ಉಕ್ರೇನ್​​ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಇನ್ನೆಂದೂ, ಯಾರೆದುರೂ ಮಂಡಿಯೂರುವುದಿಲ್ಲ; ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ನಿರ್ಧಾರ

ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಕೇಳುವ ವಿಚಾರದಲ್ಲಿ ನಾನಿನ್ನು ಮೌನ ವಹಿಸುತ್ತೇನೆ. ಉಕ್ರೇನ್​​ಗೆ ಸದಸ್ಯತ್ವ ನೀಡಲು ನ್ಯಾಟೋ ಸಿದ್ಧತೆ ಮಾಡಿಕೊಂಡಿರಲಿಲ್ಲ. ಬಾಯ್ಮಾತಲ್ಲಿ ಕೊಡುತ್ತೇವೆ ಎಂದು ಹೇಳುತ್ತಿತ್ತು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಉಕ್ರೇನ್​​ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಇನ್ನೆಂದೂ, ಯಾರೆದುರೂ ಮಂಡಿಯೂರುವುದಿಲ್ಲ; ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ನಿರ್ಧಾರ
ವೊಲೊಡಿಮಿರ್ ಝೆಲೆನ್ಸ್ಕಿ
Follow us
TV9 Web
| Updated By: Lakshmi Hegde

Updated on:Mar 09, 2022 | 9:01 AM

ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ (NATO Members) ನೀಡುವಂತೆ ಇನ್ನುಮುಂದೆ ನಾನು ಒತ್ತಾಯಿಸುವುದಿಲ್ಲ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಹೇಳಿದ್ದಾರೆ. ಅಷ್ಟೇ ಅಲ್ಲ, ರಷ್ಯಾದ ಪರವಾಗಿರುವ ಪೂರ್ವ ಉಕ್ರೇನ್​​ನ ಎರಡು ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಸ್ಥಿತಿ ಬಗ್ಗೆ ಸಂಧಾನ ಮಾಡಿಕೊಳ್ಳಲು ಸಿದ್ಧರಿರುವುದಾಗಿಯೂ ತಿಳಿಸಿದ್ದಾರೆ. ಈ ಎರಡೂ ಪ್ರದೇಶಗಳು ಉಕ್ರೇನ್​ನಲ್ಲಿದ್ದರೂ ಕೂಡ ಇಲ್ಲಿರುವ ಬಂಡುಕೋರರು ರಷ್ಯಾ ಪರವಾಗಿಯೇ ಇದ್ದಾರೆ. 2014ರಿಂದಲೂ ಕೀವ್​ ವಿರುದ್ಧವೇ ಬಡಿದಾಡಿಕೊಂಡು ಬಂದಿದ್ದಾರೆ. ಹಾಗೇ, ಫೆ.24ರಂದು ಉಕ್ರೇನ್​ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಘೋಷಿಸುವುದಕ್ಕೂ ಮೊದಲು ಇವೆರಡೂ ಭೂಪ್ರದೇಶಗಳು ಸ್ವತಂತ್ರ ಎಂದು ಪುಟಿನ್​ ಘೋಷಿಸಿದ್ದಾರೆ.ಇದೀಗ ಈ ಭೂಪ್ರದೇಶಗಳ ಕುರಿತಂತೆ ರಷ್ಯಾದ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಝೆಲೆನ್ಸ್ಕಿ ಮಾಸ್ಕೋವನ್ನು ಸಮಾಧಾನ ಪಡಿಸುವ ಮಾತುಗಳನ್ನಾಡಿದ್ದಾರೆ.

ರಷ್ಯಾ ಉಕ್ರೇನ್​ ವಿರುದ್ಧ ಸಮರ ಸಾರಲು ಹಲವು ಕಾರಣಗಳಿದ್ದರೂ, ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡಲು ಮುಂದಾಗಿದ್ದು ಬಹುಮುಖ್ಯ ಕಾರಣ. ನ್ಯಾಟೋ ಕೂಡ ರಷ್ಯಾದ ಮನವಿಯನ್ನು ತಿರಸ್ಕರಿಸುತ್ತಲೇ ಬಂತು. ಹೀಗಾಗಿ ರಷ್ಯಾ ಪುಟ್ಟ ರಾಷ್ಟ್ರ ಉಕ್ರೇನ್​ ವಿರುದ್ಧ ಸಮರವನ್ನೇ ಸಾರಿತು. ಆದರೆ ರಷ್ಯಾ ಪಡೆ ಆಕ್ರಮಣ ಮಾಡುತ್ತಿದ್ದಂತೆ ನ್ಯಾಟೋ ಅಂತರ ಕಾದುಕೊಂಡಿದೆ. ಝೆಲೆನ್ಸ್ಕಿ ಬಹಿರಂಗವಾಗಿಯೇ ಸಹಾಯ ಕೇಳಿದರೂ ನ್ಯಾಟೋ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರ ಬಗ್ಗೆಯೇ ಝೆಲೆನ್ಸ್ಕಿ ಮಾತನಾಡಿದ್ದಾರೆ.

ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಕೇಳುವ ವಿಚಾರದಲ್ಲಿ ನಾನಿನ್ನು ಮೌನ ವಹಿಸುತ್ತೇನೆ. ಉಕ್ರೇನ್​​ಗೆ ಸದಸ್ಯತ್ವ ನೀಡಲು ನ್ಯಾಟೋ ಸಿದ್ಧತೆ ಮಾಡಿಕೊಂಡಿರಲಿಲ್ಲ. ಬಾಯ್ಮಾತಲ್ಲಿ ಕೊಡುತ್ತೇವೆ ಎಂದು ಹೇಳುತ್ತಿತ್ತು. ಈ ನ್ಯಾಟೋ ಒಕ್ಕೂಟಕ್ಕೆ ರಷ್ಯಾ ವಿರುದ್ಧ ಹೋರಾಡಲು, ಆ ದೇಶವನ್ನು ಎದುರು ಹಾಕಿಕೊಳ್ಳಲು ಭಯ ಎಂದು ಉಕ್ರೇನ್​ ಅಧ್ಯಕ್ಷರು ಹೇಳಿದ್ದಾರೆ.  ನಾನೊಂದು ದೇಶದ ಅಧ್ಯಕ್ಷನಾಗಿ ಯಾವುದೇ ವಿಚಾರಕ್ಕೂ ಇನ್ನೊಬ್ಬರ ಎದುರು ಮೊಣಕಾಲೂರಿಗೆ ಕುಳಿತು ಬೇಡಿಕೊಳ್ಳಲಾರೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡುವ ವಿಚಾರದಲ್ಲಿ ತನ್ನದು ಸ್ಪಷ್ಟ ವಿರೋಧ ಎಂದು ರಷ್ಯಾ ಈಗಾಗಲೇ ಸ್ಪಷ್ಟಪಡಿಸಿದೆ. ಯುರೋಪ್​​ನಲ್ಲಿ ಶೀತಲ ಸಮರ ಎದ್ದಾಗ, ಸೋವಿಯತ್​ ಒಕ್ಕೂಟದಿಂದ ಯುರೋಪ್​​ನ್ನು ರಕ್ಷಣೆ ಮಾಡುವ ಸಲುವಾಗಿ ಈ ನ್ಯಾಟೋ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ) ರಚಿಸಲಾಗಿತ್ತು. ಈ ಹಿಂದೆ ಸೋವಿಯತ್​ ಒಕ್ಕೂಟದಲ್ಲಿದ್ದು ಬೇರ್ಪಟ್ಟ ದೇಶಗಳಿಗೆ ಸದಸ್ಯತ್ವ ನೀಡುವ ಮೂಲಕ ನ್ಯಾಟೋ ಪೂರ್ವ ಯುರೋಪ್​​ನಲ್ಲಿ ಮತ್ತಷ್ಟು ಪ್ರಾಬಲ್ಯ ವಿಸ್ತರಿಸುತ್ತಿದೆ. ಇದು ಸಹಜವಾಗಿಯೇ ರಷ್ಯಾವನ್ನು ಕೆರಳಿಸಿದೆ. ಇಷ್ಟು ದಿನ ನ್ಯಾಟೋವನ್ನು ನಂಬಿಕೊಂಡಿದ್ದ ಝೆಲೆನ್ಸ್ಕಿ ಈಗ ನ್ಯಾಟೋ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ukraine Russia War Live: ನ್ಯಾಟೊ ಸಹವಾಸ ಸಾಕು ಎಂದ ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ: ರಷ್ಯಾ ಷರತ್ತುಗಳಿಗೆ ಒಪ್ಪಿಗೆ

Published On - 8:09 am, Wed, 9 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ