ಅದೆಂಥಾ ಸಮಯಕ್ಕೆ ಇಲ್ಲಿಗೆ ಬಂದೆ; ರಷ್ಯಾ-ಉಕ್ರೇನ್ ಬಿಕ್ಕಟ್ಟು ನಡುವೆಯೇ ಮಾಸ್ಕೊ ತಲುಪಿದ ಪಾಕ್ ಪಿಎಂ ಉದ್ಗಾರ

ಅದೆಂಥಾ ಸಮಯಕ್ಕೆ ಇಲ್ಲಿಗೆ ಬಂದೆ; ರಷ್ಯಾ-ಉಕ್ರೇನ್ ಬಿಕ್ಕಟ್ಟು ನಡುವೆಯೇ ಮಾಸ್ಕೊ ತಲುಪಿದ ಪಾಕ್ ಪಿಎಂ ಉದ್ಗಾರ
ಪುಟಿನ್ ಜತೆ ಇಮ್ರಾನ್ ಖಾನ್

"ನಾನು ಯಾವ ಸಮಯದಲ್ಲಿ ಬಂದಿದ್ದೇನೆ, ತುಂಬಾ ಉತ್ಸುಕನಾಗಿದ್ದೇನೆ" ಎಂದು ಇಮ್ರಾನ್ ಖಾನ್ ಅವರನ್ನು ಸ್ವಾಗತಿಸಿದ ನಿಯೋಗದ ಸದಸ್ಯರಲ್ಲಿ ಮಾತನಾಡುತ್ತಾ ಹೇಳಿದರು.

TV9kannada Web Team

| Edited By: Rashmi Kallakatta

Feb 24, 2022 | 8:53 PM

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಗೆ ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಆದೇಶ ನೀಡುವ ಗಂಟೆಗಳ ಮೊದಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಬುಧವಾರ ರಾತ್ರಿ ಎರಡು ದಿನಗಳ ಭೇಟಿಗಾಗಿ ಮಾಸ್ಕೊಗೆ ಬಂದಿಳಿದರು. ಇಮ್ರಾನ್ ಖಾನ್ ಮಾಸ್ಕೊಗೆ ಬಂದಿಳಿದ ತಕ್ಷಣ ಪಾಕಿಸ್ತಾನದ ಪ್ರಧಾನಿ ಮಾತುಕತೆಯ ವಿಡಿಯೊ ಹೊರಬಿದ್ದಿದೆ. “ನಾನು ಯಾವ ಸಮಯದಲ್ಲಿ ಬಂದಿದ್ದೇನೆ, ತುಂಬಾ ಉತ್ಸುಕನಾಗಿದ್ದೇನೆ” ಎಂದು ಇಮ್ರಾನ್ ಖಾನ್ ಅವರನ್ನು ಸ್ವಾಗತಿಸಿದ ನಿಯೋಗದ ಸದಸ್ಯರಲ್ಲಿ ಮಾತನಾಡುತ್ತಾ ಹೇಳಿದರು. ಮಾಸ್ಕೊಗೆ ಬರಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಇಮ್ರಾನ್ ಖಾನ್ ಹೇಳುವುದನ್ನು ಸಹ ಕೇಳಬಹುದು. ರಷ್ಯಾದ ಉಪ ವಿದೇಶಾಂಗ ಸಚಿವ ಇಗೊರ್ ಮೊರ್ಗುಲೋವ್ ಅವರು ಇಮ್ರಾನ್ ಖಾನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು, ಅಲ್ಲಿ ರಷ್ಯಾದ ಮಿಲಿಟರಿ ಅವರನ್ನು ಆದರದಿಂದ ಸ್ವೀಕರಿಸಿತು.  ಇಮ್ರಾನ್ ಖಾನ್ ಅವರು ಮಾಸ್ಕೋದಲ್ಲಿ ಒಂದು ದಿನದ ಮಟ್ಟಿಗೆ ರಷ್ಯಾದ ಕಂಪನಿಗಳ ಸಹಯೋಗದಲ್ಲಿ ನಿರ್ಮಿಸಲಿರುವ ಬಹು-ಶತಕೋಟಿ ಡಾಲರ್ ಅನಿಲ ಪೈಪ್‌ಲೈನ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇಮ್ರಾನ್ ಖಾನ್ ಅವರು ಗುರುವಾರ ಪುಟಿನ್ ಅವರೊಂದಿಗೆ ಭೋಜನವನ್ನು ಸೇವಿಸಲಿದ್ದಾರೆ ಮತ್ತು ಅವರ ನಿಗದಿತ ಸಭೆಯ ನಂತರ ಅವರು ರಾತ್ರಿ 11.30 ಕ್ಕೆ ಇಸ್ಲಾಮಾಬಾದ್‌ಗೆ ಮರಳಲಿದ್ದಾರೆ.

ಆದಾಗ್ಯೂ, ಗುರುವಾರ ಉದ್ವಿಗ್ನತೆ ಉಲ್ಬಣಗೊಳ್ಳುವುದರೊಂದಿಗೆ ಇಮ್ರಾನ್ ಖಾನ್ ಅವರು ನಿಗದಿತ ಸಭೆಗಳಿಗೆ ಮುಂಚಿತವಾಗಿ ತಮ್ಮ ಭೇಟಿಯನ್ನು ಮುಗಿಸಿದರು ಎಂದು ವರದಿಯಾಗಿದೆ. ಈ ಭೇಟಿಯನ್ನು ಒಂದು ತಿಂಗಳ ಹಿಂದೆಯೇ ಯೋಜಿಸಲಾಗಿತ್ತು ಮತ್ತು 20 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳ ಹಿಂದೆ ಪಾಕಿಸ್ತಾನಿ ನಾಯಕರೊಬ್ಬರು ಮಾಸ್ಕೊಗೆ ಮೊದಲ ಭೇಟಿ ನೀಡಿದ್ದರು.

ಇಮ್ರಾನ್ ಖಾನ್ ಅವರ ಮಾಸ್ಕೊ ಭೇಟಿಗೆ ಪ್ರತಿಕ್ರಿಯಿಸಿದ ಯುನೈಟೆಡ್ ಸ್ಟೇಟ್ಸ್ ಮತ್ತು ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳಿಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸುವುದು ಪ್ರತಿಯೊಂದು ದೇಶದ ಜವಾಬ್ದಾರಿಯಾಗಿದೆ ಎಂದು ಹೇಳಿದೆ. ಉಕ್ರೇನ್‌ನ ಮೇಲೆ ರಷ್ಯಾದ ಮತ್ತಷ್ಟು ಆಕ್ರಮಣದ ಕುರಿತು ನಾವು ಪಾಕಿಸ್ತಾನಕ್ಕೆ ನಮ್ಮ ನಿಲುವನ್ನು ತಿಳಿಸಿದ್ದೇವೆ ಮತ್ತು ಯುದ್ಧದ ಮೇಲೆ ರಾಜತಾಂತ್ರಿಕತೆಯನ್ನು ಮುಂದುವರಿಸುವ ನಮ್ಮ ಪ್ರಯತ್ನಗಳ ಬಗ್ಗೆ ನಾವು ಅವರಿಗೆ ತಿಳಿಸಿದ್ದೇವೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರೈಸ್ ಪತ್ರಿಕಾಗೋಷ್ಠಿಯಲ್ಲಿ ಇಮ್ರಾನ್ ಖಾನ್ ಅವರ ಮಾಸ್ಕೊ ಭೇಟಿಯ ಕುರಿತು ಕೇಳಿದಾಗ ಹೇಳಿದರು.

ಇದನ್ನೂ ಓದಿ: Russia Ukraine War ಕೈವ್‌ನಲ್ಲಿ ಕೊರೆಯುವ ಚಳಿಯಲ್ಲಿ ಕಾಯುತ್ತಿರುವ ಭಾರತೀಯರ ವಿಡಿಯೊ ವೈರಲ್; ಭಾರತೀಯ ರಾಯಭಾರ ಕಚೇರಿ ಹೇಳಿದ್ದೇನು?

Follow us on

Related Stories

Most Read Stories

Click on your DTH Provider to Add TV9 Kannada