ಪದೇಪದೆ ಮೂತ್ರಕ್ಕೆ ಹೋಗಬೇಕು, ಹೊಟ್ಟೆ ನೋವು ಎಂದು ವೈದ್ಯರ ಬಳಿ ಹೋದ ಮಹಿಳೆ; ಮೂತ್ರಕೋಶದಲ್ಲಿ ಇತ್ತು ದೊಡ್ಡ ಕಲ್ಲು, ಗಾಜು !

ಇಂಥ ಪ್ರಕರಣ ವರದಿಯಾಗಿದ್ದು ಇದೇ ಮೊದಲೇನೂ ಅಲ್ಲ. ಹಲವು ಮಹಿಳೆಯರು ಸ್ವತಃ ಲೈಂಗಿಕ ತೃಪ್ತಿ ಪಡೆಯಲು ಇಂಥದ್ದನ್ನು ಯೋನಿಯೊಳಗೆ ಸಿಕ್ಕಿಸಿಕೊಳ್ಳುತ್ತಾರೆ.  ಆದರೆ ನಂತರ ತೆಗೆಯಲು ಸಾಧ್ಯವಾಗದೆ, ಅದನ್ನು ವೈದ್ಯರ ಬಳಿ ಹೇಳಿಕೊಳ್ಳಲು ಮುಜುಗರವಾಗಿ ಹಾಗೇ ಬಿಟ್ಟುಕೊಳ್ಳುತ್ತಾರೆ.

ಪದೇಪದೆ ಮೂತ್ರಕ್ಕೆ ಹೋಗಬೇಕು, ಹೊಟ್ಟೆ ನೋವು ಎಂದು ವೈದ್ಯರ ಬಳಿ ಹೋದ ಮಹಿಳೆ; ಮೂತ್ರಕೋಶದಲ್ಲಿ ಇತ್ತು ದೊಡ್ಡ ಕಲ್ಲು, ಗಾಜು !
ಮಹಿಳೆಯ ಮೂತ್ರಕೋಶದಲ್ಲಿ ಪತ್ತೆಯಾದ ಕಲ್ಲು ಮತ್ತು ಗಾಜು
Follow us
TV9 Web
| Updated By: Lakshmi Hegde

Updated on:Mar 20, 2022 | 10:21 AM

ಟ್ಯುನಿಶಿಯಾ ಮಹಿಳೆಯೊಬ್ಬರು ತಮಗೆ ಮೂತ್ರನಾಳದ ಸೋಂಕು (Urinary Tract Infection) ಆಗಿರುವ ಲಕ್ಷಣ ಕಾಣಿಸುತ್ತಿದೆ ಎಂದು ವೈದ್ಯರ ಬಳಿ ಹೋಗಿದ್ದಾರೆ. ಕೆಳಹೊಟ್ಟೆ ನೋವಿದೆ. ಮೂತ್ರ ತನ್ನಿಂದ ತಾನೆ ವಿಸರ್ಜನೆ ಆಗಿಬಿಡುತ್ತದೆ ಎಂಬಿತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಹೇಳಿದರು. ಆದರೆ ತಪಾಸಣೆ ಮಾಡಿದಾಗ ಆಗಿದ್ದು ಮೂತ್ರನಾಳದ ಸೋಂಕಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಮಹಿಳೆಗೆ ಆಗಿರುವ ಸಮಸ್ಯೆಯನ್ನು ನೋಡಿ ಸ್ವತಃ ವೈದ್ಯರೇ ಶಾಕ್ ಆಗಿದ್ದಾರೆ. ಸ್ಕ್ಯಾನಿಂಗ್ ಮಾಡಿ, ರಿಪೋರ್ಟ್ ನೋಡಿದಾಗ ಮಹಿಳೆಯ ಮೂತ್ರಕೋಶದಲ್ಲಿ ಗಾಜಿನ ಟಂಬ್ಲರ್​ ಕಾಣಿಸಿದೆ. (ಟಂಬ್ಲರ್​ ಎಂದರೆ ಅದು ನೀರು, ಮತ್ತಿತರ ಪಾನೀಯಗಳನ್ನು ಕುಡಿಯಲು ಬಳಸುವ ಗಾಜಿನ ಲೋಟ, ಹಿಡಿಕೆಯಿರುವುದಿಲ್ಲ). ಮೂತ್ರಕೋಶದಲ್ಲಿ ದೊಡ್ಡದಾದ ಕಲ್ಲಿತ್ತು. ಅದರಲ್ಲಿ ಈ ಗಾಜು ಸೇರಿಕೊಂಡಿರುವುದು ಸ್ಕ್ಯಾನ್​ ರಿಪೋರ್ಟ್​​ನಲ್ಲಿ (Scan Report) ಕಾಣಿಸಿದೆ. ಒಂದು ಸಾಮಾನ್ಯ ಗಾತ್ರದ ಈ ಗಾಜಿನ ಗ್ಲಾಸ್​​​ನ್ನು ಸಂಪೂರ್ಣವಾಗಿ ಕಲ್ಲು ಆವರಿಸಿಕೊಂಡಿದೆ. ಕಲ್ಲು ಸುಮಾರು 8 ಸಿಎಂ ಅಗಲವಿರುವುದಾಗಿ ವೈದ್ಯರು ಹೇಳಿದ್ದಾರೆ. ಗಾಜು, ಅದನ್ನು ಆವರಿಸಿರುವ ದೈತ್ಯಾಕಾರದ ಕಲ್ಲನ್ನು ನೋಡಿ ವೈದ್ಯರಿಗೇ ಅಚ್ಚರಿಯಾಗಿದೆ. ಸದ್ಯ ಮಹಿಳೆಯರ ಹೆಸರನ್ನು ಬಹಿರಂಗ ಪಡಿಸದೆ, ಈ ವಿಚಾರವನ್ನು ಆಸ್ಪತ್ರೆ ತಿಳಿಸಿರುವುದಾಗಿ ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ.

ಸತ್ಯ ಒಪ್ಪಿಕೊಂಡ ಮಹಿಳೆ !: ಇಲ್ಲಿ ಗ್ಲಾಸ್​ ಹೇಗೆ ಬಂತು ಎಂಬುದು ವೈದ್ಯರ ದೊಡ್ಡ ಪ್ರಶ್ನೆಯಾಗಿತ್ತು. ಆಗ ಮಹಿಳೆ ಮುಜುಗರವಿಲ್ಲದೆ ಇರುವ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ತಾನು ನಾಲ್ಕು ವರ್ಷಗಳ ಹಿಂದೆ ಕುಡಿಯಲು ಬಳಸುವ ಗ್ಲಾಸ್​​​ನ್ನು ಸೆಕ್ಸ್​ ಟಾಯ್​ (ಲೈಂಗಿಕ ತೃಪ್ತಿಗಾಗಿ ಬಳಸುವ ಆಟಿಕೆ)ಆಗಿ ಬಳಸುತ್ತಿದ್ದೆ ಎಂದು ಹೇಳಿಕೊಂಡಿದ್ದಾಳೆ. ಆದರೆ ಆಗಿರುವ ಎಡವಟ್ಟು ಎಂದರೆ, ಈ ಗ್ಲಾಸ್​ನ್ನು ಮಹಿಳೆ ಯೋನಿಯೊಳಗೆ ಸಿಕ್ಕಿಸುವ ಬದಲು ಮೂತ್ರನಾಳಕ್ಕೆ ಸಿಕ್ಕಿಸಿಕೊಂಡಿದ್ದೇ ಇಷ್ಟು ದೊಡ್ಡ ಸಮಸ್ಯೆಗೆ ಕಾರಣವಾಗಿದೆ.  ಈ ಮಹಿಳೆಯ ಪರಿಸ್ಥಿತಿಯನ್ನು ಮೆಡಿಕಲ್ ಜರ್ನಲ್​ ಸೈನ್ಸ್​ ಡೈರೆಕ್ಟ್​ ಸಮಗ್ರವಾಗಿ ಬರದಿ ಮಾಡಿದೆ.

ಇಂಥ ಪ್ರಕರಣ ವರದಿಯಾಗಿದ್ದು ಇದೇ ಮೊದಲೇನೂ ಅಲ್ಲ. ಹಲವು ಮಹಿಳೆಯರು ಸ್ವತಃ ಲೈಂಗಿಕ ತೃಪ್ತಿ ಪಡೆಯಲು ಇಂಥದ್ದನ್ನು ಯೋನಿಯೊಳಗೆ ಸಿಕ್ಕಿಸಿಕೊಳ್ಳುತ್ತಾರೆ.  ಆದರೆ ನಂತರ ತೆಗೆಯಲು ಸಾಧ್ಯವಾಗದೆ, ಅದನ್ನು ವೈದ್ಯರ ಬಳಿ ಹೇಳಿಕೊಳ್ಳಲು ಮುಜುಗರವಾಗಿ ಹಾಗೇ ಬಿಟ್ಟುಕೊಳ್ಳುತ್ತಾರೆ. ಪರಸ್ಥಿತಿ ಬಿಗಡಾಯಿಸಿದ ಬಳಿಕ ಅನಿವಾರ್ಯವಾಗಿ ಆಸ್ಪತ್ರೆಗೆ ಬರುತ್ತಾರೆ ಎಂದು ಈಕೆಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾಗಿ ಮೆಡಿಕಲ್​ ಜರ್ನಲ್ ಉಲ್ಲೇಖಿಸಿದೆ. ಅಂದಹಾಗೆ ಮಹಿಳೆಗೆ ಟ್ಯುನಿಶಿಯಾದ ಸ್ಫ್ಯಾಕ್ಸ್ ಎಂಬ ನಗರದ ಹಬೀಬ್​ ಬೌರ್ಗುಯಿಬಾ ವಿಶ್ವವಿದ್ಯಾಲಯ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ತೆರೆದ ಶಸ್ತ್ರಚಿಕಿತ್ಸೆ ಮೂಲಕ ಆಕೆಯ ಮೂತ್ರಕೋಶದಲ್ಲಿ ಸಿಲುಕಿದ್ದ ಗಾಜು ಮತ್ತು ಕಲ್ಲನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ: World Happiness Day : ನಾವು ಪರಸ್ಪರ ಸಂತೋಷವಾಗಿರಲು ಏನು ಮಾಡಬೇಕು ? ಇಲ್ಲಿದೆ ಮಾಹಿತಿ

Published On - 9:49 am, Sun, 20 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್