AgustaWestland case ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ವಿರುದ್ಧ ಸಿಬಿಐ ಆರೋಪಪಟ್ಟಿ

ಒಪ್ಪಂದದ ಕುರಿತು ಚರ್ಚೆ ನಡೆಯುತ್ತಿರುವಾಗ ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ಶರ್ಮಾ ಮತ್ತು ಪನೇಸರ್ ಸೇರಿದಂತೆ ಐವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಸಂಸ್ಥೆ ಆರೋಪಪಟ್ಟಿ ಸಲ್ಲಿಸಿದೆ.

AgustaWestland case ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ವಿರುದ್ಧ ಸಿಬಿಐ ಆರೋಪಪಟ್ಟಿ
ಶಶಿಕಾಂತ್ ಶರ್ಮಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 16, 2022 | 6:55 PM

ದೆಹಲಿ:  3,600 ಕೋಟಿ ರೂಪಾಯಿ ಅಗಸ್ಟಾವೆಸ್ಟ್‌ಲ್ಯಾಂಡ್ (AgustaWestland case) ಪ್ರಕರಣದಲ್ಲಿ ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಶಶಿಕಾಂತ್ ಶರ್ಮಾ (Shashi Kant Sharma)  ಮತ್ತು ಮಾಜಿ ಏರ್ ವೈಸ್ ಮಾರ್ಷಲ್ ಜಸ್ಬೀರ್ ಸಿಂಗ್ ಪನೇಸರ್ (Jasbir Singh Panesar) ಸೇರಿದಂತೆ ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಆರೋಪಪಟ್ಟಿ ಸಲ್ಲಿಸಿದೆ.ಒಪ್ಪಂದದ ಕುರಿತು ಚರ್ಚೆ ನಡೆಯುತ್ತಿರುವಾಗ ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ಶರ್ಮಾ ಮತ್ತು ಪನೇಸರ್ ಸೇರಿದಂತೆ ಐವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಸಂಸ್ಥೆ ಆರೋಪಪಟ್ಟಿ ಸಲ್ಲಿಸಿದೆ. ಮಾಜಿ ಉಪ ಮುಖ್ಯ ಟೆಸ್ಟ್ ಪೈಲಟ್ ಎಸ್‌ಎ ಕುಂಟೆ, ವಿಂಗ್ ಕಮಾಂಡರ್ (ನಿವೃತ್ತ) ಥಾಮಸ್ ಮ್ಯಾಥ್ಯೂ ಮತ್ತು ಗ್ರೂಪ್ ಕ್ಯಾಪ್ಟನ್ (ನಿವೃತ್ತ) ಎನ್ ಸಂತೋಷ್ ಅವರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿದೆ. ಏಜೆನ್ಸಿಯು ಮಾರ್ಚ್ 2020 ರಲ್ಲಿ ಸರ್ಕಾರದಿಂದ ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 14 ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಸಂಸ್ಥೆ ಚಾರ್ಜ್‌ಶೀಟ್ ಅನ್ನು ಸಲ್ಲಿಸಿತ್ತು. ಆದರೆ ದೃಢೀಕರಣದ ಕೊರತೆಯಿಂದ ಶರ್ಮಾ ಮತ್ತು ಇತರರನ್ನು ಕೈಬಿಟ್ಟಿತ್ತು. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಸಿದ ಶೋಧದ ಸಮಯದಲ್ಲಿ ಅಧಿಕಾರಿಗಳು “ಜೆಎಸ್ ಏರ್” ಅನ್ನು ಉಲ್ಲೇಖಿಸುವ ಟಿಪ್ಪಣಿಯನ್ನು ಮತ್ತು ಅದರಲ್ಲಿ ಉಲ್ಲೇಖಿಸಲಾದ ವಿವಿಧ ಜನರ ಮೊದಲಕ್ಷರಗಳನ್ನು ಕಂಡುಕೊಂಡಿದ್ದಾರೆ. ಟಿಪ್ಪಣಿಯನ್ನು ಮೈಕೆಲ್ ಸಿದ್ಧಪಡಿಸಿದ್ದಾರೆ ಮತ್ತು ಅದನ್ನು “ಬಜೆಟ್ ಶೀಟ್” ಎಂದು ಕರೆಯಲಾಯಿತು. ಮಿಲನ್ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗ ಅದರ ಉಲ್ಲೇಖವೂ ಸಿಕ್ಕಿತ್ತು.

ಮಿಲನ್ ನ್ಯಾಯಾಲಯದ ಆದೇಶದ ಪ್ರಕಾರ, ಟಿಪ್ಪಣಿಯು ಮೊದಲಕ್ಷರಗಳನ್ನು ಉಲ್ಲೇಖಿಸಿದೆ, ಬಹುಶಃ ‘AF’ ಮತ್ತು ‘Bur’ ನ ವಿವಿಧ ಮುಖ್ಯಸ್ಥರ ಅಡಿಯಲ್ಲಿ ಅಧಿಕಾರಿಗಳ ಹುದ್ದೆಗಳನ್ನು ಸೂಚಿಸುತ್ತದೆ. “Pol” ಶೀರ್ಷಿಕೆಯ ಅಡಿಯಲ್ಲಿ ‘AP’ ಎಂದು ಅದೇ ಟಿಪ್ಪಣಿಯಲ್ಲಿ ಉಲ್ಲೇಖಿಸಿದೆ. ನ್ಯಾಯಾಲಯದ ಆದೇಶವು ಈ ಮುಖ್ಯಸ್ಥರನ್ನು ‘ವಾಯುಪಡೆ’, ‘ಅಧಿಕಾರಶಾಹಿಗಳು’ ಮತ್ತು ‘ರಾಜಕಾರಣಿಗಳು’ ಎಂದು ಹೆಸರಿಸಿದೆ.

ಪ್ರತಿ ವ್ಯಕ್ತಿಯ ಸೂಚ್ಯ ಹೆಸರುಗಳ ಮೇಲೆ ಯುರೋಗಳಲ್ಲಿ ಅಂಕಿಗಳಿದ್ದವು. ‘AF’ ಮುಂದೆ ಯುರೋ 6 ಆಗಿದ್ದರೆ, ಅದು ‘Bur’ ಮುಂದೆ ಯುರೋ 8.4 ಮತ್ತು ‘Pol’ ಮುಂದೆ ಯುರೋ 15/16 ಎಂದಿತ್ತು.

‘AF’ ಅಡಿಯಲ್ಲಿ ನಮೂದಿಸಲಾದ ಮೊದಲಕ್ಷರಗಳಲ್ಲಿ Dch, PDSR, 2FTT ಮತ್ತು DG Maint . ‘Bur’ ಶೀರ್ಷಿಕೆಯ ಅಡಿಯಲ್ಲಿ, ಉಲ್ಲೇಖಿಸಲಾದ ಮೊದಲಕ್ಷರಗಳಲ್ಲಿ DS, JS Air, AFA Air  DG Acq, CVC ಮತ್ತು ಆಡಿಟರ್ ಜನರಲ್ ಎಂದಿದೆ.

ಸೆಪ್ಟೆಂಬರ್, 2020 ರಲ್ಲಿ ನೀಡಲಾದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ 14 ಆರೋಪಿಗಳು ಎಂಟು ವ್ಯಕ್ತಿಗಳು ಮತ್ತು ಐದು ಸಂಸ್ಥೆಗಳಿದ್ದವು.

ವ್ಯಕ್ತಿಗಳನ್ನು ರಾಜೀವ್ ಸಕ್ಸೇನಾ (ಅವರ ಕಂಪನಿಗಳು ಕ್ರಿಶ್ಚಿಯನ್ ಮೈಕೆಲ್ ಪರವಾಗಿ ಹಣವನ್ನು ಲಾಂಡರಿಂಗ್ ಮಾಡಿದ್ದಾರೆ), ಸಂದೀಪ್ ತ್ಯಾಗಿ ಅಲಿಯಾಸ್ ಕುಕಿ ತ್ಯಾಗಿ (ಮಾಜಿ ಐಎಎಫ್ ಮುಖ್ಯಸ್ಥ ಎಸ್‌ಪಿ ತ್ಯಾಗಿ ಅವರ ಕುಟುಂಬದವರು ), ಪ್ರವೀಣ್ ಬಕ್ಷಿ ಮತ್ತು ಐಡಿಎಸ್ ಇನ್ಫೋಟೆಕ್ ಎಂಡಿ ಪರತಾಪ್ ಕ್ರಿಶನ್ ಅಗರ್ವಾಲ್ (ರಾಜೀವ್ ಸಕ್ಸೇನಾ ಜೊತೆಗೆ ಕಿಕ್‌ಬ್ಯಾಕ್‌ಗಳನ್ನು ಲಾಂಡರಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ), ನರೇಂದ್ರ ಕುಮಾರ್ ಜೈನ್ ಮತ್ತು ಕೋಲ್ಕತ್ತಾದ ರಾಜೇಶ್ ಕುಮಾರ್ ಜೈನ್, ಸುನಿಲ್ ಕೊಠಾರಿ, ಆಗ OM ಮೆಟಲ್ಸ್ ಇನ್ಫೋಟೆಕ್ ಪ್ರೈ. ಲಿಮಿಟೆಡ್  ವ್ಯವಸ್ಥಾಪಕ ನಿರ್ದೇಶಕರಾಗಿದ್ದವರು, ಮೈಕೆಲ್‌ನ ನಿಕಟ ಸಹವರ್ತಿ ಮತ್ತು ವೆಸ್ಟ್‌ಲ್ಯಾಂಡ್ ಸಪೋರ್ಟ್ ಸರ್ವಿಸಸ್ ಲಿಮಿಟೆಡ್‌ನ ಮಾಜಿ ಜನರಲ್ ಮ್ಯಾನೇಜರ್ ಕೆ ವಿ ಕುಞಿಕೃಷ್ಣನ್, ಜಿಯಾಕೊಮಿನೊ ಸಪೋನಾರೊ, ಆಗ ಅಗಸ್ಟಾವೆಸ್ಟ್‌ಲ್ಯಾಂಡ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಎಂಡಿ, ಮತ್ತು ಆರೋಪಿ ವಕೀಲ ಗೌತಮ್ ಖೈತಾನ್ ಅವರೊಂದಿಗೆ ಕೆಲಸ ಮಾಡಿರುವ ದೀಪಕ್ ಗೋಯಲ್ ಎಂದು ಗುರುತಿಸಲಾಗಿದೆ.

ಐಡಿಎಸ್ ಇನ್ಫೋ ಟೆಕ್ ಲಿಮಿಟೆಡ್ ಚಂಡೀಗಢ, ಏರೋಮ್ಯಾಟ್ರಿಕ್ಸ್ ಇನ್ಫೋ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್, ನವದೆಹಲಿ, ನೀಲ್ ಮಾಧವ್ ಕನ್ಸಲ್ಟೆಂಟ್ಸ್ ಪ್ರೈ. ಲಿಮಿಟೆಡ್, ನವದೆಹಲಿ (ಅದರ ನಿರ್ದೇಶಕ ಸಂದೀಪ್ ತ್ಯಾಗಿ ಮೂಲಕ), ಮೈನಕ್ ಏಜೆನ್ಸಿ ಪ್ರೈ. ಲಿಮಿಟೆಡ್, (ಅದರ ನಿರ್ದೇಶಕರಾದ ಸಂದೀಪ್ ತ್ಯಾಗಿ ಮತ್ತು ಸಂಜೀವ್ ತ್ಯಾಗಿ ಮೂಲಕ), ಮತ್ತು ಇಂಟರ್ ಸ್ಟೆಲ್ಲರ್ ಟೆಕ್ನಾಲಜೀಸ್ ಲಿಮಿಟೆಡ್, ಮಾರಿಷಸ್ (ಅದರ ನಿರ್ದೇಶಕ ರಾಜೀವ್ ಸಕ್ಸೇನಾ ಮೂಲಕ)  ಸಂಸ್ಥೆಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ಸಿಬಿಐ ಪ್ರಕಾರ ಅಗಸ್ಟಾ ವೆಸ್ಟ್‌ಲ್ಯಾಂಡ್ ಅರ್ಹತೆ ಪಡೆಯಲು ತಾಂತ್ರಿಕ ಅವಶ್ಯಕತೆಗಳನ್ನು ಬದಲಾಯಿಸಿದ ಒಪ್ಪಂದವನ್ನು ರಕ್ಷಣಾ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಮತ್ತು ಇತರ ಇಬ್ಬರು ಮಧ್ಯವರ್ತಿಗಳಾದ ಕಾರ್ಲೋ ಗೆರೋಸಾ ಮತ್ತು ಗೈಡೋ ಹಾಶ್ಕೆ ಅವರು ಮಧ್ಯಸ್ಥಿಕೆ ವಹಿಸಿದ್ದಾರೆ. ನಂತರ ಮಾಜಿ ಐಎಎಫ್ ಮುಖ್ಯಸ್ಥ ಎಸ್‌ಪಿ ತ್ಯಾಗಿ ಅವರ ಕುಟುಂಬವನ್ನು “ನಿರ್ವಹಣೆ” ಮಾಡುತ್ತಿದ್ದರೆ, ಮಿಶೆಲ್ ರಕ್ಷಣಾ ಸಚಿವಾಲಯದ ಅಧಿಕಾರಿಗಳೊಂದಿಗೆ ವ್ಯವಹರಿಸುತ್ತಿದ್ದರು.

ಸರ್ಕಾರದ ಉನ್ನತ ಅಧಿಕಾರಿಗಳನ್ನು ಸಾಗಿಸಲು 1999 ರಲ್ಲಿ ಭಾರತೀಯ ವಾಯುಪಡೆಯು 12 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಪ್ರಸ್ತಾಪ ಮಾಡಲಾಗಿತ್ತು.. 2010 ರಲ್ಲಿ, ಅಗಸ್ಟಾ ವೆಸ್ಟ್‌ಲ್ಯಾಂಡ್‌ಗೆ 3,600 ಕೋಟಿ ರೂ.ಗೆ ಒಪ್ಪಂದವನ್ನು ನೀಡಲಾಯಿತು. ಆದಾಗ್ಯೂ, ಅಗಸ್ಟಾ ವೆಸ್ಟ್‌ಲ್ಯಾಂಡ್ ಅರ್ಹತೆ ಪಡೆಯಲು ಮತ್ತು ಬಿಡ್ ಗೆಲ್ಲಲು ಸಹಾಯ ಮಾಡಲು ಹೆಲಿಕಾಪ್ಟರ್‌ನ ಸೇವಾ ಸೀಲಿಂಗ್ ಅನ್ನು 6,000 ಮೀ ನಿಂದ 4,500 ಮೀ ಗೆ ಇಳಿಸುವುದು ಸೇರಿದಂತೆ ತಾಂತ್ರಿಕ  ವೈಶಿಷ್ಟ್ಯತೆಗಳನ್ನು  ತಿರುಚಲಾಗಿದೆ ಎಂಬ ಆರೋಪಗಳಿವೆ, ಇದಕ್ಕಾಗಿ ಲಂಚವನ್ನು ಪಾವತಿಸಲಾಗಿದೆ.

ಪ್ರಾಥಮಿಕ ತನಿಖೆಯ ನಂತರ ಸಿಬಿಐ ಮಾರ್ಚ್ 14, 2013 ರಂದು ಎಫ್ಐಆರ್ ದಾಖಲಿಸಿದೆ. ಎಫ್‌ಐಆರ್‌ನಲ್ಲಿ ನಾಲ್ಕು ಕಂಪನಿಗಳನ್ನು ಹೊರತುಪಡಿಸಿ ಮಾಜಿ ಐಎಎಫ್ ಮುಖ್ಯಸ್ಥ ಎಸ್‌ಪಿ ತ್ಯಾಗಿ ಮತ್ತು ಇತರ 12 ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಈ ವ್ಯಕ್ತಿಗಳಲ್ಲಿ ತ್ಯಾಗಿ ಕುಟುಂಬದ ಸದಸ್ಯರು ಮತ್ತು ಮೂವರು ಮಧ್ಯವರ್ತಿಗಳಾದ ಮೈಕೆಲ್, ಕಾರ್ಲೋ ಗೆರೋಸಾ ಮತ್ತು ಗೈಡೋ ಹಾಶ್ಕೆ ಸೇರಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಕೂಡ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ತನಿಖೆ ಆರಂಭಿಸಿದೆ.

ಸಿಬಿಐ ಮತ್ತು ಇಡಿ ತನಿಖೆಗಳ ಪ್ರಕಾರ, ಆಫ್‌ಸೆಟ್ ಕೆಟಗರಿಯಲ್ಲಿ (ಭಾರತದಲ್ಲಿ ಕಡ್ಡಾಯವಾಗಿ ಮಾಡಬೇಕಾದ ಕೆಲಸ), ಆಪಾದಿತ ಮಧ್ಯವರ್ತಿಗಳಿಂದ ಈ ಕಂಪನಿಗಳಿಗೆ ವರ್ಗಾಯಿಸಲು ಅಗಸ್ಟಾ ವೆಸ್ಟ್‌ಲ್ಯಾಂಡ್ 70 ಮಿಲಿಯನ್ ಯುರೋಗಳನ್ನು ಮೀಸಲಿಟ್ಟಿದೆ. ಮೈಕೆಲ್ ದುಬೈನಲ್ಲಿ ಗ್ಲೋಬಲ್ ಸರ್ವೀಸಸ್ ಎಫ್‌ಜೆಡ್‌ಇ ಅನ್ನು ಸ್ಥಾಪಿಸಿದರೆ, ಹ್ಯಾಷ್ಕೆ ಐಡಿಎಸ್ ಟುನೀಶಿಯಾ, ಐಡಿಎಸ್ ಮಾರಿಷಸ್ ಮತ್ತು ಏರೋಮ್ಯಾಟ್ರಿಕ್ಸ್ ಅನ್ನು ಸ್ಥಾಪಿಸಿದರು. ವಿವಿಧ ಚಾರ್ಜ್‌ಶೀಟ್‌ಗಳಲ್ಲಿ ತನಿಖಾಧಿಕಾರಿಗಳು ಮೈಕೆಲ್‌ಗೆ 42 ಮಿಲಿಯನ್ ಯುರೋಗಳು ಮತ್ತು ಹ್ಯಾಷ್ಕೆ 28 ಮಿಲಿಯನ್ ಯುರೋಗಳನ್ನು ಪಡೆಯಬೇಕಾಗಿತ್ತು ಎಂದು ಹೇಳಿದ್ದಾರೆ.

ನಿಜವಾದ ಒಪ್ಪಂದವೆಂದರೆ 70 ಮಿಲಿಯನ್ ಯುರೋಗಳಲ್ಲಿ ಕೇವಲ ಶೇ 30 ಇಂಜಿನಿಯರಿಂಗ್ ಸೇವೆಗಳು ಮತ್ತು ಮಾಧ್ಯಮ ನಿರ್ವಹಣೆ ಸೇರಿದಂತೆ ನಿಜವಾದ ಕೆಲಸಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಉಳಿದವುಗಳನ್ನು ಲಂಚ ನೀಡಲು ಬಳಲಾಗುತ್ತದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.

ಆಂಗ್ಲೋ-ಇಟಾಲಿಯನ್ ಸಂಸ್ಥೆಯ ಪರವಾಗಿ ಒಪ್ಪಂದವನ್ನು ತಿರುಗಿಸಲು ಭಾರತೀಯ ಅಧಿಕಾರಿಗಳಿಗೆ 362 ಕೋಟಿ ರೂಪಾಯಿ ಲಂಚ ನೀಡಲಾಗಿದೆ ಎಂದು ಸಿಬಿಐ ಆರೋಪಿಸಿದೆ.  ಮೈಕೆಲ್ ಪಡೆಯಲಿರುವ ಮೊತ್ತದಲ್ಲಿ 30 ಮಿಲಿಯನ್ ಯೂರೋಗಳು ಕಿಕ್‌ಬ್ಯಾಕ್ ಎಂದು ಹೇಳಲಾಗಿದೆ. ಇಡಿ ಚಾರ್ಜ್‌ಶೀಟ್ ಪ್ರಕಾರ, ಈ ಪೈಕಿ 24 ಮಿಲಿಯನ್ ಹಣವನ್ನು ಒಪ್ಪಂದವನ್ನು ರದ್ದುಗೊಳಿಸುವ ಮೊದಲು ಪಾವತಿಸಲಾಗಿದೆ.

ಇದನ್ನೂ ಓದಿಒಟಿಟಿ ವಿಚಾರದಲ್ಲಿ ಶಾರುಖ್​ ಖಾನ್​ ಹೇಳಿದ್ದು ಸುಳ್ಳು?; ಹೊರಬಿತ್ತು ಅಸಲಿ ವಿಚಾರ

Published On - 5:47 pm, Wed, 16 March 22