Life Insurance Corporation IPO: ಎಲ್​ಐಸಿ ಐಪಿಒಗೆ ಸೆಬಿಯಿಂದ ಅನುಮತಿ

ಎಲ್​ಐಸಿಯ ಬೃಹತ್​ ಐಪಿಒಗೆ ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಅನುಮೋದನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ. ಆ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.

Life Insurance Corporation IPO: ಎಲ್​ಐಸಿ ಐಪಿಒಗೆ ಸೆಬಿಯಿಂದ ಅನುಮತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 09, 2022 | 2:02 PM

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (Life Insurance Corporation Of India) ಐಪಿಒ ಅರ್ಜಿಗೆ ಭಾರತದ ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಅನುಮತಿ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಎಲ್​ಐಸಿಯಲ್ಲಿ ಶೇ 5ರಷ್ಟು ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದೆ. ಈ ಬೆಳವಣಿಗೆ ಬಗ್ಗೆ ನೇರ ಮಾಹಿತಿ ಇರುವವರು- ತಮ್ಮ ಗುರುತನ್ನು ಬಹಿರಂಗ ಪಡಿಸಲು ಇಚ್ಛಿಸದಿರುವವರು ತಿಳಿಸಿರುವಂತೆ, ಮಾರುಕಟ್ಟೆ ನಿಯಂತ್ರಕವಾದ ಸೆಬಿಯಿಂದ ಈ ಬಗ್ಗೆ ಅಧಿಕೃತವಾಗಿ ಘೋಷಣೆಯೊಂದು ಬಾಕಿ ಇದೆ. ಎಲ್​ಐಸಿ ಲೀಡ್​ ಮ್ಯಾನೇಜರ್​ನಿಂದ ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI)ನಿಂದ ಮಾರ್ಚ್ 3ನೇ ತಾರೀಕಿನಂದು ಸ್ಪಷ್ಟನೆ ಕೋರಿತ್ತು. ಅದಕ್ಕೆ ಶೀಘ್ರವಾಗಿ ಪ್ರತಿಕ್ರಿಯೆ ದೊರೆತಿತ್ತು. ಪಬ್ಲಿಕ್ ಇಶ್ಯೂಗೆ ಸಂಬಂಧಿಸಿದಂತೆ ಗಮನಕ್ಕೆ ಬಂದ ಸಂಗತಿಯನ್ನು ಮಂಗಳವಾರ ಸಂಜೆ ವಿತರಿಸಲಾಗಿದೆ. ಇದು ಶೀಘ್ರದಲ್ಲೇ ಅಧಿಕೃತವಾಗಿ ಸಾರ್ವಜನಿಕರ ಗಮನಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಪರಿಶೀಲನೆಗಾಗಿ ನೀಡಲಾದ ಬೃಹತ್ 650 ಪುಟಗಳ ಪ್ರಾಸ್ಪೆಕ್ಟಸ್‌ನ ಹೊರತಾಗಿಯೂ ವಿಮಾದಾರ ಕಂಪೆನಿ ಎಲ್​ಐಸಿ ಕೇವಲ 22 ದಿನಗಳಲ್ಲಿ ಸೆಬಿ ಮತ್ತು ಬ್ಯಾಂಕರ್‌ಗಳಿಂದ ಕೇವಲ ಒಂದು ಸುತ್ತಿನ ಸ್ಪಷ್ಟೀಕರಣದ ನಂತರ ಅನುಮೋದನೆ ಪಡೆದಿದೆ. ಆರಂಭಿಕ ಸಾರ್ವಜನಿಕ ಕೊಡುಗೆ ಮೂಲಕ ಎಲ್​ಐಸಿಯ ಶೇ 5ರಷ್ಟು ಪಾಲನ್ನು ಮಾರಾಟದಿಂದ ಸರ್ಕಾರವು ರೂ. 65000-80,000 ಕೋಟಿ ಸಂಗ್ರಹಿಸಲಿದೆ. ಎಲ್‌ಐಸಿಯ ಸಾರ್ವಜನಿಕ ವಿತರಣೆ ಪ್ರಾರಂಭದ ದಿನಾಂಕವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ಇನ್ನೂ ಇದೆ. ಮೂಲತಃ ಸರ್ಕಾರವು ಐಪಿಒ ಪ್ರಾರಂಭಿಸಲು ಮಾರ್ಚ್ ಮಧ್ಯದ ವಾರದ ಗುರಿಯನ್ನು ಹೊಂದಿತ್ತು.

ಆದರೆ, ಈಕ್ವಿಟಿ ಮಾರುಕಟ್ಟೆಯಲ್ಲಿನ ಇಳಿಕೆ ಮತ್ತು ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾ ದಾಳಿ ಹಿನ್ನೆಲೆಯಲ್ಲಿ ಜಾಗತಿಕ ಹೂಡಿಕೆದಾರರಲ್ಲಿನ ಆತಂಕದಿಂದಾಗಿ ಎಲ್​ಐಸಿ ಐಪಿಒಗಾಗಿ ಬಿಡುಗಡೆ ಸಮಯದ ಬಗ್ಗೆ ಸರ್ಕಾರವು ಸಂದಿಗ್ಧತೆಗೆ ಸಿಲುಕಿದೆ ಎಂದು ವರದಿಯಾಗಿದೆ. “ಮಾರ್ಚ್‌ನಲ್ಲಿ ಐಪಿಒ ಪ್ರಾರಂಭಿಸಬೇಕೆ ಅಥವಾ ಏಪ್ರಿಲ್ ಮಧ್ಯಕ್ಕೆ ಮುಂದೂಡಬೇಕೆ ಎಂದು ಸರ್ಕಾರಕ್ಕೆ ಸದ್ಯಕ್ಕೆ ಖಚಿತವಾಗಿಲ್ಲ. ತಜ್ಞರ ಸಮಿತಿ ಸಭೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು,” ಎಂದು ಮೂಲಗಳು ತಿಳಿಸಿವೆ.

ಎಲ್​ಐಸಿ ಐಪಿಒ ಯಶಸ್ಸು ಸರ್ಕಾರಕ್ಕೆ ತನ್ನ ಆಸ್ತಿ ಮಾರಾಟ ಗುರಿಯನ್ನು ತಲುಪಲು ನಿರ್ಣಾಯಕವಾಗಿದ್ದು, ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ.78,000 ಕೋಟಿಗೆ ಅರ್ಧಕ್ಕಿಂತ ಹೆಚ್ಚು ಕಡಿತಗೊಂಡಿದೆ. ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಮಾರ್ಚ್ ಅಂತ್ಯದ ಮೊದಲು ವಿತರಣೆ ಗುರಿಯನ್ನು ಪೂರೈಸುವುದು ಖಜಾನೆಗೆ ಮುಖ್ಯವಾಗಿದೆ. ಬೃಹತ್ ಐಪಿಒ ಯಶಸ್ಸನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಲಾಗುತ್ತಿದ್ದು, ಮಾರುಕಟ್ಟೆಯ ನಿಯಂತ್ರಕ ಕೂಡ ಹೂಡಿಕೆ ಬ್ಯಾಂಕರ್‌ಗಳನ್ನು ಮುಂದಿನ ಕೆಲವು ವಾರಗಳಲ್ಲಿ ಮಾರುಕಟ್ಟೆಯಲ್ಲಿ ಸಂಖ್ಯೆ ದೃಷ್ಟಿಯಿಂದ ಒತ್ತಡ ಆಗದಂತೆ ತಡೆಯುತ್ತದೆ ಎಂದು ಬ್ಯಾಂಕರ್‌ಗಳು ಹೇಳಿದ್ದಾರೆ.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒದಲ್ಲಿ ಶೇ 20ರಷ್ಟು ವಿದೇಶಿ ನೇರ ಹೂಡಿಕೆಗೆ ಸಂಪುಟದಿಂದ ಸಮ್ಮತಿ ಎನ್ನುತ್ತಿದೆ ವರದಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್