ಕತ್ತರಿಸಿದರೆ ಒಳ್ಳೆಯದು.

ಬೆಲೆ ಬಾಳುವ ಶ್ಯಾಂಪೂಗಳನ್ನು ಕೂದಲಿಗೆ ಬಳಸಿದರೆ ಕೂದಲು ದಪ್ಪವಾಗಿ ಬೆಳೆಯುತ್ತದೆ ಎಂಬುದು ಸತ್ಯವೇ?: ಕೂದಲು ದಪ್ಪವಾಗಿ ಬೆಳೆಯಲು ಆರೋಗ್ಯಕರ ಜೀವನ ಶೈಲಿ ಮತ್ತು ಆಹಾರ , ಹಾಗೂ ಪರಿಸರ ಅಗತ್ಯ ಹೊರತು ಬೆಲೆ ಬಾಳುವ ಶ್ಯಾಂಪೂ ಕಂಡೀಷನರ್‌ಗಳಲ್ಲ!

ಶ್ಯಾಂಪೂ ಹಾಕಿದ ಬಳಿಕ ಕಂಡೀಷನರ್: ಇದು ಹೆಚ್ಚಿನವರು ಮಾಡುವ ತಪ್ಪು. ಕಂಡೀಷನರ್ ಹಚ್ಚಿದ ಬಳಿಕ ಶ್ಯಾಂಪೂ ಹಚ್ಚುವುದು ಕೂದಲಿನ ಆರೈಕೆಗೆ ಒಳ್ಳೆಯದು. ಅದರಲ್ಲೂ ಮೊಟ್ಟೆಯನ್ನು ನ್ಯಾಚುರಲ್ ಕಂಡಿಷನರ್ ಆಗಿ ಬಸುವುದು ಕೂದಲಿನ ಆರೈಕೆಗೆ ತುಂಬಾ ಒಳ್ಳೆಯದು.

ಕೂದಲು ಉದುರುವಿಕೆ ಸೇರಿ ಇತರೆ ಸಮಸ್ಯೆಗಳಿದ್ದರೆ ವೈದ್ಯರನ್ನು  ಸಂಪರ್ಕಿಸಿ.

ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ