AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಆಗಮನದಿಂದ ಪ್ರತಿಭಟನಾನಿರತ ಬಿಜೆಪಿ ಮುಖಂಡರ ಹುಮ್ಮಸ್ಸು ದ್ವಿಗುಣಗೊಳಿಸಿದ ಬಿಎಸ್ ಯಡಿಯೂರಪ್ಪ

ತಮ್ಮ ಆಗಮನದಿಂದ ಪ್ರತಿಭಟನಾನಿರತ ಬಿಜೆಪಿ ಮುಖಂಡರ ಹುಮ್ಮಸ್ಸು ದ್ವಿಗುಣಗೊಳಿಸಿದ ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2025 | 12:57 PM

ಪ್ರತಿಭಟನೆಗೆ ಆಗಮಿಸಿದ ಯಡಿಯೂರಪ್ಪನವರಿಗೆ ಬಿಜೆಪಿ ನಾಯಕರ ನಡುವಿನ ಸ್ಥಾನ ನೀಡಲಾಗುತ್ತದೆ. ಅವರ ಸುತ್ತಮುತ್ತ, ಸಿಟಿ ರವಿ, ಬಿವೈ ವಿಜಯೇಂದ್ರ, ಅರ್ ಅಶೋಕ, ನಾರಾಯಣಸ್ವಾಮಿ ಚಲವಾದಿ, ಮುನಿರತ್ನ ನಾಯ್ಡು, ಎಸ್ ಅರ್ ವಿಶ್ವನಾಥ್, ಇತರ ಬಿಜೆಪಿ ನಾಯಕರು ಮತ್ತು ನೂರಾರು ಮಹಿಳಾ ಕಾರ್ಯಕರ್ತರನ್ನು ನೋಡಬಹುದು. ನಿನ್ನೆಯಂತೆ ಇವತ್ತು ಸಹ ರಮೇಶ್ ಜಾರಕಿಹೊಳಿ ಕಾಣಿಸಲಿಲ್ಲ.

ಬೆಂಗಳೂರು, ಏಪ್ರಿಲ್ 3: ಯಾರೇನೇ ಹೇಳಿದರೂ ಮಾಜಿ ಮುಖ್ಯಮಂತ್ರಿ (former chief minister) ಮತ್ತು ಹಿರಿಯ ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಈಗಲೂ ಕರ್ನಾಟಕದ ಅತ್ಯಂತ ಪ್ರಭಾವಿ ನಾಯಕ. ನಗರದ ಫ್ರೀಡಂ ಪಾರ್ಕ್​ನಲ್ಲಿ ಬಿಜೆಪಿ ಬೆಲೆಯೇರಿಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಯಡಿಯೂರಪ್ಪ ಅಗಮಿಸುತ್ತಿದ್ದಂತೆ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಂಡಿತು. ಬಡವರ ಬಂಧು, ರೈತನಾಯಕ ಯಡಿಯೂರಪ್ಪಗೆ ಜೈ ಅನ್ನುತ್ತ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು.

ಇದನ್ನೂ ಓದಿ: ಯತ್ನಾಳ್​​​ ಉಚ್ಛಾಟನೆಗೆ ಯಡಿಯೂರಪ್ಪ ಕಾರಣ, ಬಿಜೆಪಿಯಲ್ಲಿನ ಪಂಚಮಸಾಲಿ ನಾಯಕರು ಪಕ್ಷದಿಂದ ಹೊರಬನ್ನಿ: ಸ್ವಾಮೀಜಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ