ರಷ್ಯಾ – ಉಕ್ರೇನ್ ಯುದ್ಧ: ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ: ಮಾರಾಟಗಾರರ ಮೇಲೆ ಕೃತಕ ಅಭಾವ ಸೃಷ್ಟಿ ಆರೋಪ
ರಷ್ಯಾ ಉಕ್ರೇನ್ ಯುದ್ದ 14ನೇ ದಿನವೂ ಮುಂದುವರೆದ ಹಿನ್ನಲೆಯಲ್ಲಿ ಅಡುಗೆ ಎಣ್ಣೆಯ ಮೇಲೆ ನೇರ ಪರಿಣಾಮ ಬೀರಿದೆ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿದೆ.
ರಷ್ಯಾ ಉಕ್ರೇನ್ ಯುದ್ದ 14ನೇ ದಿನವೂ ಮುಂದುವರೆದ ಹಿನ್ನಲೆಯಲ್ಲಿ ಅಡುಗೆ ಎಣ್ಣೆಯ ಮೇಲೆ ನೇರ ಪರಿಣಾಮ ಬೀರಿದೆ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿದೆ. ಸೂಪರ್ ಮಾರ್ಕೆಟ್ ಗಳಲ್ಲಿ ಅಡುಗೆ ಎಣ್ಣೆ ಮಾರಾಟವನ್ನು ಮಿತಿಗೊಳಿಸಲಾಗಿದೆ. ಗ್ರಾಹಕರಿಗೆ ಅಳತೆಯ ಮೂಲಕ ಅಡುಗೆ ಎಣ್ಣೆಗಳನ್ನು ನೀಡುತ್ತಿದೆ. ಬೇಡಿಕೆ ಮತ್ತು ಆಮದು ವ್ಯತಿರಿಕ್ತವಾಗಿರುವ ಕಾರಣ ಸೂಪರ್ ಮಾರ್ಕೆಟ್ ಗಳಲ್ಲಿ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಸ್ಟಾಕ್ ನೋಡಿಕೊಂಡು ಅಡುಗೆ ಎಣ್ಣೆ ಮಾರಾಟ ಮಾಡಲಾಗುತ್ತಿದೆ. ವೋರ್, ರಿಲಯನ್ಸ್ ಮಾರ್ಟ್ ಗಳಲ್ಲಿ ಅಡುಗೆ ಎಣ್ಣೆ ಮಿತಿಗೊಳಿಸಿ ಒಬ್ಬರಿಗೆ ಇಂತಿಷ್ಟೇ ಮೀಟರ್ ಅಡುಗೆ ಎಣ್ಣೆ ಮಾರಾಟ ಮಾಡಲಾಗುತ್ತಿದೆ.
ಭಾರತಕ್ಕೆ ಶೇ. 90ರಷ್ಟು ಸೂರ್ಯಕಾಂತಿ ಎಣ್ಣೆ ರಷ್ಯಾ-ಉಕ್ರೇನ್‌ನಿಂದ ಆಮದು ಆಗುತ್ತಿದೆ. ಆದರೆ ಈಗ ಉಭಯ ರಾಷ್ಟ್ರಗಳ ಮಧ್ಯದ ಬಿಕ್ಕಟ್ಟಿನಿಂದ ಅಡುಗೆ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿ ಇದರ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಿದೆ. ಆಮದು ಕಡಿಮೆಯಾಗಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಡಿಲರ್ಸ್ ಹಾಗೂ ಮಾರಟಗಾರರು ಅಡುಗೆ ಎಣ್ಣೆಯನ್ನು ಮಾರುಕಟ್ಟೆಗೆ ಬಿಡದೇ ಸ್ಟಾಕ್ ಮಾಡಿ, ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕೂಡ ಏರಿಕೆಯಾಗಿದ್ದು, ಅಡುಗೆ ಎಣ್ಣೆಗೆ ಹಾಹಾಕರ ಸೃಷ್ಟಿಯಾಗಿದೆ. ಎಣ್ಣೆ ಆಭಾವ ಸೃಷ್ಟಿಸಿ ವರ್ತಕರು ದುಡ್ಡು ಮಾಡಲು ಮುಂದಾಗಿದ್ದು ಮದ್ಯಮ ವರ್ಗದ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ ವರ್ತಕರ ಈ ದಂಧೆಗೆ ಹೋಟಲ್ ಗಳಲ್ಲಿಯೂ ಸಮರ್ಪಕ ಅಡುಗೆ ಎಣ್ಣೆ ಸಿಗುತ್ತಿಲ್ಲ ಎನ್ನುವ ದೂರು ಆರಂಭವಾಗಿದೆ.
ಇನ್ನು ಖಾದ್ಯ ತೈಲದ ದರ ಸೂಪರ್ ಮಾರ್ಕೆಟ್ ಗಳಲ್ಲಿ ಏರಿಕೆಯಾಗಿದ್ದು, ಗೋಲ್ಡ್ ವಿನ್ನರ್ ಲೀಟರ್ ಗೆ 178 ರೂ.,ಫಾರ್ಚೂನ್ ಲೀ. ಗೆ 178 ರೂ. ಸನ್ ಫ್ಯೂರ್ ಲೀಟರ್ 180 ರೂ. ರುಚಿ ಗೋಲ್ಡ್ 155 ರೂ. ಆಗಿದೆ. ದಿನಸಿ ಅಂಗಡಿಗಳಲ್ಲಿ ಅಡುಗೆ ಎಣ್ಣೆ ದರ ಗೋಲ್ಡ್ ವಿನ್ನರ್ ಲೀಟರ್ ಗೆ 188 ರೂ.,ಫಾರ್ಚೂನ್ ಲೀಟರ್ ಗೆ 185 ರೂ. ಸನ್ ಫ್ಯೂರ್ ಲೀಟರ್ 190 ರೂ. ರುಚಿ ಗೋಲ್ಡ್ 165 ರೂ ಆಗಿದೆ.
ಈ ಬಗ್ಗೆ ಎಂಪಿಎಂಸಿ ನೌಕರರ ಸಂಘದ ಅಧ್ಯಕ್ಷ ಅರಣ್ ಪರಮೇಶ್ ಮಾತನಾಡಿ, ಯುದ್ದ ಪ್ರಾರಂಭಕ್ಕೆ ಮೊದಲು 130 ರೂಪಾಯಿ ಇತ್ತು. ಈಗ ಈಗ 180- 190ಕ್ಕೆ ಏರಿಕೆಯಾಗಿದೆ. ಯುದ್ಧದ ನೆಪವೊಡ್ಡಿ ಆಯಿಲ್ ಕಂಪನಿಗಳಿಂದ ದಂಧೆ ಶುರುವಾಗಿದೆ. ಜನಗಳ ಮೇಲೆ ಹೊರೆ ಹಾಕಿ ದುಡ್ಡು ಮಾಡುತ್ತಿದ್ದಾರೆ ಸರ್ಕಾರ ತಕ್ಷಣವೇ ದಾಳಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ:
Published On - 1:38 pm, Wed, 9 March 22