ಮರ್ಕಝ್ ನಿಜಾಮುದ್ದೀನ್ ಮಸೀದಿಯನ್ನು ಪುನಃ ತೆರೆಯಲು ಅನುಮತಿ ನೀಡಿದ ದೆಹಲಿ ಪೊಲೀಸ್

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (DDA) ಮಾರ್ಗಸೂಚಿಗಳಿಗೆ ಅನುಸಾರವಾಗಿ ಪ್ರತಿ ಮಹಡಿಯಲ್ಲಿ 100 ಕ್ಕಿಂತ ಕಡಿಮೆ ಜನರನ್ನು ಮಾತ್ರ ಅನುಮತಿಸಲಾಗುತ್ತದೆ.

ಮರ್ಕಝ್ ನಿಜಾಮುದ್ದೀನ್ ಮಸೀದಿಯನ್ನು ಪುನಃ ತೆರೆಯಲು ಅನುಮತಿ ನೀಡಿದ ದೆಹಲಿ ಪೊಲೀಸ್
ಮರ್ಕಝ್ ನಿಜಾಮುದ್ದೀನ್‌
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 16, 2022 | 7:48 PM

ಕೊವಿಡ್ -19  ನಿಯಮಗಳ ಉಲ್ಲಂಘನೆಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರ್ಕಝ್ ನಿಜಾಮುದ್ದೀನ್ (Markaz Nizamuddin) ಮುಚ್ಚಲಾಗಿತ್ತು. ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದ ಸುಮಾರು ಎರಡು ವರ್ಷಗಳ ನಂತರ, ಶಬ್-ಎ-ಬಾರಾತ್ ಸಂದರ್ಭನಲ್ಲಿ ಮಸೀದಿ ಬಂಗ್ಲೇ ವಾಲಿಯಲ್ಲಿ ನಾಲ್ಕು ಮಹಡಿಗಳಲ್ಲಿ ಪ್ರಾರ್ಥನೆ ನಡೆಸಲು ಮ್ಯಾನೇಜ್‌ಮೆಂಟ್‌ಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ.ಆದಾಗ್ಯೂ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (DDA) ಮಾರ್ಗಸೂಚಿಗಳಿಗೆ ಅನುಸಾರವಾಗಿ ಪ್ರತಿ ಮಹಡಿಯಲ್ಲಿ 100 ಕ್ಕಿಂತ ಕಡಿಮೆ ಜನರನ್ನು ಮಾತ್ರ ಅನುಮತಿಸಲಾಗುತ್ತದೆ. “ಮಸೀದಿ ಬಂಗ್ಲೇ ವಾಲಿಯ ನೆಲ ಮತ್ತು ಮೂರು ಮಹಡಿಗಳನ್ನು ಶಬ್-ಎ-ಬರಾತ್‌ಗೆ(Shab-e-Barat) ಒಂದು ದಿನ ಮೊದಲು ಮಧ್ಯಾಹ್ನ 12 ಗಂಟೆಗೆ ಮತ್ತೆ ತೆರೆಯಲಾಗುವುದು ಮತ್ತು ಶಬ್-ಎ-ಬರಾತ್‌ನ ಮರುದಿನ ಸಂಜೆ 4 ಗಂಟೆಗೆ ಮುಚ್ಚಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಸಂಪೂರ್ಣ ಲಸಿಕೆ ಪಡೆದ ಜನರಿಗೆ ಅಥವಾ ಲಕ್ಷಣರಹಿತ ಜನರಿಗೆ ಮಾತ್ರ ಆವರಣದೊಳಗೆ ಅನುಮತಿಸಲಾಗುವುದು. ಆದಾಗ್ಯೂ, ಮರ್ಕಝ್ ಆವರಣದೊಳಗೆ ವಿದೇಶಿಯರನ್ನು ಅನುಮತಿಸಲಾಗುವುದಿಲ್ಲ ಮತ್ತು ಪುನಃ ತೆರೆಯುವ ಅವಧಿಯಲ್ಲಿ ಯಾವುದೇ “ತಬ್ಲಿಘಿ ಚಟುವಟಿಕೆಗಳನ್ನು” ಅನುಮತಿಸಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ವಿದೇಶಿ ಮೂಲದ ಕೆಲವು ಭಕ್ತರು ಅಥವಾ ಒಸಿಐ ಕಾರ್ಡ್ ಹೊಂದಿದವರು ಮಸೀದಿ ಬಂಗ್ಲೇ ವಾಲಿಯಲ್ಲಿ ನಮಾಜ್ ಮಾಡಲು ಉದ್ದೇಶಿಸಿದರೆ/ಒತ್ತಾಯಿಸಿದರೆ, ಅವರ ಗುರುತಿನ ವಿವರಗಳು ಅಂದರೆ ಅವರ ಪಾಸ್‌ಪೋರ್ಟ್/ಒಲಿಐ ಕಾರ್ಡ್‌ನ ಫೋಟೊಕಾಪಿ ಜೊತೆಗೆ ಲಭ್ಯವಿರುವ ಯಾವುದೇ ಫೋಟೋ ಗುರುತಿನ ಚೀಟಿಯ ನಕಲು ಪ್ರತಿಯನ್ನು ವ್ಯವಸ್ಥಾಪಕರಿಗೆ ಮತ್ತು ಎಸ್‌ಎಚ್‌ಒಗೆ ಸಲ್ಲಿಸಲಾಗುವುದು ಎಂದು ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯು ದೆಹಲಿ ವಕ್ಫ್ ಮಂಡಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಭಕ್ತರು ಅಥವಾ ಸಂದರ್ಶಕರ ದಾಖಲೆಗಳನ್ನು ನಿರ್ವಹಿಸಲು ಮುಖ್ಯ ಪ್ರವೇಶದಲ್ಲಿ ಪ್ರತ್ಯೇಕ ರಿಜಿಸ್ಟರ್ ಇರುತ್ತದೆ ಎಂದು ಪೊಲೀಸರು ಹೇಳಿದ್ದಾರೆ. “ಎಲ್ಲಾ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳು ಮತ್ತು ಇತರ ಸ್ಥಳಗಳು/ಮಹಡಿಗಳಲ್ಲಿ ನಿರ್ವಹಣಾ ಸಮಿತಿಯು ಸ್ಥಳೀಯ ಮಹಡಿಗಳ ಮೇಲ್ವಿಚಾರಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸುತ್ತದೆ” ಎಂದು ಪತ್ರದಲ್ಲಿ ಹೇಳಿದೆ.

ಆವರಣದೊಳಗೆ ಯಾರಿಗೂ ತಂಗಲು ಅನುಮತಿಸಲಾಗುವುದಿಲ್ಲ ಮತ್ತು ಪುನರಾರಂಭದ ಸಮಯದಲ್ಲಿ ಎಲ್ಲಾ ಚಟುವಟಿಕೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ದೃಶ್ಯಾವಳಿಗಳನ್ನು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮುಂದೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮರ್ಕಝ್ ನಿಜಾಮುದ್ದೀನ್‌ನಲ್ಲಿ ನಿರ್ಬಂಧಗಳನ್ನು ಸಡಿಲಿಸುವಂತೆ ಕೋರಿ ದೆಹಲಿ ವಕ್ಫ್ ಬೋರ್ಡ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್‌ಗೆ ಕೇಂದ್ರವು ಸೋಮವಾರ ತಿಳಿಸಿದೆ, ಶಬ್-ಎ-ಬರಾತ್ ಮತ್ತು ರಂಜಾನ್ ತಿಂಗಳಲ್ಲಿ ಮಸೀದಿ ಬಂಗ್ಲೇ ವಾಲಿಯ ಮೂರು ಮಹಡಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವ ಬಗ್ಗೆ ನಗರ ಪೊಲೀಸರು ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಆದರೆ ಇತ್ತೀಚಿನ ಪೊಲೀಸ್ ಅನುಮತಿ ರಂಜಾನ್ ತಿಂಗಳಲ್ಲಿ ಪ್ರಾರ್ಥನೆ ನಡೆಸುವ ಬಗ್ಗೆ ಏನೂ ಮಾತಾಡಿಲ್ಲ . ಈ ಪ್ರಕರಣವನ್ನು ಬುಧವಾರ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರ ಪೀಠದ ಮುಂದೆ ವಿಚಾರಣೆಗೆ ಇಡಲಾಗಿದೆ. ಕಳೆದ ವರ್ಷ, ಶಬ್-ಎ-ಬರಾತ್‌ನಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ನಡೆಸಲು 50 ಜನರಿಗೆ ಮಾತ್ರ ಅನುಮತಿ ನೀಡಲಾಯಿತು ಮತ್ತು ನ್ಯಾಯಾಲಯದ ಆದೇಶದ ಆಧಾರದ ಮೇಲೆ ಅನುಮತಿ ನೀಡಲಾಯಿತು.

ಇದನ್ನೂ ಓದಿ: AgustaWestland case ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ವಿರುದ್ಧ ಸಿಬಿಐ ಆರೋಪಪಟ್ಟಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್