ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದ ತಲ್ಲಣಗೊಂಡಿರುವ ಉಕ್ರೇನ್ ಜನ ಅಗತ್ಯ ಸಾಮಗ್ರಿಗಳ ದಾಸ್ತಾನಿಗೆ ಮುಂದಾಗಿದ್ದಾರೆ

ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದ ತಲ್ಲಣಗೊಂಡಿರುವ ಉಕ್ರೇನ್ ಜನ ಅಗತ್ಯ ಸಾಮಗ್ರಿಗಳ ದಾಸ್ತಾನಿಗೆ ಮುಂದಾಗಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 24, 2022 | 6:29 PM

ಮಾರ್ಕೆಟ್ ಗಳಲ್ಲಿ ಜನರಿಗೆ ಮತ್ತೊಂದು ಬಗೆಯ ಸಂಕಷ್ಟ. ಯುದ್ಧದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿಬಿಟ್ಟಿವೆ. ಯುದ್ಧ ಆರಂಭಗೊಳ್ಳುವ ಮೊದಲೇ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 100 ಡಾಲರ್ ತಲುಪಿತ್ತು. ಈಗ ಎಲ್ಲ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಅದನ್ನು ಅರಿತೇ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟುತ್ತಿವೆ.

ಯಾವುದನ್ನು ಆಗಬಾರದೆಂದು ವಿಶ್ವಸಂಸ್ಥೆ (UNO), ಯುಎಸ್, ಪಾಶ್ಚಿಮಾತ್ಯ ರಾಷ್ಟ್ರಗಳು ಬಯಸಿದ್ದವೋ ಅದು ಆಗಿಬಿಟ್ಟಿದೆ. ಜಾಗತಿಕ ಸಮುದಾಯಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಉಕ್ರೇನ್ ಮೇಲೆ ಬೃಹತ್ ಪ್ರಮಾಣದ ಸೇನಾ ಕಾರ್ಯಾಚರಣೆ ಆರಂಭಿಸಿರುವುದು ಈಗಷ್ಟೇ ಕೋವಿಡ್-19 (Covid-19) ಮಹಾಮಾರಿಯಿಂದ ಕ್ರಮೇಣವಾಗಿ ಚೇತರಿಸಿಕೊಳ್ಳುತ್ತಿರುವ ವಿಶ್ವ ಸಮುದಾಯಕ್ಕೆ ನಿಸ್ಸಂದೇಹವಾಗಿ ಆತಂಕ ಮೂಡಿಸಿದೆ. ಆದರೆ ಅತಿ ಹೆಚ್ಚು ಆತಂಕ್ಕೀಡಾಗಿರುವ ರಾಷ್ಟ್ರವೆಂದರೆ ಉಕ್ರೇನ್. ಕಳೆದ ಎರಡು-ಮೂರು ತಿಂಗಳುಗಳಿಂದ ಯುದ್ಧದ ಭೀತಿಯಲ್ಲಿದ್ದ ಜನಗಳ ಮುಂದೆ ಕರಾಳ ವಾಸ್ತವ ಎದುರಾಗಿದೆ. ಯುದ್ಧ ಆರಂಭವಾಗಿರುವುದರಿಂದ ಮುಂದೇನು ಎಂಬ ಚಿಂತೆಯ ನಡುವೆ ಅವರು ಅಗತ್ಯ ಸಾಮಗ್ರಿಗಳ ದಾಸ್ತಾನು ಮಾಡಿಟ್ಟುಕೊಳ್ಳಲು ಸೂಪರ್ ಮಾರ್ಕೆಟ್ಗಳಿಗೆ ಎಡತಾಕುತ್ತಿದ್ದಾರೆ.

ಮಾರ್ಕೆಟ್ ಗಳಲ್ಲಿ ಜನರಿಗೆ ಮತ್ತೊಂದು ಬಗೆಯ ಸಂಕಷ್ಟ. ಯುದ್ಧದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿಬಿಟ್ಟಿವೆ. ಯುದ್ಧ ಆರಂಭಗೊಳ್ಳುವ ಮೊದಲೇ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 100 ಡಾಲರ್ ತಲುಪಿತ್ತು. ಈಗ ಎಲ್ಲ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಅದನ್ನು ಅರಿತೇ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟುತ್ತಿವೆ.

ಮೊಬೈಲ್ ಫೋನಲ್ಲಿ ರೆಕಾರ್ಡ್ ಆಗಿರುವ ಈ ವಿಡಿಯೋವನ್ನು ನೋಡಿದರೆ, ಉಕ್ರೇನ್ ಜನರ ಆತಂಕ ನಿಮಗೆ ಅರ್ಥವಾಗುತ್ತದೆ. ಮನೆಗೆ ಬೇಕಾಗಿರುವ ಸಾಮಾನುಗಳನ್ನು ಅವರು ಖರೀದಿಸುತ್ತಿದ್ದಾರೆ. ಪೆಟ್ರೋಲ್ ಬಂಕ್ಗಳ ಮುಂದೆ ಕಾರುಗಳ ದೊಡ್ಡ ಸಾಲು ಕಾಣುತ್ತಿದೆ. ಸೂಪರ್ ಮಾರ್ಕೆಟ್, ಬೇಕರಿ ಮತ್ತು ಬೇರೆ ಬೇರೆ ಅಂಗಡಿಗಳ ಮುಂದೆ ಜನರ ಗುಂಪುಗಳು ಕಾಣುತ್ತಿವೆ.

ಯುದ್ಧ ಈಗಷ್ಟೇ ಆರಂಭಗೊಂಡಿದೆ. ಉಕ್ರೇನ್ ಸೇನೆಗೆ ಶರಣಾಗುವಂತೆ ಪುಟಿನ್ ಹೇಳಿದ್ದಾರೆ. ಆದರೆ ಅದು ಸಾಧ್ಯವಾಗದ ಮಾತು. ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಗೆ ಬೆಂಬಲ ಸೂಚಿಸಿವೆ ಮತ್ತು ಅವುಗಳ ಹಾಗೂ ನ್ಯಾಟೋ ಸೇನೆಗಳು ಉಕ್ರೇನ್ ಗಡಿಭಾಗದಲ್ಲಿ ಇಷ್ಟರಲ್ಲೇ ಲ್ಯಾಂಡ್ ಅಗಲಿವೆ. ಹಾಗಾಗಿ ಯುದ್ಧ ಬೇಗ ಮುಗಿಯವ ಲಕ್ಷಣಗಳಂತೂ ಇಲ್ಲ.

ಇದನ್ನೂ ಓದಿ:   Russia Ukraine War: ರಷ್ಯಾದ 50-ಉಕ್ರೇನ್​ನ 40 ಸೈನಿಕರು ಸಾವು; ಯುದ್ಧದ ನಾಡಲ್ಲಿ ಇಲ್ಲಿಯವರೆಗೆ ಆಗಿದ್ದೇನು?