AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಬದಲಾದ ಜೀವನಶೈಲಿ, ಒತ್ತಡ ಅನುಭವಿಸುತ್ತಿರುವ ಮಕ್ಕಳು; ನಿವಾರಣೆ ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Mental Health | Stress in Children: ವಯಸ್ಕರಷ್ಟೇ ಮಕ್ಕಳೂ ಕೂಡ ಒತ್ತಡದಿಂದ ಬಳಲುತ್ತಿದ್ದಾರೆ. ಆದರೆ ಮಕ್ಕಳ ಒತ್ತಡದ ಬಗ್ಗೆ ಹೆಚ್ಚಿನವರು ಗಮನ ಕೊಡುವುದಿಲ್ಲ. ಅದನ್ನು ಬಾಲಿಶ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಮಕ್ಕಳು ಅನುಭವಿಸುವ ಒತ್ತಡದ ಬಗ್ಗೆ ಪೋಷಕರಾಗಿ ನಿಮ್ಮ ಜವಾಬ್ದಾರಿ ಹೆಚ್ಚಿರುತ್ತದೆ.

Health Tips: ಬದಲಾದ ಜೀವನಶೈಲಿ, ಒತ್ತಡ ಅನುಭವಿಸುತ್ತಿರುವ ಮಕ್ಕಳು; ನಿವಾರಣೆ ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Apr 11, 2022 | 6:30 AM

Share

ಈಗಿನ ದಿನಮಾನದಲ್ಲಿ ಜನರು ಮಾನಸಿಕ ಆರೋಗ್ಯದ (Mental Health) ಬಗ್ಗೆಯೂ ಹೆಚ್ಚು ಗಮನ ಕೊಡಲೇಬೇಕಾಗಿದೆ. ಕಾರಣ, ಒತ್ತಡದ ಬದುಕು ನಮ್ಮ ನೆಮ್ಮದಿಯನ್ನು ಕಸಿಯುತ್ತಿದೆ. ಇದು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಪ್ರಪಂಚದಲ್ಲಿ ಬಹಳಷ್ಟು ಜನರು ಪ್ರತಿದಿನವೂ ಒತ್ತಡದಿಂದ ಬಳಲುತ್ತಿದ್ದಾರೆ. ಇದನ್ನು ದೀರ್ಘಕಾಲಿಕ ಒತ್ತಡ ಎಂದು ಕರೆಯುತ್ತಾರೆ. ಆದರೆ ಈ ಒತ್ತಡದ (Stress) ಹೊಡೆತಕ್ಕೆ ಸಿಲುಕುವವರು ಕೇವಲ ಉದ್ಯೋಗಿಗಳು ಎಂದರೆ ನಿಮ್ಮ ಊಹೆ ತಪ್ಪು. ಕಾರಣ, ವಯಸ್ಕರಷ್ಟೇ ಮಕ್ಕಳೂ ಕೂಡ ಒತ್ತಡದಿಂದ ಬಳಲುತ್ತಿದ್ದಾರೆ. ಆದರೆ ಮಕ್ಕಳ ಒತ್ತಡದ ಬಗ್ಗೆ ಹೆಚ್ಚಿನವರು ಗಮನ ಕೊಡುವುದಿಲ್ಲ. ಅದನ್ನು ಬಾಲಿಶ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಮಕ್ಕಳು ಅನುಭವಿಸುವ ಒತ್ತಡದ ಬಗ್ಗೆ ಪೋಷಕರಾಗಿ ನಿಮ್ಮ ಜವಾಬ್ದಾರಿ ಹೆಚ್ಚಿರುತ್ತದೆ. ಇದನ್ನು ಹಲವು ವಿಧಾನಗಳ ಮೂಲಕ ಪರಿಹರಿಸಿಕೊಳ್ಳಬಹುದು. ಕಾರಣ, ಮಕ್ಕಳಲ್ಲಿ ಒತ್ತಡ ಹೆಚ್ಚುತ್ತಾ ಹೋದರೆ ದೀರ್ಘಕಾಲಿಕವಾಗಿ ಅಪಾಯ ಎದುರಾಗಬಹುದು. ಹೀಗಾಗಿ ಮೊದಲೇ ಮಕ್ಕಳನ್ನು ಒತ್ತಡ ಮುಕ್ತವಾಗಿಸುವುದು ಉತ್ತಮ.

ಮಕ್ಕಳಿಗಾಗಿ ಒತ್ತಡವನ್ನು ನಿವಾರಿಸುವ ಕೆಲವು ಸಲಹೆಗಳು ಇಲ್ಲಿವೆ:

ಒತ್ತಡದ ಲಕ್ಷಣಗಳನ್ನು ಗುರುತಿಸಿ: ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ಮೊದಲ ಪ್ರಯತ್ನವೆಂದರೆ ಅವರಿಗೆ ಒತ್ತಡದ ಲಕ್ಷಣಗಳ ಬಗ್ಗೆ ಮನವರಿಕೆ ಮಾಡಿಕೊಡುವುದು. ಮಕ್ಕಳಲ್ಲಿ ಒತ್ತಡದ ಕೆಲವು ಲಕ್ಷಣಗಳೆಂದರೆ ಆಯಾಸ, ವಿಪರೀತ ನಿದ್ರೆ, ಹೊಟ್ಟೆನೋವು, ಆಕ್ರಮಣಶೀಲತೆ ಇತ್ಯಾದಿ. ಈ ಲಕ್ಷಣಗಳನ್ನು ಗುರುತಿಸಿದಾಗ ಅದರ ನಿರ್ವಹಣೆ ಸುಲಭವಾಗುತ್ತದೆ.

ನಿಮ್ಮ ಭಾವನೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ: ಮಕ್ಕಳು ಒತ್ತಡ ಅನುಭವಿಸುವಾಗ ಪೋಷಕರು ಇಂತಹ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೋ ಅದನ್ನು ಅನುಸರಿಸುತ್ತಾರೆ. ಹೀಗಾಗಿ ಮಕ್ಕಳಿಗೆ ತಪ್ಪು ಹಾದಿಯನ್ನು ಪೋಷಕರಾಗಿ ನೀವೇ ತೋರಬೇಡಿ. ಮಕ್ಕಳೊಂದಿಗೆ ಉತ್ತಮವಾಗಿ ಹಾಗೂ ತಾಳ್ಮೆಯಿಂದ ಸಂವಹನ ನಡೆಸಿ. ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಿ. ಇದು ಮಕ್ಕಳಿಗೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಪೂರಕ ವಾತಾವರಣ ಕಲ್ಪಿಸುತ್ತದೆ.

ಪ್ರಾಣಾಯಾಮ ಅಭ್ಯಾಸ ಮಾಡಿಸಿ: ಉಸಿರಾಟದ ವ್ಯಾಯಾಮವು ಮನಸ್ಸನ್ನು ತಹಬದಿಗೆ ತರಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಒತ್ತಡವನ್ನು ನಿವಾರಿಸಲು ಪ್ರಯತ್ನಿಸುವಾಗ, ಧ್ಯಾನ ಮತ್ತು ಯೋಗದೊಂದಿಗೆ ಪ್ರಾಣಾಯಾಮ ಅಥವಾ ಉಸಿರಾಟದ ವ್ಯಾಯಾಮವನ್ನು ಹೇಳಿಕೊಡಿ. ಅವರ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಹಾಗೂ ಒತ್ತಡವನ್ನು ನಿರ್ವಹಿಸಲು ಅವರಿಗೆ ಸಹಾಯ ಮಾಡಿ. ಇದು ಆತಂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಮಕ್ಕಳೊಂದಿಗೆ ಉತ್ತಮ ಸಂವಹನ: ನಿಮ್ಮ ಮಕ್ಕಳೊಂದಿಗೆ ಮಾತನಾಡುವುದು ಅವರ ಮಾನಸಿಕ ಆರೋಗ್ಯವನ್ನು ಕಾಪಿಡುವ ನಿರ್ಣಾಯಕ ಹಂತಗಳಲ್ಲೊಂದು. ಅವರೊಂದಿಗೆ ಸಂವಹನ ನಡೆಸಿ, ಅವರ ಆಲೋಚನೆಗಳ ಬಗ್ಗೆ ಕೇಳಿ, ಅವರ ಜೀವನದಲ್ಲಿ ಆಸಕ್ತಿಯನ್ನು ತೋರಿಸಿ ಮತ್ತು ಅವರಿಗೆ ನಿಮ್ಮ ಅಗತ್ಯವಿದ್ದಲ್ಲಿ ನೀವು ಜತೆಗಿದ್ದೇವೆ ಎಂದು ತಿಳಿಸಿ. ಈ ಭದ್ರತೆಯ ಭಾವದಿಂದಲೇ ಮಕ್ಕಳು ಎಷ್ಟೋ ಬಾರಿ ಒತ್ತಡವನ್ನು ಸುಲಭವಾಗಿ ಎದುರಿಸಬಹುದು.

ಮಕ್ಕಳಿಗೆ ಅವರ ಆಲೋಚನೆಗಳನ್ನು ಬರೆಯಲು ಸಹಾಯ ಮಾಡಿ: ಒತ್ತಡವನ್ನು ಉಂಟುಮಾಡುವ ಅಂಶಗಳನ್ನು ಬರೆಯುವುದು ಒತ್ತಡವನ್ನು ನಿಭಾಯಿಸಲು ಪ್ರಯೋಜನಕಾರಿ. ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸುವಾಗ, ಅವರಿಗೆ ಸಮಸ್ಯೆ ನೀಡುತ್ತಿರುವ ಯೋಚನೆಗಳನ್ನು ಬರೆಯಲು ಸಹಾಯ ಮಾಡಿ.

(ವಿ.ಸೂ.: ಮಾಹಿತಿಯ ಉದ್ದೇಶದಿಂದ ಈ ವಿಚಾರಗಳನ್ನು ನೀಡಲಾಗಿದೆ. ಅನುಸರಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ)

ಇದನ್ನೂ ಓದಿ: Skin care: ಒತ್ತಡದಿಂದ ಮುಖ ಕಳೆಗುಂದಿದೆಯೇ? ಚರ್ಮದ ಆರೋಗ್ಯಕ್ಕೆ ಇಲ್ಲಿವೆ ಸಿಂಪಲ್ ಟಿಪ್ಸ್

Emotion ಕಂಟ್ರೋಲ್ ಮಾಡಿದರೆ ಏನಾಗುತ್ತೆ ಗೊತ್ತಾ?

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್