ಕ್ಯಾನ್ಸರ್​ ಪತ್ತೆ ಹೇಗೆ? ಆರಂಭಿಕ ಲಕ್ಷಣಗಳ ಕುರಿತು ಉಪಯುಕ್ತ ಮಾಹಿತಿ

ಕ್ಯಾನ್ಸರ್ ಎಂಬುದು ನಮ್ಮ ದೇಹದಲ್ಲಿನ ಜೀವಕೋಶಗಳ ಬೆಳವಣಿಗೆಯಾಗಿದ್ದು ಅದು ನಿಯಂತ್ರಣ ಕಳೆದುಕೊಂಡು ಒಂದೇ ಗಾತ್ರದಲ್ಲಿ ಬೆಳೆಯುತ್ತದೆ. ಇದು ಅಂಗಾಂಶಗಳ ಗುಂಪಾಗಿದ್ದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.

ಕ್ಯಾನ್ಸರ್​ ಪತ್ತೆ ಹೇಗೆ? ಆರಂಭಿಕ ಲಕ್ಷಣಗಳ ಕುರಿತು ಉಪಯುಕ್ತ ಮಾಹಿತಿ
ಕ್ಯಾನ್ಸರ್
Follow us
TV9 Web
| Updated By: ನಯನಾ ರಾಜೀವ್

Updated on:May 09, 2022 | 5:54 PM

ಕ್ಯಾನ್ಸರ್ ಎಂಬುದು ನಮ್ಮ ದೇಹದಲ್ಲಿನ ಜೀವಕೋಶಗಳ ಬೆಳವಣಿಗೆಯಾಗಿದ್ದು ಅದು ನಿಯಂತ್ರಣ ಕಳೆದುಕೊಂಡು ಒಂದೇ ಗಾತ್ರದಲ್ಲಿ ಬೆಳೆಯುತ್ತದೆ. ಇದು ಅಂಗಾಂಶಗಳ ಗುಂಪಾಗಿದ್ದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಒಂದು ಮಾರಣಾಂತಿಕ ಗಡ್ಡೆಯಾಗಿದ್ದರೆ ಮತ್ತೊಂದು ಹಾನಿಕರವಲ್ಲದ ಗಡ್ಡೆಯಾಗಿದೆ. ಮಾರಣಾಂತಿಕ ಗಡ್ಡೆಯು ತುಂಬಾ ಅಪಾಯಕಾರಿಯಾಗಿದ್ದು, ಪ್ರಾಣವನ್ನೇ ಬಲಿ ತೆಗೆದುಕೊಳ್ಳಬಹುದು, ಮತ್ತೊಂದು ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಬಹುದಾಗಿದೆ. ಅಪಾಯಕಾರಿ ಗಡ್ಡೆಯು ದೇಹದ ಇತರೆ ಭಾಗಕ್ಕೂ ಹರಡಬಹುದಾಗಿದೆ. ಮತ್ತೊಂದು ಗೆಡ್ಡೆ ಹಾಗಲ್ಲ. ಇದು ಹರಡುವುದಿಲ್ಲ ಮತ್ತು ಬೇರೆ ಅಂಗಾಂಶಗಳ ಮೇಲೆ ದಾಳಿ ಮಾಡುವುದಿಲ್ಲ. ಇವು ಸಾಂದರ್ಭಿಕವಾಗಿ ದೊಡ್ಡದಾಗುತ್ತವೆ. ಇವುಗಳನ್ನು ಆಪರೇಷನ್ ಮಾಡಿ ತೆಗೆದರೆ ಮತ್ತೆ ಬೆಳೆಯುವುದಿಲ್ಲ.

ಕ್ಯಾನ್ಸರ್​ನ ಲಕ್ಷಣಗಳು

  1. ಅಸಹಜ ರಕ್ತಸ್ರಾವ: ಅಸಹಜ ರಕ್ತಸ್ರಾವ ಅತ್ಯಂತ ಮಾರಕವಾಗಿದ್ದು, ಕೆಮ್ಮುವಾಗ ರಕ್ತ, ಮೂತ್ರ ವಿಸರ್ಜನೆ ವೇಳೆ ರಕ್ತ ಸ್ರಾವ ನಿರ್ಲಕ್ಷಿಸುವುದು ಅಪಾಯಕಾರಿ. ಅಸಹಜ ಮುಟ್ಟು ಕೂಡಾ ಡೇಂಜರಸ್.
  2. ನಿರಂತರ ಆಯಾಸ: ಲುಕೇಮಿಯಾ, ಕರುಳು ಅಥವಾ ಹೊಟ್ಟೆಯ ಕ್ಯಾನ್ಸರ್ ಗೀಡಾದವರಿಗೆ ಹೆಚ್ಚಾಗಿ ನಿರಂತರ ಆಯಾಸ ಭಾದಿಡುತ್ತದೆ. ಇದು ಸಾಮಾನ್ಯ ಆಯಾಸಕ್ಕಿಂತಲೂ ಭಿನ್ನವಾಗಿರುತ್ತದೆ. ಸರಿಯಾಗಿ ನಿದ್ದೆ ಬಂದಿದ್ದರೂ ಈ ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ದೇಹದಲ್ಲಿ ರಕ್ತ ಕಡಿಮೆಯಾದರೂ ಆಯಾಸ ಕಾಣಿಸಿಕೊಳ್ಳುತ್ತದೆ.
  3. ದೇಹದ ತೂಕದಲ್ಲಿ ಗಣನೀಯ ಇಳಿಕೆ: ಕ್ಯಾನ್ಸರ್ ಇರುವವರ ದೇಹದ ತೂಕವು ಗಣನೀಯವಾಗಿ ಇಳಿಯಲಾರಂಭಿಸುತ್ತದೆ. ಒಂದು ವೇಳೆ ನೀವು ವ್ಯಾಯಾಮ, ಡಯಟ್ ಮಾಡದೇ ತೂಕ ಕಳೆದುಕೊಳ್ಳುತ್ತಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಒಂದೇ ಬಾರಿ 10 ಪೌಂಡ್‌ಗಿಂತಲೂ ಹೆಚ್ಚು ತೂಕ ಕಳೆದುಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
  4. ಚರ್ಮ ಗಟ್ಟಿಯಾಗುವುದು: ನಿಮ್ಮ ದೇಹವನ್ನು ಪ್ರತಿದಿನ ಪರೀಕ್ಷಿಸಿ. ಚರ್ಮ ಗಟ್ಟಿಯಾಗುವುದು ಅಥವಾ ಗಂಟುಗಳಾಗುವುದು ಕ್ಯಾನ್ಸರ್‌ನ ಲಕ್ಷಣವಾಗಿದೆ. ಗಂಟುಗಳು ಕಂಡು ಬಂದರೆ ಅವುಗಳ ಆಕಾರ ಬದಲಾಗುತ್ತಿದೆಯೇ ಎಂಬುವುದನ್ನು ಸೂಕ್ಷ್ಮವಾಗಿ ಗಮನಿಸಿ. ಯಾವುದೇ ಬದಲಾವಣೆಗಳು ಕಂಡು ಬಂದಲ್ಲಿ ತಡಮಾಡದೇ ವೈದ್ಯರ ಬಳಿ ತೆರಳಿ.
  5. ನಿರಂತರ ನೋವು: ಸಾಮಾನ್ಯವಾಗಿ ನೋವು ಎಲ್ಲಾ ರೀತಿಯ ಕಾಯಿಲೆಗಳಲ್ಲೂ ಕಾಣಿಸಿಕೊಳ್ಳುತ್ತದೆ, ಇದು ಕ್ಯಾನ್ಸರ್ ಕಾಯಿಲೆಗೀಡಾದವರಲ್ಲೂ ಕಂಡು ಬರುತ್ತದೆ. ಒಂದು ವೇಳೆ ನೋವು ಸಹಿಸಲು ಅಸಾಧ್ಯವಾದರೆ, ಕಡಿಮೆಯಾಗದಿದ್ದಲ್ಲ ಅಥವಾ ಚಿಕಿತ್ಸೆ ಪಡೆದರೂ ಕಡಿಮೆಯಾಗದಿದ್ದಲ್ಲ ಎಚ್ಚರಿಕೆ ಎಂಬುವುದನ್ನು ಮರೆಯದಿರಿ. ದೇಹದ ಒಂದು ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡರೆ ಕ್ಯಾನ್ಸರ್ ಲಕ್ಷಣ ಎನ್ನಬಹುದು.
  6. ಪದೇ ಪದೇ ಭಾದಿಸುವ ಜ್ವರ: ಕ್ಯಾನ್ಸರ್​ನಿಂದ ಬಳಲುವ ಬಹುತೇಕ ಎಲ್ಲರಲ್ಲೂ ಪದೇ ಪದೇ ಜ್ವರ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ನಿಮ್ಮ ರೋಗನಿರೋಧಕ ಕಣಗಳಿಗೆ ಕ್ಯಾನ್ಸರ್ ಬಾಧಿಸಿದರೆ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಅಡ್ವಾನ್ಸ್ ಡ್ ಸ್ಟೇಜ್ ಕ್ಯಾನ್ಸರ್ ನಲ್ಲಿ ಜ್ವರ ಸಾಮಾನ್ಯವಾಗಿದ್ದರೂ, ರಕ್ತದ ಕ್ಯಾನ್ಸರ್‌ನ ಪ್ರಾಥಮಿಕ ಹಂತದಲ್ಲೂ ಜ್ವರ ಕಾಣಿಸಿಕೊಳ್ಳುತ್ತದೆ ಎಂಬುವುದು ಗಮನಾರ್ಹ. ಯಾವುದೇ ಸಂದರ್ಭದಲ್ಲೂ ಜ್ವರ ನಿಮ್ಮನ್ನು ಬಾಧಿಸುತ್ತಿದ್ದರೆ, ಇದಕ್ಕೆ ಕಾರಣವೇನು ಎಂದು ತಿಳಿಯುತ್ತಿಲ್ಲವೆಂದಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
  7. ಆಹಾರ ಸೇವಿಸಲು ಸಮಸ್ಯೆ: ನಿರಂತರವಾಗಿ ಅಜೀರ್ಣತೆ ಬಾಧಿಸುತ್ತಿದ್ದರೆ ಎಚ್ಚರ ವಹಿಸುವುದು ಉತ್ತಮ. ಸಾಮಾನ್ಯವಾಗಿ ಅಜೀರ್ಣತೆ ಕಾಡುತ್ತದೆ. ಆದರೆ ಈ ಕುರಿತಾಗಿ ಗಮನ ನೀಡಿದರೆ ಒಳ್ಳೆಯದು
  8. ಒಣ ಕೆಮ್ಮು ಅಥವಾ ಕಫಯುಕ್ತ ಕೆಮ್ಮು: ವಿರಳವಾಗಿ ಕಾಣಿಸಿಕೊಳ್ಳುವ ಕೆಮ್ಮು ಕಫ ಸಾಮಾನ್ಯ. ಆದರೆ ಪದೇ ಪದೇ ಈ ಸಮಸ್ಯೆ ಬಾಧಿಸುವುದು ಬಹಳ ಡೇಂಜರ್. ಎಲ್ಲವೂ ಕ್ಯಾನ್ಸರ್ ಲಕ್ಷಣ ಎನ್ನಲು ಸಾಧ್ಯವಿಲ್ಲ. ಆದರೆ ವೈದ್ಯರಲ್ಲಿ ತೋರಿಸುವುದು ಸೂಕ್ತ. ಕ್ಯಾನ್ಸರ್ ತಡೆಗಟ್ಟುವಿಕೆ ಎಂಬುದು ಕ್ಯಾನ್ಸರ್ ಸಂಭವಿಸುವ ಅಪಾಯವನ್ನು ಕಡಿಮೆಗೊಳಿಸಲು ತೆಗೆದುಕೊಳ್ಳುವ ಒಂದು ಕ್ರಮವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು, ಕ್ಯಾನ್ಸರ್-ಉಂಟುಮಾಡುವ ವಸ್ತುಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು, ಮತ್ತು ಕ್ಯಾನ್ಸರ್ ಅನ್ನು ವೃದ್ಧಿಗೊಳ್ಳದಂತೆ ತಡೆಯುವ ಔಷಧಿಗಳು ಅಥವಾ ಲಸಿಕೆಗಳನ್ನು ತೆಗೆದುಕೊಳ್ಳುವುದು ಇವೆಲ್ಲವೂ ಸಹ ಇದರಲ್ಲಿ ಸೇರಿದೆ.

ಆರೋಗ್ಯಕ್ಕೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Mon, 9 May 22