ಭಾರತದಲ್ಲಿ 185 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ; ಮಾಸ್ಕ್​ ಧರಿಸಬೇಕಾ, ಬೇಡವಾ? ನಿರ್ಧಾರ ಮಾಸ್​ಗೆ ಬಿಟ್ಟದ್ದು!

Mask of NO MASK: ಮಾಸ್ಕ್ ಹಾಕುವ ಅಗತ್ಯ ಇಲ್ಲವೆಂದಾಗ, ಜನರೇ ಸ್ವಪ್ರೇರಣೆಯಿಂದ ಮಾಸ್ಕ್ ಹಾಕುತ್ತಿಲ್ಲ. ಆಮೆರಿಕಾದ 6 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಎನ್ನುವುದನ್ನು ರದ್ದು ಮಾಡಿದ್ದರು. ಆದರೂ, ಜನರು ಮಾಸ್ಕ್ ಹಾಕುತ್ತಿದ್ದರು. ಏಕೆಂದರೇ, ಆಗ 6 ರಾಜ್ಯಗಳಲ್ಲಿ ಕೊರೊನಾ ಕೇಸ್ ಕಡಿಮೆಯಾಗಿರಲಿಲ್ಲ. ಅಂದರೇ, ಜನರೇ ಕೊರೊನಾ ಕೇಸ್ ಗಳ ಏರಿಕೆ-ಇಳಿಕೆಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳುವಷ್ಟು ಪ್ರಜ್ಞಾವಂತರಾಗಿದ್ದಾರೆ. ಆದರೇ, ಭಾರತದಲ್ಲಿ ದಂಡ ವಿಧಿಸುವ ಭಯದಿಂದ ಮಾಸ್ಕ್ ಧರಿಸುವ ಸ್ಥಿತಿ ಇದೆ.

ಭಾರತದಲ್ಲಿ 185 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ;  ಮಾಸ್ಕ್​ ಧರಿಸಬೇಕಾ, ಬೇಡವಾ? ನಿರ್ಧಾರ ಮಾಸ್​ಗೆ ಬಿಟ್ಟದ್ದು!
Follow us
S Chandramohan
| Updated By: ಸಾಧು ಶ್ರೀನಾಥ್​

Updated on:Apr 11, 2022 | 6:45 PM

ಭಾರತದಲ್ಲಿ ಮಹಾರಾಷ್ಟ್ರ ಹಾಗೂ ದೆಹಲಿ ಸರ್ಕಾರಗಳು ಕೋವಿಡ್ ವಿರುದ್ಧ ಜನರು ಮಾಸ್ಕ್ ಧರಿಸುವುದನ್ನು ಜನರ ವಿವೇಚನೆಗೇ ಬಿಟ್ಟಿವೆ. ಜನರು ಮಾಸ್ಕ್ ಧರಿಸದೇ ಇದ್ದರೆ ಯಾವುದೇ ದಂಡ ವಿಧಿಸಲ್ಲ ಎಂದು ಎರಡೂ ಸರ್ಕಾರಗಳು ಹೇಳಿವೆ. ಆದರೆ, ದೇಶಾದ್ಯಂತ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿಲ್ಲ. ಈಗಲೂ ಮಾಸ್ಕ್ ಧರಿಸಬೇಕೆ, ಬೇಡವೇ ಎಂಬ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಎರಡು ವಾದಗಳನ್ನು ಈಗ ನಿಮ್ಮ ಮುಂದೆ ಇಡುತ್ತೀವಿ, ನೋಡಿ.

ಮಾಸ್ಕ್ ಕಡ್ಡಾಯ ಬೇಡ ಎಂದ ತಜ್ಞರು ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ಮಾಸ್ಕ್ ಕಡ್ಡಾಯ ಎನ್ನುವುದನ್ನು ತೆರವುಗೊಳಿಸುವುದು ಸೂಕ್ತ. ಕೊರೊನಾ ಕೇಸ್, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಸಾರ್ವಕಾಲಿಕ ಕುಸಿತವಾಗಿದೆ. ಹೀಗಾಗಿ ಮಾಸ್ಕ್ ಬೇಡ. ದೇಶದಲ್ಲಿ ನಿತ್ಯ ಸರಾಸರಿ 1 ಸಾವಿರ ಕೊರೊನಾ ಕೇಸ್ ಮಾತ್ರ ಪತ್ತೆಯಾಗುತ್ತಿವೆ. ಆರೋಗ್ಯ ವ್ಯವಸ್ಥೆ ಮೇಲೆ ಯಾವುದೇ ಒತ್ತಡ ಇಲ್ಲ. ಈಗ ಮಾಸ್ಕ್ ಕಡ್ಡಾಯ ಮಾಡಿರುವುದನ್ನು ಕೈ ಬಿಡದೇ ಇನ್ಯಾವಾಗ ಕೈ ಬಿಡಲು ಸಾಧ್ಯ. ಕೊರೊನಾ ಸೋಂಕಿನ ಪ್ರಮಾಣ ಕೂಡ ಬಾರಿ ಕುಸಿದಿದೆ. 185 ಕೋಟಿ ಡೋಸ್ ಗಿಂತ ಹೆಚ್ಚಿನ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಹೀಗಾಗಿ ಮಾಸ್ಕ್ ಧರಿಸುವುದನ್ನು ಈಗಲೇ ಕೈ ಬಿಡುವುದು ಒಳ್ಳೆಯದು. 2020ರ ಆರಂಭದಲ್ಲಿ ಕೊರೊನಾ ವೈರಸ್ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಉತ್ತಮವಾಗಿ ಕೊರೊನಾ ನಿಯಂತ್ರಣ ಮಾಡಲಾಗಿದೆ. ವ್ಯಾಕ್ಸಿನ್ ಇದೆ. ಆಸ್ಪತ್ರೆ ಮೂಲಸೌಕರ್ಯ ಅಭಿವೃದ್ದಿಯಾಗಿದೆ. ಕೊರೊನಾ ಕೇಸ್ ಹೆಚ್ಚಾದಾಗ, ಜನರೇ ಸ್ವಯಂಪ್ರೇರಣೆಯಿಂದ ಮಾಸ್ಕ್ ಹಾಕಿದ್ದರು. ಸರ್ಕಾರದ ಆದೇಶವೇ ಬೇಕಾಗಿರಲಿಲ್ಲ. ಕೊರೊನಾ ಕೇಸ್ ಹೆಚ್ಚಾದಾಗ, ಶಾಪಿಂಗ್ ಮಾಲ್ ತೆರೆದಿದ್ದರೂ, ಜನರು ಮಾಲ್ ಗೆ ಹೋಗುತ್ತಿರಲಿಲ್ಲ. ಬಸ್ ಗಳಲ್ಲಿ ಓಡಾಡುತ್ತಿರಲಿಲ್ಲ. ಯಾವುದೇ ಸರ್ಕಾರದ ಆದೇಶ ಇಲ್ಲದಿದ್ದರೂ, ಜನರು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದರು.

ಮಾಸ್ಕ್ ಹಾಕುವ ಅಗತ್ಯ ಇಲ್ಲವೆಂದಾಗ, ಜನರೇ ಸ್ವಪ್ರೇರಣೆಯಿಂದ ಮಾಸ್ಕ್ ಹಾಕುತ್ತಿಲ್ಲ. ಆಮೆರಿಕಾದ 6 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಎನ್ನುವುದನ್ನು ರದ್ದು ಮಾಡಿದ್ದರು. ಆದರೂ, ಜನರು ಮಾಸ್ಕ್ ಹಾಕುತ್ತಿದ್ದರು. ಏಕೆಂದರೇ, ಆಗ 6 ರಾಜ್ಯಗಳಲ್ಲಿ ಕೊರೊನಾ ಕೇಸ್ ಕಡಿಮೆಯಾಗಿರಲಿಲ್ಲ. ಅಂದರೇ, ಜನರೇ ಕೊರೊನಾ ಕೇಸ್ ಗಳ ಏರಿಕೆ-ಇಳಿಕೆಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳುವಷ್ಟು ಪ್ರಜ್ಞಾವಂತರಾಗಿದ್ದಾರೆ. ಜನರೇ ಪ್ರಬುದ್ಧರಾಗಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿದರೇ, ಕೊರೊನಾ ಕೇಸ್ ಕಡಿಮೆಯಾಗುತ್ತೆ. ಆದರೇ, ಭಾರತದಲ್ಲಿ ದಂಡ ವಿಧಿಸುವ ಭಯದಿಂದ ಮಾಸ್ಕ್ ಧರಿಸುವ ಸ್ಥಿತಿ ಇದೆ.

ಆದರೇ, ಮಾಸ್ಕ್ ನಿಂದಲೇ ಕೊರೊನಾ ಕೇಸ್ ಕಡಿಮೆಯಾಗಿವೆ ಎನ್ನುವುದಕ್ಕೆ ಸೂಕ್ತ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಭಾರತದಲ್ಲಿ ಮಹಾರಾಷ್ಟ್ರ, ತೆಲಂಗಾಣ, ದೆಹಲಿ, ಪಶ್ಚಿಮ ಬಂಗಾಳ, ಚಂಢೀಗಡ ಕೊರೊನಾ ನಿಯಮ ಸಡಿಲಿಸಿವೆ. ಮಹಾರಾಷ್ಟ್ರ, ದೆಹಲಿ ಮಾಸ್ಕ್ ಧರಿಸದೇ ಇದ್ದರೇ, ದಂಡ ವಿಧಿಸುವುದನ್ನು ಕೈ ಬಿಟ್ಟಿವೆ. ವೈರಸ್ ಹರಡುವುದು ಶೇ.99ರಷ್ಟು ನಿಂತಿದೆ. ಈಗಲೂ ಏಕೆ ಮಾಸ್ಕ್ ಧರಿಸಬೇಕು? ಈಗ ಮಾಸ್ಕ್ ಕಡ್ಡಾಯ ಮಾಡಿರುವುದನ್ನು ತೆಗೆದು ಹಾಕದೇ ಇದ್ದರೇ, ಮುಂದಿನ ಭಾರಿ ಮತ್ತೊಂದು ಕೊರೊನಾ ಅಲೆ ಬಂದಾಗ ಜನರು ಮಾಸ್ಕ್ ಅನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲ್ಲ. ಕೊರೊನಾ ಕೇಸ್ ಹೆಚ್ಚಾದಾಗ, ಮಾಸ್ಕ್ ಧರಿಸಿ ಎಂದು ನಿರ್ದೇಶನ ನೀಡಬಹುದು.

ಮಾಸ್ಕ್ ರದ್ದು ವಿರುದ್ದದ ವಾದವೇನು ಗೊತ್ತಾ?

ಕೊರೊನಾ ಸಂಪೂರ್ಣವಾಗಿ ಕಣ್ಮರೆಯಾಗಿದೆಯೇ? ಇಲ್ಲ, ಹೀಗಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ತೆಗೆಯುವುದು ಸ್ವಾತಂತ್ರ್ಯದ ಸಂಕೇತ. ಮಾಸ್ಕ್ ಬಲವಂತದಿಂದ ಹಾಕುವಂತೆ ಮಾಡಲಾಗುತ್ತಿದ್ದರೇ, ಜನರೇ ನಿರ್ಧರಿಸಲಿ. ವಯಸ್ಸಾದವರು, ಮಾಸ್ಕ್ ಧರಿಸಲು ನಿರ್ಧರಿಸಿದರೇ, ಅವರನ್ನು ಏಕೆ ತಡೆಯಬೇಕು. ಭಾರತದಲ್ಲಿ ಎಲ್ಲೆಲ್ಲೂ ಜನದಟ್ಟಣೆ, ದುರ್ಬಲರನ್ನು ಕೊರೊನಾಗೆ ತುತ್ತಾಗುವಂಥವರನ್ನು ಕೊರೊನಾದಿಂದ ಮಾಸ್ಕ್‌ ರಕ್ಷಿಸುತ್ತಾವೆ.

ಈಗಾಗಲೇ ಎಕ್ಸ್ ಇ, ಎಕ್ಸ್ ಪ್ರಭೇದಗಳು ಪತ್ತೆಯಾಗಿವೆ, ಮುಂದೆ ಯಾವ ಪ್ರಭೇದ ಬರುತ್ತೋ, ಅದರ ಪರಿಣಾಮ ಏನು ಎಂಬುದು ಗೊತ್ತಿಲ್ಲ. ಹೀಗಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸುವುದರಿಂದ ಕೊರೊನಾ ಹರಡದಂತೆ ತಡೆಯಬಹುದು. ಹೀಗಾಗಿ ಮಾಸ್ಕ್ ಧರಿಸಬೇಕು. ವಾಲೆಂಟರಿಯಾಗಿ ಜನರು ಮಾಸ್ಕ್ ಧರಿಸುವಂತೆ ಮಾಡಬೇಕು. ಮಾಸ್ಕ್ ನಿಂದಾಗಿಯೇ ಕೊರೊನಾ ಕೇಸ್ ಕುಸಿತವಾದವು. ಮಾಸ್ಕ್ ಬಳಸ ಬೇಡಿ ಎಂದು ಹೇಳಿದರೇ, ಯಾವುದೇ ಪ್ರಯೋಜನ ಇಲ್ಲ. ಮಾಸ್ಕ್ ಬಳಕೆ ಖುಷಿ ಕೊಡಲ್ಲ. ಆದರೇ, ಕೊರೊನಾ ರಿಸ್ಕ್ ಅನ್ನು ಮಾಸ್ಕ್ ಗಳು ಕಡಿಮೆ ಮಾಡ್ತಾವೆ. ಮಾಸ್ಕ್ ಧರಿಸುವುದು ಟ್ಯಾಬೂ ಆಗಬಾರದು, ಮಾಸ್ಕ್ ಧರಿಸುವುದು ಮುನ್ನೆಚ್ಚರಿಕೆಯ ಕ್ರಮ. ಶೀತ, ಕಫ ಇದ್ದವರು ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದು ಮಾಸ್ಕ್ ಧರಿಸುವುದನ್ನು ರದ್ದುಪಡಿಸುವುದರ ವಿರುದ್ಧ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Published On - 6:41 pm, Mon, 11 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ