ಕೂಡಲೇ ಯುದ್ಧವಿರಾಮ ಘೋಷಿಸಿ ಹಿಂಸಾಚಾರ ನಿಲ್ಲಿಸುವಂತೆ ವ್ಲಾದಿಮಿರ್ ಪುಟಿನ್​ಗೆ ಪ್ರಧಾನಿ ಮೋದಿ ಆಗ್ರಹಿಸಿದರು

‘ರಷ್ಯಾ ಮತ್ತು ನ್ಯಾಟೊ ನಡುವೆ ದೀರ್ಘ ಸಮಯದಿಂದ ಇರುವ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮತ್ತು ಮುಕ್ತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರೆಂದು,’ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೂಡಲೇ ಯುದ್ಧವಿರಾಮ ಘೋಷಿಸಿ ಹಿಂಸಾಚಾರ ನಿಲ್ಲಿಸುವಂತೆ ವ್ಲಾದಿಮಿರ್ ಪುಟಿನ್​ಗೆ ಪ್ರಧಾನಿ ಮೋದಿ ಆಗ್ರಹಿಸಿದರು
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ವ್ಲಾದಿಮಿರ್ ಪುಟಿನ್ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Feb 25, 2022 | 7:16 AM

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಗುರುವಾರ ರಾತ್ರಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಗುರುವಾರ ಬೆಳಗ್ಗೆಯಿಂದ ಉಕ್ರೇನ್ ನಲ್ಲಿ (Ukraine Crisis) ಆರಂಭಗೊಂಡಿರುವ ಯುದ್ಧ ಮತ್ತು ಹಿಂಸಾಚಾರವನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದರು. ರಷ್ಯಾ ತನ್ನ ಮೇಲೆ ಯುದ್ಧ ಸಾರಿರುವುದರಿಂದ ಭಾರತ ಮಧ್ಯಸ್ಥಿಕೆ ವಹಿಸಬೇಕೆಂದು ಉಕ್ರೇನ್ ಮನವಿ ಮಾಡಿದ ಕೆಲ ಗಂಟೆಗಳ ನಂತರ ಭಾರತ ಮತ್ತು ರಷ್ಯಾ ನಡುವೆ ಮಾತುಕತೆ ನಡೆಯಿತು. ಪ್ರಧಾನ ಮಂತ್ರಿಗಳ ಕಚೇರಿಯಿಂದ ಬಿಡುಗಡೆಯಾಗಿರುವ ಹೇಳಿಕೆಯೊಂದರ ಪ್ರಕಾರ, ಪ್ರಧಾನಿ ಮೋದಿ ಅವರು, ‘ಎಲ್ಲ ಕಡೆಯವರು ರಾಜಾತಾಂತ್ರಿಕ ಚರ್ಚೆ ಮತ್ತು ಮಾತುಕತೆಯ ಕಡೆ ತಿರುಗಬೇಕು,’ ಅಂತ ಪುಟಿನ್ ಅವರಿಗೆ ಹೇಳಿದರು.

‘ರಷ್ಯಾ ಮತ್ತು ನ್ಯಾಟೊ ನಡುವೆ ದೀರ್ಘ ಸಮಯದಿಂದ ಇರುವ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮತ್ತು ಮುಕ್ತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರೆಂದು,’ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಉಕ್ರೇನ್ ನಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿ ಅವರಿಗೆ ವಿವರಿಸಿದರು.

ಪ್ರಧಾನಿ ಮೋದಿ ಅವರು ಉಕ್ರೇನಿನಲ್ಲಿರುವ ಭಾರತೀಯ ನಾಗರಿಕರ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ. ಉಕ್ರೇನ್ ನಿಂದ ಅವರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗುವುದನ್ನು ನೋಡುವುದು ತಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿಯವರು ರಷ್ಯನ್ ಅಧ್ಯಕ್ಷರಿಗೆ ಹೇಳಿದರು.

‘ಎರಡು ರಾಷ್ಟ್ರಗಳ ಅಧಿಕಾರಿಗಳು ಮತ್ತು ರಾಜತಾಂತ್ರಿಕ ತಂಡಗಳು ಸಾಮಯಿಕ ಆಸಕ್ತಿಯ ವಿಷಯಗಳ ಬಗ್ಗೆ ನಿಯಮಿತ ಸಂಪರ್ಕವನ್ನು ಮುಂದುವರಿಸಲು ನಾಯಕರು ಒಪ್ಪಿಕೊಂಡರು,’ ಎಂದು ಹೇಳಿಕೆ ತಿಳಿಸಲಾಗಿದೆ.

ನ್ಯಾಟೋ ಗೆ ಉಕ್ರೇನ್‌ನ ಹೊಂದಿರುವ ನಿಕಟ ಸಂಪರ್ಕದ ಹಿನ್ನೆಲೆಯಲ್ಲಿ ತಿಂಗಳುಗಳ ಕಾಲ ಉದ್ವಿಗ್ನತೆಯ ವಾತಾವರಣದ ನಂತರ ರಷ್ಯಾ ಗುರುವಾರ ಬೆಳಿಗ್ಗೆ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪುಟಿನ್ ಅವರು ಉಕ್ರೇನ್ ಪಶ್ಚಿಮದ ಕೈಗೊಂಬೆಯಾಗಿದೆ, ಅಷ್ಟಾಗಿಯೂ ಅದು ಒಂದು ನಿಷ್ಪ್ರಯೋಜಕ ದೇಶವಾಗಿದೆ ಎಂದು ಪುಟಿನ್ ಈ ಹಿಂದೆ ಹೀಯಾಳಿಸಿದ್ದರು.

ಇದನ್ನೂ ಓದಿ:   ಅದೆಂಥಾ ಸಮಯಕ್ಕೆ ಇಲ್ಲಿಗೆ ಬಂದೆ; ರಷ್ಯಾ-ಉಕ್ರೇನ್ ಬಿಕ್ಕಟ್ಟು ನಡುವೆಯೇ ಮಾಸ್ಕೊ ತಲುಪಿದ ಪಾಕ್ ಪಿಎಂ ಉದ್ಗಾರ

ಇದನ್ನೂ ಓದಿ: ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದ ತಲ್ಲಣಗೊಂಡಿರುವ ಉಕ್ರೇನ್ ಜನ ಅಗತ್ಯ ಸಾಮಗ್ರಿಗಳ ದಾಸ್ತಾನಿಗೆ ಮುಂದಾಗಿದ್ದಾರೆ

Published On - 11:49 pm, Thu, 24 February 22