ಪುಟಿನ್​ರ ಯುದ್ಧೋತ್ಸಾಹಕ್ಕೆ ಕಡಿವಾಣ ಬೀಳದಿದ್ದರೆ ಜಗತ್ತಿನಲ್ಲಿ ಸುರಕ್ಷಿತ ಸ್ಥಳವೇ ಇರುವುದಿಲ್ಲ: ವಿಶ್ವಕ್ಕೆ ಉಕ್ರೇನ್ ಅಧ್ಯಕ್ಷರ ಪತ್ನಿಯ ಎಚ್ಚರಿಕೆ

ಮುಂದಿನ ದಿನಗಳಲ್ಲಿ ರಷ್ಯಾ ನಿಮ್ಮದೇ ನಾಗರಿಕರನ್ನು ರಕ್ಷಿಸುವ ಮುಸುಕು ಹಾಕಿಕೊಂಡು ನಿಮ್ಮ ನಗರಗಳ ಮೇಲೆ ದಾಳಿ ಮಾಡಬಹುದು. ನಾವು ಅದನ್ನು ತಡೆದು ನಿಲ್ಲಿಸಿದ್ದೇವೆ. ನಮಗೆ ಸಹಾಯ ಮಾಡಿ’ ಎಂದು ಅವರು ವಿನಂತಿಸಿದ್ದಾರೆ.

ಪುಟಿನ್​ರ ಯುದ್ಧೋತ್ಸಾಹಕ್ಕೆ ಕಡಿವಾಣ ಬೀಳದಿದ್ದರೆ ಜಗತ್ತಿನಲ್ಲಿ ಸುರಕ್ಷಿತ ಸ್ಥಳವೇ ಇರುವುದಿಲ್ಲ: ವಿಶ್ವಕ್ಕೆ ಉಕ್ರೇನ್ ಅಧ್ಯಕ್ಷರ ಪತ್ನಿಯ ಎಚ್ಚರಿಕೆ
ಉಕ್ರೇನ್​ ಅಧ್ಯಕ್ಷರ ಪತ್ನಿ ಒಲೆನಾ ಝೆಲೆನ್​ಸ್ಕಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 09, 2022 | 12:19 PM

ಕೀವ್: ರಷ್ಯಾ ಆಕ್ರಮಣದಿಂದ ಉಕ್ರೇನ್ ಕಂಗಾಲಾಗಿದೆ. ಅಪರೂಪದ ಬೆಳವಣಿಗೆಯೊಂದರಲ್ಲಿ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ (Volodymyr Zelenskyy Wife Olena Zelenska)  ಅವರ ಪತ್ನಿ ಒಲೆನಾ ಝೆಲೆನ್​ಸ್ಕಿ ಜಾಗತಿಕ ಮಾಧ್ಯಮ ಸಂಸ್ಥೆಗಳಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾ ನಾಗರಿಕರ ಸಾಮೂಹಿಕ ಹತ್ಯೆ ಮಾಡಿದೆ. ಇದನ್ನು ವಿಶೇಷ ಕಾರ್ಯಾಚರಣೆ ಎಂದು ಅಲ್ಲಿನ ಮಾಧ್ಯಮಗಳು ಸುಳ್ಳು ಮಾಹಿತಿ ಹರಡುತ್ತಿವೆ. ಇಂದಿಗೂ ನಮ್ಮ ವಿನಂತಿ ಇಷ್ಟೇ. ಆಗಸದಲ್ಲಿ ರಷ್ಯಾ ವಿಮಾನ ಮತ್ತು ಕ್ಷಿಪಣಿಗಳನ್ನು ನಿರ್ಬಂಧಿಸಿ. ಭೂಮಿಯ ಮೇಲಿನ ಯುದ್ಧವನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಅವರು ನ್ಯಾಟೊ ಸೇರಿದಂತೆ ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಉಕ್ರೇನ್​ನಲ್ಲಿ (Russia Ukraine Conflict) ನಡೆಯುತ್ತಿರುವ ಯುದ್ಧ ಎಲ್ಲಿಯೋ ನಡೆಯುತ್ತಿರುವ ಯುದ್ಧವಲ್ಲ. ಇದು ಯೂರೋಪ್​ನಲ್ಲಿ ನಡೆಯುತ್ತಿರುವ ಯುದ್ಧ, ಐರೋಪ್ಯ ಒಕ್ಕೂಟದ ಗಡಿಯಲ್ಲಿ ನಡೆಯುತ್ತಿರುವ ಯುದ್ಧ. ಮುಂದಿನ ದಿನಗಳಲ್ಲಿ ರಷ್ಯಾ ನಿಮ್ಮದೇ ನಾಗರಿಕರನ್ನು ರಕ್ಷಿಸುವ ಮುಸುಕು ಹಾಕಿಕೊಂಡು ನಿಮ್ಮ ನಗರಗಳ ಮೇಲೆ ದಾಳಿ ಮಾಡಬಹುದು. ನಾವು ಅದನ್ನು ತಡೆದು ನಿಲ್ಲಿಸಿದ್ದೇವೆ. ನಮಗೆ ಸಹಾಯ ಮಾಡಿ’ ಎಂದು ಅವರು ವಿನಂತಿಸಿದ್ದಾರೆ.

ಉಕ್ರೇನ್​ನ ನಾಗರಿಕರು ಅನುಭವಿಸುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ವಿವರಿಸಿರುವ ಅವರು, ಬಾಂಬ್​ನಿಂದ ರಕ್ಷಣೆ ಪಡೆಯಲು ಮಹಿಳೆಯರು ಮತ್ತು ಮಕ್ಕಳು ಭೂಗತ ಬಂಕರ್​ಗಳಲ್ಲಿ ದಿನದೂಡುತ್ತಿದ್ದಾರೆ. ಇದು ಯುದ್ಧದ ಭೀಕರ ಸನ್ನಿವೇಶ. ನಡುಗುವ ಭೂಮಿಯಲ್ಲಿ ಸಕ್ಕರೆ ಕಾಯಿಲೆ ಇರುವವರಿಗೆ ಭೂಗತ ಬಂಕರ್​ಗಳಲ್ಲಿ ಇನ್​ಸುಲಿನ್ ಕೊಡುವುದು, ಸತತ ಬಾಂಬ್​ಗಳು ಭೋರ್ಗರೆಯುತ್ತಿದ್ದಾಗ ಅಸ್ತಮಾ ರೋಗಿಗಳಿಗೆ ಔಷಧಿ ಕೊಡುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗೇ ಗೊತ್ತು. ಕ್ಯಾನ್ಸರ್ ಪೀಡಿತರ ಕಿಮೊಥೆರಪಿ, ರೇಡಿಯೇಶನ್ ಚಿಕಿತ್ಸೆಗೆ ಅವಕಾಶವೇ ಆಗುತ್ತಿಲ್ಲ. ಅವರ ಚಿಕಿತ್ಸೆ ಎಂದಿನಿಂದ ಆರಂಭವಾಗಬಹುದು ಎನ್ನುವ ಬಗ್ಗೆ ಏನನ್ನೂ ಹೇಳಲು ಆಗುವುದಿಲ್ಲ ಎನ್ನುತ್ತಾರೆ.

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿ 14 ದಿನಗಳಾಗಿವೆ. ಎರಡೂ ದೇಶಗಳ ನಡುವೆ ಮೂರು ಬಾರಿ ಮಾತುಕತೆ ನಡೆದಿದ್ದರೂ ಈವರೆಗೆ ಯಾವುದೇ ಪ್ರಯೋಜನ ಸಿಕ್ಕಿಲ್ಲ. ಕೀವ್ ಮತ್ತು ಇತರ ಪ್ರಮುಖ ನಗರಗಳಿಂದ ಜನರನ್ನು ಸ್ಥಳಾಂತರಕ್ಕಾಗಿ ಅವಕಾಶ ಕಲ್ಪಿಸಲು ಕದನ ವಿರಾಮ ಘೋಷಿಸಿದೆ. ಯುದ್ಧದಿಂದಾಗಿ ನಾಗರಿಕರ ಸಂಚಾರಕ್ಕೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ನಾಗರಿಕರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

‘ಎರಡು ವಾರಗಳ ಹಿಂದಷ್ಟೇ ನಮ್ಮ ದೇಶದಲ್ಲಿ ಶಾಂತಿಯಿತ್ತು. ನಮ್ಮ ನಗರಗಳು, ಪಟ್ಟಣಗಳು, ಹಳ್ಳಿಗಳಲ್ಲಿ ಜನಸಮುದಾಯ ಜೀವಂತವಾಗಿ ನಳನಳಿಸುತ್ತಿತ್ತು. ಕಳೆದ ಫೆಬ್ರುವರಿ 24ರಂದು ರಷ್ಯಾ ಆಕ್ರಮಣದ ಸುದ್ದಿಯೊಂದಿಗೆ ನಾವೆಲ್ಲರೂ ಮೇಲೆದ್ದೆವು. ರಷ್ಯಾದ ಟ್ಯಾಂಕ್​ಗಳು ಉಕ್ರೇನ್ ಗಡಿಯೊಳಗೆ ನುಗ್ಗಿ ಬಂದವು. ಅವರ ಯುದ್ಧವಿಮಾನಗಳು ನಮ್ಮ ವಾಯುಗಡಿಯೊಳಗೆ ಪ್ರವೇಶಿಸಿ ಬಾಂಬುಗಳನ್ನು ಸುರಿಸಿದವು. ಅಷ್ಟೇ ಅಲ್ಲ, ಕ್ಷಿಪಣಿಗಳು ಅಪ್ಪಳಿಸಿದವು’ ಎಂದು ಒಲೆನಾ ಬೇಸರ ವ್ಯಕ್ತಪಡಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರ ಆಕ್ರಮಣಕಾರಿ ನಿಲುವುಗಳ ವಿರುದ್ಧ ಇಡೀ ಜಗತ್ತು ಒಂದಾಗಿ ನಿಲ್ಲಬೇಕಿದೆ. ಅಣುಯುದ್ಧದ ಬೆದರಿಕೆ ಹಾಕುತ್ತಿರುವ ಪುಟಿನ್​ರ ದುಸ್ಸಾಹಸಗಳನ್ನು ತಡೆದು ನಿಲ್ಲಿಸದಿದ್ದರೆ ವಿಶ್ವದಲ್ಲಿ ಎಲ್ಲಿಯೂ ನಮಗೆ ಸುರಕ್ಷಿತ ಸ್ಥಳ ಎನ್ನುವುದು ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ರಷ್ಯಾದ ಸೇನೆಯ ಬಲಕುಗ್ಗಿಸುವ ಉದ್ದೇಶದಿಂದ ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿದೆ. ‘ಪುಟಿನ್​ರ ಯುದ್ಧದಾಹಿ ಮನಸ್ಥಿತಿಗೆ ನಾವು ಅಂತ್ಯ ಕಾಣಿಸುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಉಕ್ರೇನ್​ನ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮತ್ತಷ್ಟು ಶಸ್ತ್ರಾಸ್ತ್ರ ಒದಗಿಸಬೇಕು ಎಂದು ಉಕ್ರೇನ್​ ಆಡಳಿತ ವಿಶ್ವದ ಪ್ರಮುಖ ದೇಶಗಳನ್ನು ವಿನಂತಿಸಿದೆ.

ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾ, ಉಕ್ರೇನ್ ಎರಡೂ ಬೇಕು: ಯಾರನ್ನು ದೂರ ತಳ್ಳಲು ಆಗದ ಸ್ಥಿತಿಯಲ್ಲಿ ಭಾರತ

ಇದನ್ನೂ ಓದಿ: ರಷ್ಯಾ ವಿರುದ್ಧದ ಉಕ್ರೇನ್ ಹೋರಾಟ ಬೆಂಬಲಿಸಿ ಶಸ್ತ್ರ ಹಿಡಿಯಲು ಸಿದ್ಧರಾದ ಕೆಲ ಭಾರತೀಯರು

ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ