ಜನ ನೂರು ಮಾತಾಡುತ್ತಾರೆ, ಆದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆ: ಯಡಿಯೂರಪ್ಪ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆ ಸಂಭ್ರಮಾಚರಣೆಯಲ್ಲಿ ತೊಡಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಯಡಿಯೂರಪ್ಪ, ಅವರೇನಾದರೂ ಮಾಡಿಕೊಳ್ಳಲಿ, ಅವರಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿದರು. ಯಡಿಯೂರಪ್ಪ ಮಾತಾಡುವಾಗ ಅವರ ಮಗ ಮತ್ತು ಬಿಜೆಪಿ ಸಂಸದ ಬಿವೈ ರಾಘವೇಂದ್ರ ಬಲಭಾಗದಲ್ಲಿ ನಿಂತಿದ್ದರು.
ಶಿವಮೊಗ್ಗ, ಮೇ 16: ಪಾಕಿಸ್ತಾನ ಮೇಲೆ ಯುದ್ಧ ಮಾಡಿ ಭಾರತದ ಯಶ ಸಾಧಿಸಿದೆ, ಪ್ರಧಾನಿ ನರೇಂದ್ರ ಮೋದಿಯವರರು ಸಾಧಸಿರುವ ಯಶಸನ್ನು ಕಂಡು ಸಹಿಸಲಾಗದ ಜನ ಅಮೇರಿಕದ ಮಧ್ಯಸ್ಥಿಕೆಯಿಂದ ಯುದ್ಧ ನಿಂತು ಹೋಯಿತು ಅಂತ ಹೇಳುತ್ತಿದ್ದಾರೆ, ಅವರ ಮಾತುಗಳಿಗೆ ಬೆಲೆ ನೀಡುವ ಅಗತ್ಯವಿಲ್ಲ, ಪಾಕಿಸ್ತಾನ ಬಾಲ ಮುದುರಿಕೊಂಡು ಬಿಲ ಸೇರುವಂತೆ ಮಾಡಿದ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಕೋರ್ಟ್ ಜನಾರ್ಧನ ರೆಡ್ಡಿಯವರಿಗೆ ಶಿಕ್ಷೆ ವಿಧಿಸಿರುವುದಷ್ಟೇ ಗೊತ್ತು, ಚುನಾವಣೆಗೆ ಬಗ್ಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ತಮ್ಮ ಆಗಮನದಿಂದ ಪ್ರತಿಭಟನಾನಿರತ ಬಿಜೆಪಿ ಮುಖಂಡರ ಹುಮ್ಮಸ್ಸು ದ್ವಿಗುಣಗೊಳಿಸಿದ ಬಿಎಸ್ ಯಡಿಯೂರಪ್ಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ