ರಷ್ಯಾದಿಂದ ಕಚ್ಚಾತೈಲ ಆಮದು ನಿರ್ಬಂಧಿಸಿದ ಬ್ರಿಟನ್​: 2022ರ ಅಂತ್ಯಕ್ಕೆ ಸಂಪೂರ್ಣ ನಿರ್ಬಂಧ ಜಾರಿ

ರಷ್ಯಾದಿಂದ ಪೂರೈಕೆಯಾಗುತ್ತಿರುವ ನೈಸರ್ಗಿಕ ಅನಿಲಕ್ಕೆ ಈ ನಿರ್ಬಂಧಗಳು ಸದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ. ಬ್ರಿಟನ್​ನಲ್ಲಿ ಬಳಕೆಯಾಗುವ ನೈಸರ್ಗಿಕ ಅನಿಲದ ಪೈಕಿ ಶೇ 4ರಷ್ಟು ಪ್ರಮಾಣವನ್ನು ರಷ್ಯಾದಿಂದ ಅಮದಾಗುವ ಅನಿಲ ಪೂರೈಸುತ್ತಿದೆ

ರಷ್ಯಾದಿಂದ ಕಚ್ಚಾತೈಲ ಆಮದು ನಿರ್ಬಂಧಿಸಿದ ಬ್ರಿಟನ್​: 2022ರ ಅಂತ್ಯಕ್ಕೆ ಸಂಪೂರ್ಣ ನಿರ್ಬಂಧ ಜಾರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 09, 2022 | 6:59 AM

ಇಂಗ್ಲೆಂಡ್: ರಷ್ಯಾದಿಂದ ತೈಲೋತ್ಪನ್ನ ಆಮದು ಮಾಡಿಕೊಳ್ಳುವುದನ್ನು ಬ್ರಿಟನ್ ಸಂಪೂರ್ಣವಾಗಿ ನಿರ್ಬಂಧಿಸಿದೆ. ಹಂತಹಂತವಾಗಿ ಆಮದು ನಿರ್ಬಂಧ ಜಾರಿಯಾಗಲಿದ್ದು, 2022ರ ಅಂತ್ಯದ ವೇಳೆಗೆ ಈ ನಿರ್ಬಂಧ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾದ ಕ್ರಮ ಖಂಡಿಸಿ ಈ ಮೊದಲು ಅಮೆರಿಕ ರಷ್ಯಾದ ತೈಲೋತ್ಪನ್ನಗಳನ್ನು ನಿರ್ಬಂಧಿಸಿತ್ತು. ಇದೀಗ ಬ್ರಿಟನ್ ಸಹ ಇದೇ ಹಾದಿ ತುಳಿದಿದೆ. ಬ್ರಿಟನ್​ನಲ್ಲಿ ಬಳಕೆಯಾಗುವ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಶೇ 8ರಷ್ಟು ಬೇಡಿಕೆಯನ್ನು ರಷ್ಯಾದಿಂದ ಆಮದಾಗುವ ಪೆಟ್ರೋಲಿಯಂ ಉತ್ಪನ್ನಗಳು ಪೂರೈಸುತ್ತಿವೆ. ರಷ್ಯಾದಿಂದ ಪೂರೈಕೆಯಾಗುತ್ತಿರುವ ನೈಸರ್ಗಿಕ ಅನಿಲಕ್ಕೆ ಈ ನಿರ್ಬಂಧಗಳು ಸದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ. ಬ್ರಿಟನ್​ನಲ್ಲಿ ಬಳಕೆಯಾಗುವ ನೈಸರ್ಗಿಕ ಅನಿಲದ ಪೈಕಿ ಶೇ 4ರಷ್ಟು ಪ್ರಮಾಣವನ್ನು ರಷ್ಯಾದಿಂದ ಅಮದಾಗುವ ಅನಿಲ ಪೂರೈಸುತ್ತಿದೆ. ಈ ಬಳಕೆಯನ್ನು ಸಂಪೂರ್ಣ ನಿಲ್ಲಿಸಲು ಚಿಂತನೆ ಆರಂಭವಾಗಿದೆ ಎಂದು ಬ್ರಿಟನ್ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾದ ಕ್ರಮ ಖಂಡಿಸಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಈ ಮೊದಲು ರಷ್ಯಾದ ತೈಲೋತ್ಪನ್ನಗಳಿಗೆ ನಿರ್ಬಂಧ ವಿಧಿಸಿದ್ದರು. ಅಮೆರಿಕ ಘೋಷಣೆಯ ಬೆನ್ನಿಗೇ ಬ್ರಿಟನ್ ಸಹ ಇದೇ ಕ್ರಮಕ್ಕೆ ಮುಂದಾಗಿದೆ. ಬ್ರಿಟನ್​ನ ಈ ಕ್ರಮಕ್ಕೆ ಸ್ವದೇಶದಲ್ಲಿ ಜನರಿಂದ ನಿರೀಕ್ಷಿತ ಪೂರಕ ಸ್ಪಂದನವೇನೂ ಸಿಕ್ಕಿಲ್ಲ. ಈಗಾಗಲೇ ಹಣದುಬ್ಬರದಲ್ಲಿ ನಲುಗುತ್ತಿರುವ ಬ್ರಿಟನ್​ನ ಜನರು ಸರ್ಕಾರದ ಈ ಕ್ರಮದಿಂದ ಇಂಧನ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಉಕ್ರೇನ್ ಮೇಲಿನ ದಾಳಿಯ ನಂತರ ಇಡೀ ಜಗತ್ತಿನಲ್ಲಿ ಷೇರುಪೇಟೆ ಸತತ ಕುಸಿತ ಕಂಡಿದ್ದು, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ರಷ್ಯಾದ ತೈಲೋತ್ಪನ್ನ ನಿರ್ಬಂಧಗಳ ಕುರಿತು ಪ್ರತಿಕ್ರಿಯಿಸಿರುವ ಬ್ರಿಟನ್​ನ ಇಂಧನ ಮತ್ತು ಕೈಗಾರಿಕೆ ಸಚಿವ ಕ್ವಾಸಿ ಕ್ವಾರ್​ಟೆಂಗ್ ರಷ್ಯಾದ ಬದಲು ನೆದರ್​ಲೆಂಟ್ಸ್​ ಮತ್ತು ಗಲ್ಫ್​ ದೇಶಗಳ ಮೂಲಕ ತೈಲೋತ್ಪನ್ನಗಳ ಆಮದು ಮಾಡಿಕೊಳ್ಳಲು ಹೆಚ್ಚು ಗಮನ ಕೊಡಲಾಗುವುದು. ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

ರಷ್ಯಾದ ಮೇಲಿನ ನಿರ್ಬಂಧದಿಂದ ಉಂಟಾಗುವ ಖೋತಾ ತುಂಬಿಕೊಳ್ಳಲು ಹಂತಹಂತವಾಗಿ ಮಿತ್ರದೇಶಗಳಿಂದ ಆಮದು ಮಾಡಿಕೊಳ್ಳುವ ತೈಲೋತ್ಪನ್ನಗಳ ಪ್ರಮಾಣ ಹೆಚ್ಚಿಸುತ್ತೇವೆ. ಈಗಾಗಲೇ ಜಗತ್ತಿನ ಹಲವು ದೇಶಗಳು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ರಷ್ಯಾದಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಶೇ 70ರಷ್ಟು ಪ್ರಮಾಣಕ್ಕೆ ಗ್ರಾಹಕರೇ ಸಿಗುತ್ತಿಲ್ಲ ಎಂದು ಅವರು ಹೇಳಿದರು. ರಷ್ಯಾ ವಿರುದ್ಧದ ನಿರ್ಬಂಧವನ್ನು ಜಾರಿಗೊಳಿಸಲು ಬ್ರಿಟನ್ ಸರ್ಕಾರವು ವಿಶೇಷ ಕಾರ್ಯಪಡೆಯನ್ನು ರೂಪಿಸಿದೆ. ರಷ್ಯಾದ ತೈಲೋತ್ಪನ್ನಗಳನ್ನು ರಷ್ಯಾದ ಹಡಗುಗಳೇ ಹೊತ್ತುತಂದರೆ ನಿರ್ಬಂಧ ಅನ್ವಯವಾಗುವ ನಿಯಮ ಇತ್ತು. ಇದನ್ನು ವಿರೋಧಿಸಿದ್ದ ಬ್ರಿಟನ್​ನ ಸ್ಥಳೀಯ ನೌಕರರು ವಿದೇಶಿ ನೌಕೆಗಳು ಹೊತ್ತು ತರುವ ರಷ್ಯಾದ ತೈಲೋತ್ಪನ್ನಗಳನ್ನೂ ಅನ್​ಲೋಡ್ ಮಾಡುವುದಿಲ್ಲ ಎಂದು ಮುಷ್ಕರ ಹೂಡಿದ್ದರು. ಈ ಬೆಳವಣಿಗೆಯೂ ಬ್ರಿಟನ್​ನಲ್ಲಿ ದೊಡ್ಡ ಸುದ್ದಿಯಾಗಿತ್ತು.

ಇದನ್ನೂ ಓದಿ: Russia-Ukraine war ರಷ್ಯಾದ ತೈಲ ಮತ್ತು ಅನಿಲ ಆಮದುಗಳ ಮೇಲೆ ನಿಷೇಧ ಘೋಷಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಇದನ್ನೂ ಓದಿ: Brent Crude: ಉಕ್ರೇನ್ ಮೇಲೆ ತೀವ್ರಗೊಂಡ ರಷ್ಯಾ ದಾಳಿ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕಚ್ಚಾ ತೈಲ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ