ತುಮಕೂರು: ಯುವತಿ ಸಾವು ಪ್ರಕರಣ; ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ವಿರುದ್ಧ ಎಫ್ಐಆರ್ ದಾಖಲು
ಯುವತಿ ಜತೆ ಲೈಂಗಿಕ ಸಂಪರ್ಕ ಹೊಂದಿದ್ದ ಆರೋಪಿ, ಯುವತಿ ಗರ್ಭಿಣಿಯಾದ ಹಿನ್ನೆಲೆ, ಗರ್ಭಪಾತಕ್ಕೆ ಯತ್ನಿಸಿದ್ದ ಎಂದು ಆರೋಪ ಕೇಳಿಬಂದಿದೆ. ಯುವತಿ ಮಾತ್ರೆ ಸೇವಿಸಿದ್ದ ಹಿನ್ನೆಲೆ ಅಡ್ಡಪರಿಣಾಮ ಉಂಟಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ತುಮಕೂರು: ಇಲ್ಲಿನ ಯುವತಿ ಸಾವು ಪ್ರಕರಣದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪೊಲೀಸರಿಂದ ಆರೋಪಿ ರಾಜೇಂದ್ರ ಕುಮಾರ್ ಸೆರೆ ಹಿಡಿಯಲಾಗಿದೆ. ಯುವತಿ ಜತೆ ಲೈಂಗಿಕ ಸಂಪರ್ಕ ಹೊಂದಿದ್ದ ಆರೋಪಿ, ಯುವತಿ ಗರ್ಭಿಣಿಯಾದ ಹಿನ್ನೆಲೆ, ಗರ್ಭಪಾತಕ್ಕೆ ಯತ್ನಿಸಿದ್ದ ಎಂದು ಆರೋಪ ಕೇಳಿಬಂದಿದೆ. ಯುವತಿ ಗರ್ಭಪಾತಕ್ಕೆ ಮಾತ್ರೆ ಸೇವಿಸಿದ್ದ ಹಿನ್ನೆಲೆ ಅಡ್ಡಪರಿಣಾಮ ಉಂಟಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದ್ದು, ಯುವತಿ ಮೊಬೈಲ್‌ನಲ್ಲಿದ್ದ ಮಾಹಿತಿ ಆಧರಿಸಿ ತನಿಖೆ ನಡೆಸಲಾಗುತ್ತಿದೆ.
ತುಮಕೂರಿನ ಸಿಎಸ್ಐ ವೆಸ್ಲಿ ಚರ್ಚ್ನಲ್ಲಿ ಸಭಾಪಾಲನ ಸದಸ್ಯನಾಗಿದ್ದ ರಾಜೇಂದ್ರಕುಮಾರ್, 2013 ರಿಂದ 2018ರ ಅವಧಿಯಲ್ಲಿ ತುಮಕೂರು ಪಾಲಿಕೆಯ ನಾಮಿನಿ ಸದಸ್ಯನಾಗಿದ್ದ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರಾಜೇಂದ್ರಕುಮಾರ್, 18 ವರ್ಷದ ಯುವತಿಗೆ ಎಂಬಾಕೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಗೆ ಗರ್ಭಪಾತದ ಮಾತ್ರೆ ನೀಡಿದ್ದ ಎಂದು ತಿಳಿದುಬಂದಿದೆ. ಗರ್ಭಪಾತದ ಔಷಧಿಯ ಅಡ್ಡ ಪರಿಣಾಮದಿಂದ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾರೆ. ಇದೀಗ ತುಮಕೂರಿನ ನಗರ ಪೊಲೀಸ್ ಠಾಣೆಯಲ್ಲಿ ರಾಜೇಂದ್ರ ಕುಮಾರ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, ರಾಜೇಂದ್ರ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 302,201,504,506,34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೊಬೈಲ್ ನಿಂದ ಪತ್ತೆಯಾಯ್ತು ಯುವತಿಯ ಸಾವಿನ ರಹಸ್ಯ
ಪ್ರಕರಣ ನಡೆದು ವಾರದ ಬಳಿಕ ಯುವತಿಯ ಮೊಬೈಲ್ ಪರಿಶೀಲಿಸುವ ವೇಳೆ ರಾಜೇಂದ್ರ ಕುಮಾರ್ ಮುಖವಾಡ ಬಯಲಾಗಿದೆ. ರಾಜೇಂದ್ರಕುಮಾರ್ ಜೊತೆಗೆ ಮಾತನಾಡಿದ್ದ ಆಡಿಯೋ ರೆಕಾರ್ಡ್ ಹಾಗೂ ಪೋಟೋ, ವಿಡಿಯೋ ಪತ್ತೆ ಆಗಿದೆ. ಮಗಳ ಸಾವು ಕೊಲೆ ಎಂದು ಶಂಕಿಸಿ ತುಮಕೂರು ನಗರ ಪೊಲೀಸರಿಗೆ ತಾಯಿ ದೂರು ನೀಡಿದ್ದಾರೆ. ರಾಜೇಂದ್ರ ಕುಮಾರ್ ಅನ್ನು ವಶಕ್ಕೆ ಪಡೆದು ವಿಚಾರ ವೇಳೆ ಅತ್ಯಾಚಾರ ಹಾಗೂ ಕೊಲೆ ಎಸಗಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ತುಮಕೂರುನಗರ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ತುಮಕೂರು: ಮಧ್ಯಾಹ್ನ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಇದನ್ನೂ ಓದಿ: ತುಮಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಪರದಾಟ; ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ನರಳಾಟ
Published On - 1:58 pm, Wed, 9 March 22