ಉಕ್ರೇನ್​ ಯುದ್ಧದ ಪರಿಣಾಮ: ಕರ್ನಾಟಕದ ಹೊಟೆಲ್​ಗಳಲ್ಲಿ ವಡೆ, ಪಕೋಡಾ, ಪೂರಿ ಬೆಲೆ ಹೆಚ್ಚಳ

ತಿನಿಸುಗಳ ದರ ಏರಿಸಲು ಅವಕಾಶ ಸಿಗುತ್ತಿಲ್ಲ. ಹೀಗಾಗಿ ಬಹುತೇಕ ಹೊಟೆಲ್​ಗಳು ಕರಿದ ತಿಂಡಿಗಳನ್ನು ತಯಾರಿಸುವುದನ್ನೇ ಕಡಿಮೆ ಮಾಡುತ್ತಿವೆ. ಕೆಲ ಹೊಟೆಲ್​ಗಳು ಬೆಲೆ ಹೆಚ್ಚಳ ಮಾಡಿವೆ.

ಉಕ್ರೇನ್​ ಯುದ್ಧದ ಪರಿಣಾಮ: ಕರ್ನಾಟಕದ ಹೊಟೆಲ್​ಗಳಲ್ಲಿ ವಡೆ, ಪಕೋಡಾ, ಪೂರಿ ಬೆಲೆ ಹೆಚ್ಚಳ
ಅಡುಗೆ ಎಣ್ಣೆ ಮತ್ತು ಜಿಲೇಬಿ ತಯಾರಿಕೆ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 17, 2022 | 7:54 AM

ಬೆಂಗಳೂರು: ಉಕ್ರೇನ್ ಮೇಲೆ ರಷ್ಯಾ ಸೇನೆ (Russia Ukraine Conflict) ನಡೆಸಿರುವ ಭೀಕರ ದಾಳಿಯಿಂದ ಅಡುಗೆಗೆ ಬಳಸುವ ಸೂರ್ಯಕಾಂತಿ ಎಣ್ಣೆಗೆ ವಿಶ್ವದಾದ್ಯಂತ ಸಂಕಷ್ಟ ಬಂದಿದೆ. ಭಾರತದಲ್ಲಿಯೂ ಅಡುಗೆಎಣ್ಣೆ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಕೊರೊನಾ ಸಂಕಷ್ಟದಿಂದ ಆಗಿದ್ದ ನಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಹೊಟೆಲ್​ ಉದ್ಯಮಕ್ಕೆ ಈ ಹೊಡೆತ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗೆಂದು ತಿನಿಸುಗಳ ದರ ಏರಿಸಲು ಅವಕಾಶ ಸಿಗುತ್ತಿಲ್ಲ. ಹೀಗಾಗಿ ಬಹುತೇಕ ಹೊಟೆಲ್​ಗಳು ಕರಿದ ತಿಂಡಿಗಳನ್ನು ತಯಾರಿಸುವುದನ್ನೇ ಕಡಿಮೆ ಮಾಡುತ್ತಿವೆ. ಕೆಲ ಹೊಟೆಲ್​ಗಳು ಬೆಲೆ ಹೆಚ್ಚಳ ಮಾಡಿವೆ.

ಖಾದ್ಯತೈಲ ಸಂಗ್ರಹಕ್ಕೂ ರಾಜ್ಯ ಸರ್ಕಾರ ಮಿತಿ ಹೇರಿದೆ. ಹೀಗಾಗಿ ಬೇಕಿರುವಷ್ಟು ಪ್ರಮಾಣದಲ್ಲಿ ಅಡುಗೆಎಣ್ಣೆ ಸಂಗ್ರಹಿಸಲೂ ಹೊಟೆಲ್​ಗಳಿಗೆ ಸಾಧ್ಯವಾಗುತ್ತಿಲ್ಲ. ಬಹುತೇಕ ಹೊಟೆಲ್​ಗಳು ಕರಿದ ತಿಂಡಿಗಳಿಗೆ ಬದಲಾಗಿ, ಹುರಿದ ತಿಂಡಿಗಳನ್ನು ಗ್ರಾಹಕರಿಗೆ ಕೊಡಲು ಮುಂದಾಗಿವೆ. ಖಾದ್ಯತೈಲ ಬೆಲೆ ಏರಿಕೆಯಿಂದ ಹೊಟೆಲ್ ಉದ್ಯಮದ ಮೇಲೆ ಆಗಿರುವ ಪರಿಣಾಮ ಕುರಿತು ಚರ್ಚಿಸಲು ಶೀಘ್ರದಲ್ಲಿಯೇ ಸಭೆ ನಡೆಸಲು ಬೃಹತ್ ಬೆಂಗಳೂರು ಹೊಟೆಲ್ ಉದ್ಯಮಿಗಳ ಸಂಘ (Bruhat Bengaluru Hoteliers Association – BBHA) ಮುಂದಾಗಿದೆ. ಸಂಘದ ಪ್ರತಿನಿಧಿಗಳು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಬೆಲೆ ಏರಿಕೆಯಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದರು.

‘ತಿನಿಸುಗಳ ದರ ಏರಿಸುವ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ವರ್ಗಾಯಿಸುವುದ ಸುಲಭ. ಆದರೆ ಗ್ರಾಹಕರ ಆರ್ಥಿಕ ಪರಿಸ್ಥಿತಿಯನ್ನೂ ನಾವು ಗಮನಿಸಬೇಕಿದೆ. ಹೀಗಾಗಿ ಕರಿದ ಅಥವಾ ಹೆಚ್ಚು ಎಣ್ಣೆ ಬಳಕೆಯಾಗುವ ವಸ್ತುಗಳಿಗೆ ಬದಲಾಗಿ ಇತರ ಸುಲಭ ಮಾರ್ಗಗಳನ್ನು ಅನುಸರಿಸಲು ಮುಂದಾಗಿದ್ದೇವೆ. ಕೆಲ ಹೊಟೆಲ್​ಗಳಿಗೆ ಅಗತ್ಯ ಪ್ರಮಾಣದಲ್ಲಿ ಖಾದ್ಯತೈಲ ಖರೀದಿಸಲೂ ಸಾಧ್ಯವಾಗುತ್ತಿಲ್ಲ ಎನ್ನುವ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರ ಹೇಳಿಕೆಯನ್ನು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ವರದಿ ಮಾಡಿವೆ.

ಬೆಲೆಯಲ್ಲಿ ಸಮತೂಕ ಕಾಯ್ದುಕೊಳ್ಳಲು ಹೊಟೆಲ್​ಗಳು ಊಟದ ಜೊತೆಗೆ ಕೊಡುತ್ತಿದ್ದ ವಸ್ತುಗಳಲ್ಲಿ ವ್ಯತ್ಯಯ ಮಾಡುವ ವಿಧಾನ ಕಂಡುಕೊಂಡಿವೆ. ‘ಪೂರಿಗೆ ಬದಲು ಚಪಾತಿ ಅಥವಾ ದೋಸೆ ಕೊಡುವುದು, ಹಪ್ಪಳ ಅಥವಾ ಬಜ್ಜಿ ಬದಲು ಹೆಚ್ಚುವರಿಯಾಗಿ ಅನ್ನದ ಇತರ ತಿಂಡಿ ಕೊಡುವ ಬಗ್ಗೆ ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ಹೊಟೆಲ್ ಮತ್ತು ರೆಸ್ಟೊರೆಂಟ್ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್.

ಹೊಟೆಲ್​ಗಳಲ್ಲಿ ಮಾತ್ರವಲ್ಲ, ಎಷ್ಟೋ ಮನೆಗಳಲ್ಲಿಯೂ ಎಣ್ಣೆ ಬಳಕೆ ಕಡಿಮೆಯಾಗಿದೆ. ‘ಆಂಬೊಡೆ, ಪಕೋಡದಂಥ ತಿಂಡಿಗಳನ್ನು ಮೊದಲು ವಾರಕ್ಕೆ ಮೂರು ದಿನವಾದರೂ ಮಾಡುತ್ತಿದ್ದೆವು. ಈಗ ಭಾನುವಾರಕ್ಕೆ ಸೀಮಿತಗೊಳಿಸಿಕೊಂಡಿದ್ದೇವೆ. ಅದರ ಬದಲು ಬೇರೆ ಕುರುಕಲು ತಿಂಡಿಗಳನ್ನು ಮಕ್ಕಳಿಗೆ ಮಾಡಿಕೊಡುತ್ತೇನೆ’ ಎನ್ನುತ್ತಾರೆ ದೊಡ್ಡಬಳ್ಳಾಪುರದ ಗೃಹಿಣಿ ಅಶ್ವಿನಿ.

ಇದನ್ನೂ ಓದಿ: Edible Oil: ವ್ಯಾಪಾರಿಗಳು ಖಾದ್ಯ ತೈಲದ ಬೆಲೆ ಏರಿಸಲು ರಷ್ಯಾ- ಉಕ್ರೇನ್​ ಯುದ್ಧವೇ ಅಸ್ತ್ರ

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ: ಮಾರಾಟಗಾರರ ಮೇಲೆ ಕೃತಕ ಅಭಾವ ಸೃಷ್ಟಿ ಆರೋಪ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್