AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿ ಹೆಚ್ಚು ಬಿಲಿಯನೇರ್​ಗಳಿರುವ ಭಾರತದ ಟಾಪ್ 3 ನಗರಗಳಲ್ಲಿ ಬೆಂಗಳೂರೂ ಒಂದು!

ಅತ್ಯಧಿಕ ಬಿಲಿಯನೇರ್​ಗಳು ವಾಸವಾಗಿರುವ ಭಾರತದ ನಗರಗಳ ಪೈಕಿ 72 ಬಿಲಿಯನೇರ್​ಗಳನ್ನು ಹೊಂದಿರುವ ಮುಂಬೈ ಮೊದಲ ಸ್ಥಾನದಲ್ಲಿದೆ.

ಅತಿ ಹೆಚ್ಚು ಬಿಲಿಯನೇರ್​ಗಳಿರುವ ಭಾರತದ ಟಾಪ್ 3 ನಗರಗಳಲ್ಲಿ ಬೆಂಗಳೂರೂ ಒಂದು!
ಮುಂಬೈ
TV9 Web
| Updated By: ಸುಷ್ಮಾ ಚಕ್ರೆ|

Updated on:Mar 16, 2022 | 6:54 PM

Share

ನವದೆಹಲಿ: ಭಾರತದಲ್ಲಿ ಶ್ರೀಮಂತರ ಸಂಖ್ಯೆಗೇನೂ ಕೊರತೆಯಿಲ್ಲ. ಒಂದೆಡೆ ಸ್ಲಂಗಳು, ತೀರಾ ಕಡು ಬಡವರ ಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಅತಿ ಶ್ರೀಮಂತರ ಸಂಖ್ಯೆಯೂ ಏರುತ್ತಲೇ ಇದೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2022ರ ಪ್ರಕಾರ ಭಾರತದ ಮೂರು ನಗರಗಳಲ್ಲಿ ಅತಿ ಹೆಚ್ಚು ಶ್ರೀಮಂತರು ವಾಸವಾಗಿದ್ದಾರೆ. ಹಾಗಿದ್ದರೆ ಆ ಮೂರು ಸಿಟಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. ಭಾರತದ ಶ್ರೀಮಂತರ ಪೈಕಿ 72 ಬಿಲಿಯನೇರ್‌ಗಳು ವಾಸಿಸುವ ಮುಂಬೈ ದೇಶದಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳಿರುವ ನಗರವೆಂದು ಪ್ರಸಿದ್ಧವಾಗಿದೆ. ಎರಡನೇ ಅತಿ ಹೆಚ್ಚು ಬಿಲಿಯನೇರ್​ಗಳಿರುವ ನಗರವೆಂದರೆ ರಾಷ್ಟ್ರ ರಾಜಧಾನಿ ದೆಹಲಿ. ಮೂರನೇ ಸ್ಥಾನವನ್ನು ನಮ್ಮ ಬೆಂಗಳೂರು ಪಡೆದಿದ್ದು, ಸಿಲಿಕಾನ್ ಸಿಟಿ ಕೂಡ ಭಾರತದಲ್ಲೇ ಅತಿ ಹೆಚ್ಚು ಬಿಲಿಯನೇರ್​ಗಳಿರುವ ನಗರಗಳಲ್ಲೊಂದು.

2022ರ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2,557 ಕಂಪನಿಗಳು ಮತ್ತು 69 ದೇಶಗಳಿಂದ 3,381 ಬಿಲಿಯನೇರ್‌ಗಳಿಗೆ ಸ್ಥಾನ ನೀಡಿದೆ. ಸುಮಾರು 2,071 ಬಿಲಿಯನೇರ್‌ಗಳು ತಮ್ಮ ಸಂಪತ್ತಿನ ಏರಿಕೆಯನ್ನು ಕಂಡಿದ್ದಾರೆ. ಅದರಲ್ಲಿ 490 ಹೊಸ ಮುಖಗಳಾಗಿವೆ. ಇದರ ನಡುವೆ 942 ಬಿಲಿಯನೇರ್‌ಗಳ ಸಂಪತ್ತು ಕಡಿಮೆಯಾಗಿದೆ ಮತ್ತು 35 ಬಿಲಿಯನೇರ್‌ಗಳು ಸಾವನ್ನಪ್ಪಿದ್ದಾರೆ. ಸುಮಾರು 368 ಬಿಲಿಯನೇರ್‌ಗಳ ಸಂಪತ್ತು ಯಾವುದೇ ಏರಿಳಿತ ಕಂಡಿಲ್ಲ.

ಬಿಲಿಯನೇರ್​ಗಳು ವಾಸವಾಗಿರುವ ಭಾರತದ ನಗರಗಳ ಪೈಕಿ 72 ಬಿಲಿಯನೇರ್​ಗಳನ್ನು ಹೊಂದಿರುವ ಮುಂಬೈ ಮೊದಲ ಸ್ಥಾನದಲ್ಲಿದೆ. 51 ಬಿಲಿಯನೇರ್‌ಗಳನ್ನು ಹೊಂದಿರುವ ದೆಹಲಿ ಎರಡನೇ ಸ್ಥಾನದಲ್ಲಿದ್ದರೆ, 28 ಬಿಲಿಯನೇರ್‌ಗಳನ್ನು ಹೊಂದಿರುವ ಬೆಂಗಳೂರು ಮೂರನೇ ಸ್ಥಾನದಲ್ಲಿದೆ ಎಂದು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2022 ಬಹಿರಂಗಪಡಿಸಿದೆ.

ಭಾರತವು ವಿಶ್ವದ ಶ್ರೀಮಂತ ವಾಯುಯಾನ ಬಿಲಿಯನೇರ್‌ಗಳಿಗೆ ನೆಲೆಯಾಗಿದೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2022ರ ಪ್ರಕಾರ, ಕ್ರಮವಾಗಿ 4.3 ಬಿಲಿಯನ್ ಮತ್ತು 4.2 ಬಿಲಿಯನ್ ಸಂಪತ್ತನ್ನು ಹೊಂದಿರುವ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ಮತ್ತು ‘ಇಂಡಿಗೋ’ ಏರ್‌ಲೈನ್ಸ್‌ನ ಕುಟುಂಬವು ಅತ್ಯಂತ ಶ್ರೀಮಂತ ವಾಯುಯಾನ ಬಿಲಿಯನೇರ್‌ಗಳಾಗಿದ್ದಾರೆ. ಕಳೆದ ದಶಕದಲ್ಲಿ ಭಾರತೀಯ ಬಿಲಿಯನೇರ್‌ಗಳ ಸಂಖ್ಯೆ ಪ್ರತಿ 5 ವರ್ಷಗಳಿಗೊಮ್ಮೆ ದುಪ್ಪಟ್ಟಾಗಿದೆ.

ಭಾರತದಲ್ಲಿ ಈಗ 249 ಬಿಲಿಯನೇರ್‌ಗಳಿದ್ದು, ಅವರಲ್ಲಿ 215 ಮಂದಿ ಭಾರತದಲ್ಲಿಯೇ ವಾಸಿಸುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಭಾರತೀಯ ಬಿಲಿಯನೇರ್‌ಗಳ ಸಂಖ್ಯೆ ದ್ವಿಗುಣವಾಗುತ್ತಿದೆ ಎಂದು ವರದಿ ಹೇಳಿದೆ. ಅತಿ ಹೆಚ್ಚು ಮಿಲಿಯನೇರ್‌ಗಳನ್ನು ಹೊಂದಿರುವ ಭಾರತದ ಟಾಪ್ 3 ನಗರಗಳೆಂದರೆ,

– ಮುಂಬೈ – 20,300 ಮಿಲಿಯನೇರ್‌ಗಳು

– ದೆಹಲಿ – 17,400 ಮಿಲಿಯನೇರ್‌ಗಳು

– ಕೋಲ್ಕತ್ತಾ – 10,500 ಮಿಲಿಯನೇರ್

ಇದನ್ನೂ ಓದಿ: Bengaluru: 40 ಪೈಸೆ ಹೆಚ್ಚು ಬಿಲ್ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ 4,000 ರೂ. ದಂಡ ತೆತ್ತ ಬೆಂಗಳೂರಿನ ಗ್ರಾಹಕ!

Global Rich List 2022 ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿಗೆ ಎರಡನೇ ಸ್ಥಾನ

Published On - 6:49 pm, Wed, 16 March 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ