Unemployment: ಭಾರತದಲ್ಲಿ ಏಪ್ರಿಲ್ ತಿಂಗಳ ನಿರುದ್ಯೋಗ ದರ ಶೇ 7.83ಕ್ಕೆ ಏರಿಕೆ, ಪಟ್ಟಿಯ ಮೊದಲ ಸ್ಥಾನದಲ್ಲಿ ಹರ್ಯಾಣ
ಭಾರತದಲ್ಲಿ ನಿರುದ್ಯೋಗ ದರವು 2022ರ ಏಪ್ರಿಲ್ ತಿಂಗಳಲ್ಲಿ ಶೇ 7.83ಕ್ಕೆ ಏರಿಕೆ ಆಗಿದೆ. ಈ ಪೈಕಿ ಯಾವ ರಾಜ್ಯದಲ್ಲಿ ಅತಿ ಹೆಚ್ಚಿನ ನಿರುದ್ಯೋಗ ಇದೆ ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ನಿರುದ್ಯೋಗ (Unemployment) ದರವು ಮಾರ್ಚ್‌ನಲ್ಲಿ ಇದ್ದ ಶೇ 7.60 ಮಟ್ಟದಿಂದ ಏಪ್ರಿಲ್‌ನಲ್ಲಿ ಶೇ 7.83ಕ್ಕೆ ಏರಿದೆ. ವರದಿಯ ಪ್ರಕಾರ ಹರ್ಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಶೇ 34.5, ರಾಜಸ್ಥಾನದಲ್ಲಿ ಶೇ 28.8ರಷ್ಟು ದಾಖಲಾಗಿದೆ. ನಗರ ನಿರುದ್ಯೋಗ ದರವು ಹಿಂದಿನ ತಿಂಗಳಿನ ಶೇ 8.28ರಿಂದ ಏಪ್ರಿಲ್‌ನಲ್ಲಿ ಶೇ 9.22ಕ್ಕೆ ಏರಿದ್ದು, ಆದರೆ ಗ್ರಾಮೀಣ ನಿರುದ್ಯೋಗ ದರವು ಶೇ 7.29ರಿಂದ ಶೇ 7.18ಕ್ಕೆ ಇಳಿದಿದೆ ಎಂದು ಕೇಂದ್ರ ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುವ (CMIE) ದತ್ತಾಂಶವು ಮೇ 2ರಂದು ತೋರಿಸಿದೆ. ಮಂದಗತಿಯ ದೇಶೀಯ ಬೇಡಿಕೆ ಮತ್ತು ಹೆಚ್ಚುತ್ತಿರುವ ಬೆಲೆಗಳ ಮಧ್ಯೆ ನಿಧಾನಗತಿಯ ಆರ್ಥಿಕ ಚೇತರಿಕೆಯಿಂದಾಗಿ ಉದ್ಯೋಗಾವಕಾಶಗಳು ಹಾನಿಗೊಳಗಾಗಿವೆ ಎಂದು ವರದಿ ಹೇಳಿದೆ.
ಏಪ್ರಿಲ್ 28ರಂದು ಬಿಡುಗಡೆಯಾದ ತನ್ನ ತ್ರೈಮಾಸಿಕ ಉದ್ಯೋಗ ಸಮೀಕ್ಷೆಯಲ್ಲಿ (QES), ವ್ಯಾಪಾರ, ಉತ್ಪಾದನೆ ಮತ್ತು ಐಟಿ ಸೇರಿದಂತೆ ಒಂಬತ್ತು ಪ್ರಮುಖ ಕ್ಷೇತ್ರಗಳು ಅಕ್ಟೋಬರ್-ಡಿಸೆಂಬರ್ 2021ರ ಅವಧಿಯಲ್ಲಿ 4,00,000 ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಹೇಳಿದೆ. ಭಾರತದ ಚಿಲ್ಲರೆ ಹಣದುಬ್ಬರವನ್ನು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ದಿಂದ ಅಳೆಯಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಅದು ಶೇ 6.95ಕ್ಕೆ ಏರಿದೆ.
ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಭಾರತದ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 13.11ರಿಂದ ಮಾರ್ಚ್‌ನಲ್ಲಿ ಶೇಕಡಾ 14.55ಕ್ಕೆ ತಲುಪಿ, ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಮೇ 1ರಂದು ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಮಾಸಿಕ ಸಂಗ್ರಹವು ಏಪ್ರಿಲ್ 2022ರಲ್ಲಿ ಸಾರ್ವಕಾಲಿಕ ಗರಿಷ್ಠ 1.68 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ, ವಿದ್ಯಾರ್ಥಿಗಳು ಅದರ ಬಗ್ಗೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಬೇಕು: ದೇವನೂರು ಮಹಾದೇವ