Russia Ukraine War ಕೈವ್‌ನಲ್ಲಿ ಕೊರೆಯುವ ಚಳಿಯಲ್ಲಿ ಕಾಯುತ್ತಿರುವ ಭಾರತೀಯರ ವಿಡಿಯೊ ವೈರಲ್; ಭಾರತೀಯ ರಾಯಭಾರ ಕಚೇರಿ ಹೇಳಿದ್ದೇನು?
ರಾಯಭಾರ ಕಚೇರಿಯ ಮೂಲಗಳು ಉಕ್ರೇನ್‌ನಲ್ಲಿರುವ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ರಾಯಭಾರ ಕಚೇರಿಯ ಹೊರಗೆ ಗುಂಪು ಸೇರಿದ್ದರು. ಆದರೆ ಎಲ್ಲರಿಗೂ ರಾಯಭಾರ ಕಚೇರಿ ಆವರಣದಲ್ಲಿ ಅವಕಾಶ ಕಲ್ಪಿಸಲಾಗಲಿಲ್ಲ ಎಂದು ಹೇಳಿವೆ
ಕೈವ್‌ನಲ್ಲಿ ಉಳಿಯಲು ಸ್ಥಳವಿಲ್ಲದೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಉಕ್ರೇನ್‌ನ ( Ukraine) ರಾಜಧಾನಿ ಕೈವ್‌ನಲ್ಲಿರುವ (Kyiv)ಭಾರತೀಯ ರಾಯಭಾರ ಕಚೇರಿ (Indian Embassy) ಹೊಸ ಸಲಹೆಯನ್ನು ನೀಡಿದೆ. ಹತ್ತಿರದ ಬಾಂಬ್ ಶೆಲ್ಟರ್‌ಗಳ ಪಟ್ಟಿಯನ್ನು ಹಂಚಿಕೊಂಡ ರಾಯಭಾರ ಕಚೇರಿಯು ವಿದ್ಯಾರ್ಥಿಗಳಿಗೆ ಹತ್ತಿರದ ಬಾಂಬ್ ಶೆಲ್ಟರ್‌ಗಳನ್ನು ಪತ್ತೆಹಚ್ಚಲು ಗೂಗಲ್ ಮ್ಯಾಪ್ ಬಳಸಲು ಹೇಳಿದೆ. ಪರಿಸ್ಥಿತಿಗೆ ಸಂಭವನೀಯ ಪರಿಹಾರವನ್ನು ಹುಡುಕುತ್ತಿದ್ದು,ದಯವಿಟ್ಟು ನಿಮ್ಮ ಸುತ್ತಮುತ್ತಲಿನ ಬಗ್ಗೆ ತಿಳಿದಿರಲಿ, ಸುರಕ್ಷಿತವಾಗಿರಿ, ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಹೊರಗೆ ಹೋಗಿ ಮತ್ತು ಎಲ್ಲಾ ಸಮಯದಲ್ಲೂ ನಿಮ್ಮ ದಾಖಲೆಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ” ಎಂದು ರಾಯಭಾರ ಕಚೇರಿ ಹೇಳಿದೆ. “ನಿಮಗೆ ತಿಳಿದಿರುವಂತೆ, ಉಕ್ರೇನ್ ಸಮರ ಕಾನೂನಿನ ಅಡಿಯಲ್ಲಿದೆ, ಇದು ಚಲನೆಯನ್ನು ಕಷ್ಟಕರವಾಗಿಸಿದೆ. ಕೈವ್‌ನಲ್ಲಿ ತಂಗಲು ಸ್ಥಳವಿಲ್ಲದೆ ಸಿಲುಕಿರುವ ವಿದ್ಯಾರ್ಥಿಗಳಿಗೆ, ಸಹಾಯ ಮಾಡಲು ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ” ಎಂದು ರಾಯಭಾರ ಕಚೇರಿ ಹೇಳಿದೆ. ರಾಯಭಾರ ಕಚೇರಿಯ ಮೂಲಗಳು ಉಕ್ರೇನ್‌ನಲ್ಲಿರುವ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ರಾಯಭಾರ ಕಚೇರಿಯ ಹೊರಗೆ ಗುಂಪು ಸೇರಿದ್ದರು. ಆದರೆ ಎಲ್ಲರಿಗೂ ರಾಯಭಾರ ಕಚೇರಿ ಆವರಣದಲ್ಲಿ ಅವಕಾಶ ಕಲ್ಪಿಸಲಾಗಲಿಲ್ಲ ಎಂದು ಹೇಳಿವೆ. ಮೂಲಗಳ ಪ್ರಕಾರ ರಾಯಭಾರ ಕಚೇರಿಯು ಸಮೀಪದಲ್ಲಿ ಸುರಕ್ಷಿತ ಆವರಣವನ್ನು ಆಯೋಜಿಸಿತು ಮತ್ತು ವಿದ್ಯಾರ್ಥಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. ಕೈವ್‌ನಲ್ಲಿ ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಂಡಿತು. ಯಾವುದೇ ಭಾರತೀಯ ಪ್ರಜೆ ಪ್ರಸ್ತುತ ರಾಯಭಾರ ಕಚೇರಿಯ ಹೊರಗೆ ಸಿಕ್ಕಿಹಾಕಿಕೊಂಡಿಲ್ಲ. ಹೊಸ ವಿದ್ಯಾರ್ಥಿಗಳು ಬರುತ್ತಿದ್ದಂತೆ ಅವರನ್ನು ಸುರಕ್ಷಿತ ಆವರಣಕ್ಕೆ ಸ್ಥಳಾಂತರಿಸಲಾಗುತ್ತಿದೆ.ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿಯು ಸಹಾಯ ಮಾಡುವುದನ್ನು ಮುಂದುವರೆಸಿದೆ ಎಂದು ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
— VISHAL KUSHWAHA (@VISHALKUSHWAHA2) February 24, 2022
ಗುರುವಾರ ಬೆಳಿಗ್ಗೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದ್ದಂತೆ, ಉಕ್ರೇನ್ ವಾಯುಪ್ರದೇಶವನ್ನು ಮುಚ್ಚಲಾಯಿತು, ಏರ್ ಇಂಡಿಯಾ ವಿಮಾನವು ಉಕ್ರೇನ್‌ನಲ್ಲಿ ಇಳಿಯದೆ ಹಿಂತಿರುಗುವಂತೆ ಒತ್ತಾಯಿಸಿತು. ರಾಜಧಾನಿಯಲ್ಲಿ ಸಹಾಯಕ್ಕಾಗಿ ಕಾಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಹಲವಾರು ವಿಡಿಯೊಗಳು ವೈರಲ್ ಆಗಿದ್ದು, ಅನೇಕ ರಾಜಕಾರಣಿಗಳು ಟ್ವೀಟ್ ಮಾಡಿದ್ದಾರೆ ಮತ್ತು ಸರ್ಕಾರವು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಯದ ಗಮನಕ್ಕೆ.ಕೈವ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಗೆ ಸಲಹೆ ನೀಡುವಂತೆ ನಾನು ಎಸ್ ಜಯಶಂಕರ್ ಅವರನ್ನು ವಿನಂತಿಸುತ್ತೇನೆ, ನಮ್ಮ ಯುವಜನರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡಿ. ಕನಿಷ್ಠ ಪಕ್ಷ ರಾಯಭಾರ ಕಚೇರಿ ಆವರಣದಲ್ಲಿ ಆಶ್ರಯ ಪಡೆಯಲು ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ
.@DrSJaishankar plz ask someone to find out if this video is accurate as to why Indian Students are being made to wait outside our Embassy in Kiev in 2-3 degree Centigrade. Why are they not being permitted inside https://t.co/eeB0g3DhI1
— Manish Tewari (@ManishTewari) February 24, 2022
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ. “ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬಗಳಿಂದ ಹಲವಾರು ಸಂದೇಶಗಳನ್ನು ಸ್ವೀಕರಿಸಲಾಗುತ್ತಿದೆ ಮತ್ತು ಸ್ಥಳಾಂತರಿಸುವ ಅಗತ್ಯವಿದೆ. ಪ್ರಧಾನಮಂತ್ರಿ ಜೀ, ಇದು ಚುನಾವಣಾ ತಂತ್ರದ ಸಮಯವಲ್ಲ. ನಮ್ಮ ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ನಿಮ್ಮ ಆದ್ಯತೆಯನ್ನು ಹೊಂದಿಸಿ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
Receiving a number of desperate Messages from families of students stranded in Ukraine & needing evacuation. प्रधानमंत्री जी, यह समय चुनावी रणनीति का नहीं बल्कि राजनायिक रणनीति का है। यूक्रेन में पढ़ने के लिए गए हमारे हज़ारों बच्चे वहाँ फंसे हुए हैं, प्राथमिकता समझिए ! @PMOIndia
— Shashi Tharoor (@ShashiTharoor) February 24, 2022
ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಸ್ಥಳೀಯ ಸಾರಿಗೆ ಲಭ್ಯವಿಲ್ಲದ ಕಾರಣ ಹಲವು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಒಟ್ಟಿಗೆ ಸೇರಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ರಾಯಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ವೈರಲ್ ವಿಡಿಯೊದಲ್ಲಿ ತಿಳಿಸಿದ್ದಾರೆ.
This is what I have been raising with MEA and Civil Aviation Ministry. Now our Indians are stranded and are feeling helpless. pic.twitter.com/9sAt8W6TSf
— Priyanka Chaturvedi?? (@priyankac19) February 24, 2022
ಗುರುವಾರ ಬೆಳಿಗ್ಗೆ ಈ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಮುಕ್ತ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. “ಪರಿಸ್ಥಿತಿಯು ಹೆಚ್ಚು ಉದ್ವಿಗ್ನವಾಗಿದೆ ಮತ್ತು ಅತ್ಯಂತ ಅನಿಶ್ಚಿತವಾಗಿದೆ ಮತ್ತು ಇದು ಸಹಜವಾಗಿ ಸಾಕಷ್ಟು ಆತಂಕವನ್ನು ಉಂಟುಮಾಡುತ್ತಿದೆ” ಎಂದು ರಾಯಭಾರ ಕಚೇರಿ ಹೇಳಿದೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿಕೊಂಡ ಗದಗನ ವೈದ್ಯಕೀಯ ವಿದ್ಯಾರ್ಥಿ; ಮಗನನ್ನು ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಪೋಷಕರ ಮನವಿ
Published On - 7:48 pm, Thu, 24 February 22