ಶೀಘ್ರದಲ್ಲೇ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರಂತೆ ರಷ್ಯಾ ಅಧ್ಯಕ್ಷ ಪುಟಿನ್; ಉಕ್ರೇನ್ ಯುದ್ಧ ಮುನ್ನಡೆಸುವ ಹೊಣೆ ಯಾರಿಗೆ?
ತಾವು ಚಿಕಿತ್ಸೆಗೆ ಹೋದ ಸಂದರ್ಭದಲ್ಲಿ, ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧವನ್ನು ಮುನ್ನಡೆಸುವ ಹೊಣೆಯನ್ನು ಪುಟಿನ್ ಅವರು ರಷ್ಯಾದ ಭದ್ರತಾ ಮಂಡಳಿ ಮುಖ್ಯಸ್ಥ, ಮಾಜಿ ಎಫ್ಎಸ್ಬಿ ಕಮಾಂಡರ್ ನಿಕೊಲಾಯ್ ಪಟ್ರುಶೆವ್ ಅವರಿಗೆ ವಹಿಸಲಿದ್ದಾರೆ ಎನ್ನಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅನಾರೋಗ್ಯದ ಬಗ್ಗೆ ಈಗಾಗಲೇ ಹಲವು ಊಹಾಪೋಹಗಳು ಹಬ್ಬಿವೆ. ಪುಟಿನ್ ಆರೋಗ್ಯ ಸರಿಯಿಲ್ಲ, ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ದಿ ಡೈಲಿ ಮೇಲ್ ಸೇರಿ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಲೇಇವೆ. ಈ ಮಧ್ಯೆ ಈಗ ವಿಯಾನ್ ಮತ್ತೊಂದು ವರದಿ ಪ್ರಕಟಿಸಿದ್ದು, ಅದರಲ್ಲಿ ವ್ಲಾದಿಮಿರ್ ಪುಟಿನ್ ಕೆಲವೇ ದಿನಗಳಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಿದೆ. ವ್ಲಾದಿಮಿರ್ ಪುಟಿನ್ ಕ್ಯಾನ್ಸರ್ ಆಪರೇಶನ್ಗೆ ಒಳಗಾಗಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣದ ಪ್ರಮಾಣವೂ ಕಡಿಮೆಯಾಗಬಹುದು. ಕೆಲವು ದಿನಗಳ ಮಟ್ಟಿಗೆ ಉಕ್ರೇನ್ ಮೇಲಿನ ಹಿಡಿತವನ್ನು ಸಡಿಲಿಸುವಂತೆ ಅವರು ರಷ್ಯಾ ಸೇನೆಗೆ ಆದೇಶ ಹೊರಡಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳಿಂದಲೇ ಮಾಹಿತಿ ಸಿಕ್ಕಿದ್ದಾಗಿ ವಿಯಾನ್ ಹೇಳಿದೆ.
ಪುಟಿನ್ ಶಸ್ತ್ರಚಿಕಿತ್ಸೆಗೆ ಹೋದಾಕ್ಷಣ ಯುದ್ಧನಿಲ್ಲುವುದಿಲ್ಲ. ಆದರೆ ತೀವ್ರತೆ ಸ್ವಲ್ಪ ಕಡಿಮೆಯಾಗಬಬಹುದು. ಇನ್ನು ತಾವು ಚಿಕಿತ್ಸೆಗೆ ಹೋದ ಸಂದರ್ಭದಲ್ಲಿ, ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧವನ್ನು ಮುನ್ನಡೆಸುವ ಹೊಣೆಯನ್ನು ಪುಟಿನ್ ಅವರು ರಷ್ಯಾದ ಭದ್ರತಾ ಮಂಡಳಿ ಮುಖ್ಯಸ್ಥ, ಮಾಜಿ ಎಫ್ಎಸ್ಬಿ ಕಮಾಂಡರ್ ನಿಕೊಲಾಯ್ ಪಟ್ರುಶೆವ್ ಅವರಿಗೆ ವಹಿಸಲಿದ್ದಾರೆ ಎಂದೂ ಹೇಳಲಾಗಿದೆ. ಪಟ್ರುಶೆವ್ಗೆ 70 ವರ್ಷ ವಯಸ್ಸಾಗಿದ್ದು, ಯುದ್ಧತಂತ್ರದ ವಾಸ್ತುಶಿಲ್ಪಿ ಎಂದೇ ಖ್ಯಾತರಾಗಿದ್ದಾರೆ.
ಪುಟಿನ್ ಹೊಟ್ಟೆಗೆ ಸಂಬಂಧಪಟ್ಟ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಹಾಗೇ, 18 ತಿಂಗಳಿಂದಲೂ ಅವರಿಗೆ ಪಾರ್ಕಿನ್ಸನ್ ಕಾಯಿಲೆ ಕಾಡುತ್ತಿದೆ ಎಂದು ಖ್ಯಾತ ಟೆಲಿಗ್ರಾಮ್ ಚಾನೆಲ್ ಜನರಲ್ ಎಸ್ವಿಆರ್ ವರದಿ ಮಾಡಿದೆ. ಇದನ್ನು ರಷ್ಯಾ ಸರ್ಕಾರದ ನಂಬಲರ್ಹ ಮೂಲಗಳೇ ತಿಳಿಸಿದ್ದಾಗಿಯೂ ಹೇಳಲಾಗಿದೆ. ಪುಟಿನ್ ಸರ್ಜರಿಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಆದರೆ ಎಷ್ಟಾಗತ್ತೋ ಅಷ್ಟು ಬೇಗ ಸರ್ಜರಿಗೆ ಒಳಗಾಗುವಂತೆ ವೈದ್ಯರು ಅವರಿಗೆ ಸೂಚಿಸಿದ್ದಾರೆ ಎಂದೂ ಹೇಳಲಾಗಿದೆ. ಇನ್ನು ಮೇ 9ರಂದು ರಷ್ಯಾ, ಎರಡನೇ ಯುದ್ಧದಲ್ಲಿ ಗೆಲುವು ಸಾಧಿಸಿದ ದಿನವನ್ನು, ರೆಡ್ಸ್ಕ್ವೇರ್ನಲ್ಲಿ ಆಚರಿಸಲಿದೆ.
ಇದನ್ನೂ ಓದಿ: Akshaya Tritiya Gold Purchase: ಅಕ್ಷಯ ತೃತೀಯಕ್ಕೆ ಭೌತಿಕ ಚಿನ್ನ ಖರೀದಿ ಉತ್ತಮವೋ ಅಥವಾ ಗೋಲ್ಡ್ ಇಟಿಎಫ್?