Akshaya Tritiya Gold Purchase: ಅಕ್ಷಯ ತೃತೀಯಕ್ಕೆ ಭೌತಿಕ ಚಿನ್ನ ಖರೀದಿ ಉತ್ತಮವೋ ಅಥವಾ ಗೋಲ್ಡ್ ಇಟಿಎಫ್?

ಅಕ್ಷಯ ತೃತೀಯ ಮೇ 3ನೇ ತಾರೀಕಿನಂದು ಇದೆ. ಭಾರತೀಯರಲ್ಲಿ ಈ ದಿನ ಚಿನ್ನ ಖರೀದಿಸುವ ಸಂಪ್ರದಾಯ ಇದೆ. ಚಿನ್ನವು ಭೌತಿಕ ಸ್ವರೂಪದಲ್ಲಿ ಖರೀದಿಸುವುದು ಉತ್ತಮವೋ ಅಥವಾ ಗೋಲ್ಡ್ ಇಟಿಎಫ್ ಸರಿಯೋ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Akshaya Tritiya Gold Purchase: ಅಕ್ಷಯ ತೃತೀಯಕ್ಕೆ ಭೌತಿಕ ಚಿನ್ನ ಖರೀದಿ ಉತ್ತಮವೋ ಅಥವಾ ಗೋಲ್ಡ್ ಇಟಿಎಫ್?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 02, 2022 | 11:58 AM

ಅಕ್ಷಯ ತೃತೀಯ (Akshaya Tritiya) ಸೇರಿ ಇತರ ಶುಭ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವುದು ಭಾರತೀಯ ಸಂಪ್ರದಾಯದ ಒಂದು ಭಾಗ ಆಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಂಗಳಕರ ದಿನಗಳಲ್ಲಿ ಚಿನ್ನವನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಈ ವರ್ಷ ಅಕ್ಷಯ ತೃತೀಯ ಮೇ 3ನೇ ತಾರೀಕಿನಂದು ಇದೆ. ಜನರು ನಾಣ್ಯಗಳಿಂದ ಹಿಡಿದು, ಆಭರಣ- ಡಿಜಿಟಲ್ ಚಿನ್ನದವರೆಗೆ ಎಲ್ಲ ರೂಪದ ಚಿನ್ನವನ್ನು ಖರೀದಿಸುತ್ತಾರೆ. ಆದರೆ ಬದಲಾಗುತ್ತಿರುವ ಸಮಯದೊಂದಿಗೆ ಹೂಡಿಕೆದಾರರು ಭೌತಿಕ ಚಿನ್ನಕ್ಕಿಂತ ಚಿನ್ನದ ಇಟಿಎಫ್ ಅನ್ನು ಹೆಚ್ಚು ಆರಿಸಿಕೊಳ್ಳುತ್ತಿದ್ದಾರೆ.

ಚಿನ್ನದ ಇಟಿಎಫ್ Vs ಭೌತಿಕ ಚಿನ್ನ ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್‌ಗಳ ಉತ್ಪನ್ನ ಅಭಿವೃದ್ಧಿ ಮತ್ತು ಕಾರ್ಯತಂತ್ರದ ಮುಖ್ಯಸ್ಥ ಚಿಂತನ್ ಹರಿಯಾ ಅವರು ಮಾತನಾಡಿ, ಗೋಲ್ಡ್ ಇಟಿಎಫ್‌ಗಳು ಕೆಲವು ವಿಭಿನ್ನ ಪ್ರಯೋಜನಗಳನ್ನು ನೀಡುವುದರಿಂದ ಇದರ ಖರೀದಿ ದೊಡ್ಡದಾಗಿದೆ. ಹೂಡಿಕೆದಾರರು ಶೇಖರಣೆ, ಕಳ್ಳತನದ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಚಿನ್ನವು ಡಿಮ್ಯಾಟ್ ರೂಪದಲ್ಲಿ ಇರುತ್ತದೆ ಮತ್ತು ಮೇಕಿಂಗ್ ಶುಲ್ಕಗಳು ಮತ್ತು ಇತರ ಸಂಬಂಧಿತ ವೆಚ್ಚಗಳು ಇರುವುದಿಲ್ಲ ಎನ್ನುತ್ತಾರೆ.

“ಈ ಅಕ್ಷಯ ತೃತೀಯದಲ್ಲಿ ನೀವು ಚಿನ್ನವನ್ನು ಸ್ವಯಂ ಖರೀದಿಸಬಹುದು ಅಥವಾ ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು ಅಥವಾ ಗೋಲ್ಡ್ ಇಟಿಎಫ್ ಮೂಲಕ ಉಡುಗೊರೆಯಾಗಿ ನೀಡಬಹುದು. ಗೋಲ್ಡ್ ಇಟಿಎಫ್‌ನ ಒಂದು ಯೂನಿಟ್ 1 ಗ್ರಾಂ 99.50 ಚಿನ್ನಕ್ಕೆ ಸಮನಾಗಿರುತ್ತದೆ. ಈ ಯೂನಿಟ್ ಡಿಮೆಟಿರಿಯಲೈಸ್ಡ್ ರೂಪದಲ್ಲಿರುತ್ತವೆ. ಆದ್ದರಿಂದ ಇಲ್ಲಿ ಪ್ರಯೋಜನವೆಂದರೆ ಭೌತಿಕ ಚಿನ್ನಕ್ಕಿಂತ ಕನಿಷ್ಠ ಹೂಡಿಕೆಯು ತುಂಬಾ ಕಡಿಮೆ – ಹೂಡಿಕೆ ಉದ್ದೇಶದ ಸಂದರ್ಭದಲ್ಲಿ ಸಾಮಾನ್ಯವಾಗಿ ಕನಿಷ್ಠ 10 ಗ್ರಾಂ ಖರೀದಿಸಬೇಕಾಗುತ್ತದೆ,” ಎಂದು ಟ್ರೇಡ್‌ಸ್ಮಾರ್ಟ್‌ನ ಅಧ್ಯಕ್ಷ ವಿಜಯ್ ಸಿಂಘಾನಿಯಾ ಹೇಳುತ್ತಾರೆ.

ಗೋಲ್ಡ್ ಇಟಿಎಫ್‌ನ ಪ್ರಯೋಜನಗಳು ಟ್ರೇಡ್‌ಸ್ಮಾರ್ಟ್‌ನ ಅಧ್ಯಕ್ಷ ವಿಜಯ್ ಸಿಂಘಾನಿಯಾ ಅವರು ಭೌತಿಕ ಚಿನ್ನಕ್ಕಿಂತ ಚಿನ್ನದ ಇಟಿಎಫ್‌ಗಳನ್ನು ಖರೀದಿಸಲು ಏಕೆ ಆದ್ಯತೆ ನೀಡಬೇಕು ಎಂಬ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

1) ಕಂಪೆನಿಗಳ ಷೇರುಗಳಂತಹ ವಿನಿಮಯ ಕೇಂದ್ರಗಳಲ್ಲಿ ಈ ಯೂನಿಟ್​ಗಳನ್ನು ವ್ಯಾಪಾರ ಮಾಡುವುದರಿಂದ ನೀವು ಆನ್‌ಲೈನ್‌ನಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಆದ್ದರಿಂದ ಇಟಿಎಫ್‌ಗಳು ಭೌತಿಕ ಚಿನ್ನದಂತೆ ಲಿಕ್ವಿಡಿಟಿ ಹೊಂದಿರುತ್ತದೆ.

2) ಚಿನ್ನದ ಇಟಿಎಫ್‌ಗಳು ಅದರ ಬೆಲೆಯನ್ನು ಹೊಂದಿದ್ದು, ಭೌತಿಕ ಚಿನ್ನಕ್ಕಿಂತ ವಿಭಿನ್ನವಾಗಿ ದೇಶದಾದ್ಯಂತ ಒಂದೇ ಇರುತ್ತದೆ. ಭೌತಿಕ ಚಿನ್ನಕ್ಕೆ ವಿವಿಧ ನಗರಗಳಲ್ಲಿ ವಿಭಿನ್ನ ಬೆಲೆಗಳನ್ನು ನೋಡಬಹುದು.

3) ಭೌತಿಕ ಚಿನ್ನವನ್ನು ಆಭರಣದ ರೂಪದಲ್ಲಿ ಖರೀದಿಸುವಾಗ, ಮೇಕಿಂಗ್ ಚಾರ್ಜ್‌ಗಳ ರೂಪದಲ್ಲಿ ಶೇ 30ರ ವರೆಗೆ ಹೆಚ್ಚುವರಿ ಪಾವತಿಸಬೇಕಾಗಬಹುದು. ಗೋಲ್ಡ್ ಇಟಿಎಫ್‌ಗಳ ಸಂದರ್ಭದಲ್ಲಿ ವೆಚ್ಚದ ಅನುಪಾತವು ಸುಮಾರು ಶೇ 1 ಆಗಿದ್ದರೆ, ಬ್ರೋಕರೇಜ್ ಸುಮಾರು ಶೇ 0.5 ಆಗಿದೆ. ಖರೀದಿಸಿದ ಭೌತಿಕ ಚಿನ್ನದ ಮೌಲ್ಯವು ರೂ.30 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇ 1ರಷ್ಟು ಸಂಪತ್ತು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಚಿನ್ನದ ಇಟಿಎಫ್ ಹೋಲ್ಡಿಂಗ್​ಗೆ ಸಂಪತ್ತಿನ ತೆರಿಗೆ ಇರುವುದಿಲ್ಲ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Akshaya Tritiya 2022: ಅಕ್ಷಯ ತೃತೀಯದ ಪೂಜಾ ಸಮಯ, ಚಿನ್ನ ಖರೀದಿಗೆ ಶುಭ ಮುಹೂರ್ತದ ಕುರಿತು ಮಾಹಿತಿ ಇಲ್ಲಿದೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್