ಸುನೀಲ್ ಗವಾಸ್ಕರ್ಗೆ ವಿಶೇಷ ಗೌರವ: ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ಸುನಿಲ್ ಗವಾಸ್ಕರ್ 1971 ರಿಂದ 1987 ರವರೆಗೆ ಭಾರತವನ್ನು ಪ್ರತಿನಿಧಿಸಿದ್ದರು, ಅವರು ಇತಿಹಾಸದ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಏಕೈಕ ಭಾರತೀಯ ಆರಂಭಿಕ ಆಟಗಾರ ಇವರು. ಇಲ್ಲಿಯವರೆಗೆ, ಅವರು ಟೆಸ್ಟ್‌ನಲ್ಲಿ 10,122 ರನ್‌ಗಳೊಂದಿಗೆ ಭಾರತದ ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ.
ಬೆಂಗಳೂರು (ಮೇ. 16): ಭಾರತೀಯ ಕ್ರಿಕೆಟ್ನ (Indian Cricket) ದಂತಕಥೆ ಸುನಿಲ್ ಗವಾಸ್ಕರ್ ಅವರನ್ನು ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಲಿಟಲ್ ಮಾಸ್ಟರ್ ತಮ್ಮ ಹೆಸರಿನ ಹೊಸ ಬೋರ್ಡ್ ರೂಂ ‘10000 ಗವಾಸ್ಕರ್’ ಅನ್ನು ಉದ್ಘಾಟಿಸಿದರು. ಟೆಸ್ಟ್ ಇತಿಹಾಸದಲ್ಲಿ 10,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರ ಐತಿಹಾಸಿಕ ಸಾಧನೆಯನ್ನು ಈ ಕೊಠಡಿ ಸ್ಮರಿಸುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕಾರ್ಯದರ್ಶಿ ದೇವಜಿತ್ ಸೈಕಿಯಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ‘ಒಬ್ಬ ಶ್ರೇಷ್ಠ ಆಟಗಾರನನ್ನು ಗೌರವಿಸಲಾಗುತ್ತಿದೆ!’ ಎಂದು ಬರೆದಿದೆ.
ಈ ಸಂದರ್ಭ ಮಾತನಾಡಿದ ಗವಾಸ್ಕರ್, ಈ ಗೌರವಕ್ಕೆ ಹೃತ್ಪೂರ್ವಕ ಕೃತಜ್ಞತೆ ಎಂದು ಹೇಳಿದರು. ‘ಎಂಸಿಎ ನನ್ನ ತಾಯಿ ಮತ್ತು ಬಿಸಿಸಿಐ ನನ್ನ ತಂದೆ. ತುಂಬಾ ಧನ್ಯವಾದಗಳು. ಭಾರತೀಯ ಕ್ರಿಕೆಟ್‌ಗೆ ಧನ್ಯವಾದಗಳು. ಇದು ಒಂದು ದೊಡ್ಡ ಗೌರವ. ಈ ಗೌರವಕ್ಕಾಗಿ ನಾನು ಬಿಸಿಸಿಐಗೆ ತುಂಬಾ ಕೃತಜ್ಞನಾಗಿದ್ದೇನೆ’ ಎಂದರು.
ಸುನಿಲ್ ಗವಾಸ್ಕರ್ 1971 ರಿಂದ 1987 ರವರೆಗೆ ಭಾರತವನ್ನು ಪ್ರತಿನಿಧಿಸಿದ್ದರು, ಅವರು ಇತಿಹಾಸದ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಏಕೈಕ ಭಾರತೀಯ ಆರಂಭಿಕ ಆಟಗಾರ ಇವರು. ಇಲ್ಲಿಯವರೆಗೆ, ಅವರು ಟೆಸ್ಟ್‌ನಲ್ಲಿ 10,122 ರನ್‌ಗಳೊಂದಿಗೆ ಭಾರತದ ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದು, ಸಚಿನ್ ತೆಂಡೂಲ್ಕರ್ (15,921) ಮತ್ತು ರಾಹುಲ್ ದ್ರಾವಿಡ್ (13,288) ಮೊದಲ ಎರಡು ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ

ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
