Video: ಪಾಕಿಸ್ತಾನದ ಸಿಯಾಲ್ಕೋಟ್ ಸೇನಾ ನೆಲೆಯಲ್ಲಿ ಭಯಂಕರ ಸ್ಫೋಟ; ತೀವ್ರ ಬೆಂಕಿ, ಆವರಿಸಿದ ದಟ್ಟ ಹೊಗೆ
ಸಿಯಾಲ್ಕೋಟ್ ಕಂಟೋನ್ಮೆಂಟ್ ಎಂಬುದು ಪಾಕಿಸ್ತಾನದ ಅತ್ಯಂತ ಹಳೇ ಮತ್ತು ಪ್ರಮುಖ ಸೇನಾ ನೆಲೆ. ಇದನ್ನು 1852ರಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಸ್ಥಾಪಿಸಿತ್ತು.
ಪಾಕಿಸ್ತಾನದ (Pakistan) ಉತ್ತರ ಭಾಗದಲ್ಲಿರುವ ನಗರವಾದ ಸಿಯಾಲ್ಕೋಟ್ ಮಿಲಿಟರಿ ನೆಲೆಯ (Sialkot Military Base)ಬಳಿ ಇಂದು ಭಾರಿ ಸ್ಫೋಟ ಉಂಟಾಗಿದೆ. ಸ್ಫೋಟದ ಭಯಂಕರ ಸದ್ದು ಪಂಜಾಬ್ ಪ್ರಾಂತ್ಯದಲ್ಲಿರುವ ಕಂಟೋನ್ಮೆಂಟ್ ಏರಿಯಾದವರೆಗೆ ಕೇಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ. ಭಾರಿ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಟ್ವೀಟ್ ಮಾಡಿರುವ ದೆಹಲಿಯ ಡೇಲಿ ಮಿಲಾಪ್ ಎಂಬ ಆನ್ಲೈನ್ ಪತ್ರಿಕೆ ಸಂಪಾದಕ ರಿಶಿ ಸುರಿ ಟ್ವೀಟ್ ಮಾಡಿ, ಪಾಕಿಸ್ತಾನದ ಸಿಯಾಲ್ಕೋಟ್ ಸೇನಾ ನೆಲೆ ಬಳಿ ಭಯಂಕರ ಸ್ಫೋಟ ಉಂಟಾಗಿದೆ. ಇದು ಶಸ್ತ್ರಾಸ್ತ್ರ ಸಂಗ್ರಹಣಾ ಸ್ಥಳವಾಗಿದೆ. ಸ್ಫೋಟವುಂಟಾದ ಜಾಗದಲ್ಲಿ ಬೆಂಕಿಯೂ ವ್ಯಾಪಕವಾಗಿ ಕಂಡುಬಂದಿತ್ತು. ಆದರೆ ಅಲ್ಲಿ ನಿಜಕ್ಕೂ ಆಗಿದ್ದೇನು? ಯಾಕಾಗಿ ಸ್ಫೋಟವಾಗಿದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಹಲವು ಬಾರಿ ಸ್ಫೋಟದ ಶಬ್ದ ಕೇಳುವ ಜತೆ, ಬೆಂಕಿ ಎದ್ದು ನಂತರ ಕಪ್ಪು ಹೊಗೆ ಆಕಾಶದಲ್ಲಿ ಆವರಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.
Reportedly Ammunition depot of Pakistan Army, Sialkot hit by “unidentified object”. Huge fire and ongoing blasts…
Massive explosion occurred at Pakistan Army Depot in Bhalan Wala, #Sialkot.
No Official Reason given. Ammo Depot is close to Jammu pic.twitter.com/4dgktLNIvb
— MUBreaking (@MUBreaking) March 20, 2022
ಸಿಯಾಲ್ಕೋಟ್ ಕಂಟೋನ್ಮೆಂಟ್ ಎಂಬುದು ಪಾಕಿಸ್ತಾನದ ಅತ್ಯಂತ ಹಳೇ ಮತ್ತು ಪ್ರಮುಖ ಸೇನಾ ನೆಲೆ. ಇದನ್ನು 1852ರಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಸ್ಥಾಪಿಸಿತ್ತು. ಸದ್ಯ ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಯೇ ಅಲ್ಲಾಡುತ್ತಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ 100 ಶಾಸಕರು ಮಾರ್ಚ್ 8ರಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಪಾಕಿಸ್ತಾನದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಸರ್ಕಾರವೇ ಕಾರಣ ಎಂದು ಆರೋಪಿಸಿದ್ದರು. ಇದೀಗ ಇಮ್ರಾನ್ ಖಾನ್ಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗುತ್ತಿದೆ ಎಂಬುದಾಗಿ ವರದಿಯಾಗಿದೆ. ಇನ್ನು ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯಂತೂ ತೀವ್ರವಾಗಿ ಹದಗೆಟ್ಟಿದ್ದು, ಅಲ್ಲಿ ಇಮ್ರಾನ್ ಖಾನ್ ಸ್ಥಾನ ಉಳಿಸಿಕೊಳ್ಳುವುದು ತುಸು ಕಷ್ಟವೇ ಆಗಿದೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ 200 ಕೋಟಿ ರೂ. ಗಳಿಸೋದು ಖಚಿತ; ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರದ್ದೇ ಆರ್ಭಟ