ಭಾರತದ ಆರ್ಥಿಕತೆಗೆ ರಷ್ಯಾ, ಉಕ್ರೇನ್ ಎರಡೂ ಬೇಕು: ಯಾರನ್ನು ದೂರ ತಳ್ಳಲು ಆಗದ ಸ್ಥಿತಿಯಲ್ಲಿ ಭಾರತ

ಜಾಗತೀಕರಣದ ಈ ಕಾಲದಲ್ಲಿ ಸ್ವಾವಲಂಬನೆಯ ಮಾತೇ ಅಪ್ರಸ್ತುತವಾಗಬಹುದು ಎನ್ನುವಷ್ಟರ ಮಟ್ಟಿಗೆ ಒಂದು ದೇಶ ಮತ್ತೊಂದು ದೇಶದ ಮೇಲೆ ಅವಲಂಬಿತವಾಗಿದೆ

ಭಾರತದ ಆರ್ಥಿಕತೆಗೆ ರಷ್ಯಾ, ಉಕ್ರೇನ್ ಎರಡೂ ಬೇಕು: ಯಾರನ್ನು ದೂರ ತಳ್ಳಲು ಆಗದ ಸ್ಥಿತಿಯಲ್ಲಿ ಭಾರತ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​​ಸ್ಕಿ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 09, 2022 | 11:00 AM

ಭಾರತದ ಆರ್ಥಿಕತೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸ್ವಾವಲಂಬಿಯಾಗಿಲ್ಲ. ಜಾಗತೀಕರಣದ ಈ ಕಾಲದಲ್ಲಿ ಸ್ವಾವಲಂಬನೆಯ ಮಾತೇ ಅಪ್ರಸ್ತುತವಾಗಬಹುದು ಎನ್ನುವಷ್ಟರ ಮಟ್ಟಿಗೆ ಒಂದು ದೇಶ ಮತ್ತೊಂದು ದೇಶದ ಮೇಲೆ ಅವಲಂಬಿತವಾಗಿದೆ. ಯಾವುದೋ ದೇಶ, ಇನ್ಯಾವುದೋ ದೇಶದೊಂದಿಗೆ ಹೋರಾಟಕ್ಕೆ ಇಳಿದರೆ ಅದರ ಪರಿಣಾಮವನ್ನು ಇಡೀ ಜಗತ್ತು ಅನುಭವಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ಯಾವುದೇ ದೇಶ ಸ್ವಾವಲಂಬಿ ಅಲ್ಲ. ಉಕ್ರೇನ್ ಮೇಲಿನ ದಾಳಿ ವಿರೋಧಿಸಿ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟಗಳು ರಷ್ಯಾಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಉಕ್ರೇನ್​ಗೆ (Ukraine) ಮಾನವೀಯ ನೆಲೆಗಟ್ಟಿನಲ್ಲಿ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟರೂ ರಷ್ಯಾವನ್ನು (Russia) ವಿರೋಧಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಭಾರತಕ್ಕೆ ಒಮ್ಮೆ ಅಮೆರಿಕ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಆದರೆ ಭಾರತಕ್ಕೆ ಮಾತ್ರ ಈವರೆಗೆ ರಷ್ಯಾಕ್ಕೆ ಒಂದೇ ಒಂದು ಎಚ್ಚರಿಕೆಯ ಪ್ರಕಟಣೆ ಹೊರಡಿಸಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ರಷ್ಯಾ ಮತ್ತು ಉಕ್ರೇನ್ ಮೇಲಿರುವ ಭಾರತದ ವ್ಯಾಪಾರದ ಅವಲಂಬನೆ. ಭಾರತವು ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳೊಂದಿಗೆ ವ್ಯಾಪಾರದ ಸಂಬಂಧ ಇರಿಸಿಕೊಂಡಿದೆ.

ರಷ್ಯಾದಿಂದ ಭಾರತಕ್ಕೆ ಬರುವ ವಸ್ತುಗಳಿವು…

ಭಾರತವು ರಷ್ಯಾದಿಂದ ಖನಿಜಗಳು, ಪೆಟ್ರೋಲಿಯಂ ಉತ್ಪನ್ನಗಳು ($ 2.05 ರೂಪಾಯಿ), ಮುತ್ತುಗಳು, ಅಮೂಲ್ಯ ಕಲ್ಲುಗಳು, ಲೋಹಗಳು ($ 832.16 ದಶಲಕ್ಷ), ರಸಗೊಬ್ಬರ ($ 609.73 ದಶಲಕ್ಷ), ಪ್ರಾಣಿಕೊಬ್ಬು ಮತ್ತು ತೈಲಗಳು ($ 410.64 ದಶಲಕ್ಷ), ಹಡಗುಗಳು, ದೋಣಿಗಳು ಮತ್ತು ಇತರ ತೇಲುವ ರಚನೆಗಳು ($ 357.00 ದಶಲಕ್ಷ), ಪೇಪರ್ ಮತ್ತು ಪೇಪರ್​ ಬೋರ್ಡ್​, ಕಾಗದ ಮತ್ತು ಬೋರ್ಡ್ ($ 164.73 ದಶಲಕ್ಷ), ಉಪ್ಪು, ಗಂಧಕ, ಮಣ್ಣು, ಕಲ್ಲು, ಪ್ಲಾಸ್ಟರ್, ಸುಣ್ಣ ಮತ್ತು ಸಿಮೆಂಟ್ ($ 113.53 ದಶಲಕ್ಷ), ಪ್ಲಾಸ್ಟಿಕ್ಸ್ ($ 110.42 ದಶಲಕ್ಷ), ಅಜೈವಿಕ ರಾಸಾಯನಿಕಗಳು, ಅಮೂಲ್ಯ ಲೋಹದ ಸಂಯುಕ್ತ, ಐಸೊಟೋಪ್ ($ 101.74 ದಶಲಕ್ಷ), ಯಂತ್ರೋಪಕರಣಗಳು, ಪರಮಾಣು ರಿಯಾಕ್ಟರ್‌ಗಳು, ಬಾಯ್ಲರ್‌ಗಳು ($ 92.21 ದಶಲಕ್ಷ), ಮುದ್ರಿತ ಪುಸ್ತಕಗಳು, ಪತ್ರಿಕೆಗಳು, ಚಿತ್ರಗಳು ($ 85.03 ದಶಲಕ್ಷ), ಕಬ್ಬಿಣ ಮತ್ತು ಉಕ್ಕು ($ 83.98 ದಶಲಕ್ಷ), ರಬ್ಬರ್ ($77.45 ದಶಲಕ್ಷ), ಸಾವಯವ ರಾಸಾಯನಿಕಗಳು ($56.57 ದಶಲಕ್ಷ), ವಿದ್ಯುತ್, ಎಲೆಕ್ಟ್ರಾನಿಕ್ ಉಪಕರಣಗಳು ($51.37 ದಶಲಕ್ಷ), ಅಲ್ಯೂಮಿನಿಯಂ ($ 44.16 ದಶಲಕ್ಷ), ತರಕಾರಿ, ಔಷಧೀಯ ಬೇರುಗಳು ಮತ್ತು ಗೆಡ್ಡೆಗಳು ($ 39.91 ದಶಲಕ್ಷ), ನಿಕ್ಕಲ್ ($ 24 ದಶಲಕ್ಷ), ಆಪ್ಟಿಕಲ್ ಉಪಕರಣಗಳು, ಫೋಟೊ, ತಾಂತ್ರಿಕ, ವೈದ್ಯಕೀಯ ಉಪಕರಣ ($ 22.57 ದಶಲಕ್ಷ), ಕಬ್ಬಿಣ ಅಥವಾ ಉಕ್ಕಿನ ವಸ್ತುಗಳು ($ 22 ದಶಲಕ್ಷ), ವಿಮಾನ, ಬಾಹ್ಯಾಕಾಶ ನೌಕೆ ($ 20.67 ದಶಲಕ್ಷ), ಮರದ ದಿಮ್ಮಿ, ಮರದಿಂದ ತಯಾರಾದ ಪೀಠೋಪಕರಣಗಳು, ಇದ್ದಿಲು ($ 19 ದಶಲಕ್ಷ), ವಿವಿಧ ರಾಸಾಯನಿಕ ಉತ್ಪನ್ನಗಳು (₹ 14.81 ದಶಲಕ್ಷ).

ರಷ್ಯಾ ರಾಜಧಾನಿ ಮಾಸ್ಕೊದಲ್ಲಿರುವ ಭಾರತ ಸರ್ಕಾರದ ರಾಜತಾಂತ್ರಿಕ ಕಚೇರಿ ವೆಬ್​ಸೈಟ್​ನಲ್ಲಿರುವ ಮಾಹಿತಿ ಪ್ರಕಾರ 2019-20ರ ಆರ್ಥಿಕ ವರ್ಷದಲ್ಲಿ 3920 ದಶಲಕ್ಷ ಡಾಲರ್ ಮೊತ್ತದ ವಸ್ತುಗಳನ್ನು ರಫ್ತು ಮಾಡಿದ್ದರೆ, ರಷ್ಯಾದಿಂದ ಭಾರತವು 7240 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ.

ಉಕ್ರೇನ್​ನಿಂದ ಭಾರತಕ್ಕೆ ಬರುವ ವಸ್ತುಗಳಿವು…

ಸೂರ್ಯಕಾಂತಿ ಎಣ್ಣೆ , ಪ್ರಾಣಿಗಳು, ಮಾಂಸ, ಸಸ್ಯಜನ್ಯ ಕೊಬ್ಬು ಮತ್ತು ತೈಲ, ಯಂತ್ರೋಪಕರಣ, ಪರಮಾಣು ರಿಯಾಕ್ಟರ್‌, ಬಾಯ್ಲರ್‌, ಆಹಾರ ಉದ್ಯಮದ ತ್ಯಾಜ್ಯ, ಪ್ರಾಣಿಗಳ ಮೇವು, ಪ್ಲಾಸ್ಟಿಕ್ಸ್, ಆಪ್ಟಿಕಲ್, ಫೋಟೋ, ಸೂಕ್ಷ್ಮ ತಾಂತ್ರಿಕ ವಸ್ತುಗಳು, ವೈದ್ಯಕೀಯ ಉಪಕರಣ, ಮರ ಮತ್ತು ಮರದ ಉಪಕರಣಗಳು, ಮರದ ಇದ್ದಿಲು, ಕಬ್ಬಿಣ ಮತ್ತು ಉಕ್ಕು, ಅದಿರು ಪುಡಿ ಮತ್ತು ಬೂದಿ, ವಿಮಾನ, ಬಾಹ್ಯಾಕಾಶ ನೌಕೆ, ಕಬ್ಬಿಣ ಅಥವಾ ಉಕ್ಕಿನ ವಸ್ತುಗಳು, ವಿದ್ಯುತ್, ಎಲೆಕ್ಟ್ರಾನಿಕ್ ಉಪಕರಣಗಳು, ಉಪ್ಪು, ಗಂಧಕ, ಮಣ್ಣು, ಕಲ್ಲು, ಪ್ಲಾಸ್ಟರ್, ಸುಣ್ಣ ಮತ್ತು ಸಿಮೆಂಟ್, ಔಷಧೀಯ ಉತ್ಪನ್ನಗಳು, ಕಚ್ಚಾ ಚರ್ಮ.

ಉಕ್ರೇನ್ ರಾಜಧಾನಿ ಕೀವ್​ನಲ್ಲಿರುವ ಭಾರತ ಸರ್ಕಾರದ ರಾಜತಾಂತ್ರಿಕ ಕಚೇರಿ ವೆಬ್​ಸೈಟ್​ನಲ್ಲಿರುವ ಮಾಹಿತಿಯ ಪ್ರಕಾರ 2012-20ರ ಆರ್ಥಿಕ ವರ್ಷದಲ್ಲಿ ಭಾರತವು ಉಕ್ರೇನ್​ಗೆ ಒಟ್ಟು 463.81 ದಶಲಕ್ಷ ಡಾಲರ್ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದೇ ವೇಳೆಯಲ್ಲಿ 2,060.79 ದಶಲಕ್ಷ ಡಾಲರ್ ಮೊತ್ತದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ.

ಇದನ್ನೂ ಓದಿ: ಮಿಲಿಟರಿ ಚೆಕ್​ಪಾಯಿಂಟ್​ನಲ್ಲಿ ಮಂಡಿಯೂರಿ ಯುವತಿಗೆ ಪ್ರಪೋಸ್​ ಮಾಡಿದ ಉಕ್ರೇನ್​ ಸೈನಿಕ: ವಿಡಿಯೋ ವೈರಲ್​

ಇದನ್ನೂ ಓದಿ: ಉಕ್ರೇನ್​​ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಇನ್ನೆಂದೂ, ಯಾರೆದುರೂ ಮಂಡಿಯೂರುವುದಿಲ್ಲ; ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ನಿರ್ಧಾರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ