AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market: ಷೇರುಪೇಟೆ ಸೂಚ್ಯಂಕಗಳಾದ ನಿಫ್ಟಿ 330 ಪಾಯಿಂಟ್ಸ್, ಸೆನ್ಸೆಕ್ಸ್​ 1200 ಪಾಯಿಂಟ್ಸ್​ಗೂ ಜಾಸ್ತಿ ಹೆಚ್ಚಳ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಾರ್ಚ್ 9ನೇ ತಾರೀಕಿನ ಬುಧವಾರದಂದು ಭಾರೀ ಏರಿಕೆಯನ್ನು ದಾಖಲಿಸಿವೆ. ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ನಿಫ್ಟಿಯ ಷೇರುಗಳ ವಿವರ ಇಲ್ಲಿದೆ.

Stock Market: ಷೇರುಪೇಟೆ ಸೂಚ್ಯಂಕಗಳಾದ ನಿಫ್ಟಿ 330 ಪಾಯಿಂಟ್ಸ್, ಸೆನ್ಸೆಕ್ಸ್​ 1200 ಪಾಯಿಂಟ್ಸ್​ಗೂ ಜಾಸ್ತಿ ಹೆಚ್ಚಳ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 09, 2022 | 2:43 PM

Share

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಾರ್ಚ್ 9ನೇ ತಾರೀಕಿನ ಬುಧವಾರದಂದು ಭಾರೀ ಏರಿಕೆ ಕಂಡಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಬಿಎಸ್​ಇ ಸೆನ್ಸೆಕ್ಸ್ 1203.76 ಪಾಯಿಂಟ್ಸ್ ಹಾಗೂ ನಿಫ್ಟಿ 329.70 ಪಾಯಿಂಟ್ಸ್​ನಷ್ಟು ಹೆಚ್ಚಳ ಆಗಿತ್ತು. ಜಾಗತಿಕ ಸೂಚ್ಯಂಕಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ವಾಹನ, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್, ಫಾರ್ಮಾ, ಐಟಿ ಹಾಗೂ ರಿಯಾಲ್ಟಿ ಸೂಚ್ಯಂಕಗಳು ತಲಾ ಶೇ 2ರಷ್ಟು ಮೇಲೇರಿದ್ದವು. ಈ ಮಧ್ಯೆ ಲೋಹ ಸೂಚ್ಯಂಕ ಶೇ 0.5ರಷ್ಟು ಇಳಿಕೆ ಕಂಡಿದ್ದು, ಬಿಎಸ್​ಇ ಸ್ಮಾಲ್​ಕ್ಯಾಪ್​ ಮತ್ತು ಮಿಡ್​ಕ್ಯಾಪ್ ಸೂಚ್ಯಂಕಗಳು ತಲಾ ಶೇ 2ರಷ್ಟು ಮೇಲೇರಿವೆ. ನಿಫ್ಟಿ ಬ್ಯಾಂಕ್ ಸೂಚ್ಯಂಕವು 517.50 ಪಾಯಿಂಟ್ಸ್ ಮೇಲೇರಿದೆ. ಇಂಟ್ರಾಡೇಯಲ್ಲಿ ಝೈಡಸ್ ಲೈಫ್​ಸೈನ್ಸಸ್ ಷೇರು ದರವು ಶೇ 5ಕ್ಕಿಂತ ಹೆಚ್ಚು ಮೇಲೇರಿತ್ತು.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ನಿಂದ ಷೇರು ಮರುಖರೀದಿ ಇಂದಿನಿಂದ (ಮಾರ್ಚ್ 9, 2022) ಪ್ರಾರಂಭ ಆಗಿದೆ. 18 ಸಾವಿರ ಕೋಟಿ ರೂಪಾಯಿ ಮೊತ್ತದ ಷೇರು ಮರುಖರೀದಿಯನ್ನು ಬುಧವಾರದಿಂದ ಶುರು ಮಾಡಿದೆ. ಟಿಸಿಎಸ್​ ಸಾಮಾನ್ಯ ವರ್ಗದಿಂದ 3,40,00,000 ಷೇರುಗಳನ್ನು ಮತ್ತು ಕಾಯ್ದಿರಿಸಿದ ವರ್ಗದಿಂದ 60,00,000 ಷೇರುಗಳನ್ನು ಖರೀದಿಸುವುದಾಗಿ ಘೋಷಿಸಿತು. ಈ ಕೊಡುಗೆಯು ಎಲ್ಲ ರೀತಿ ಷೇರುದಾರರಿಗೆ ಮುಕ್ತವಾಗಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಬಜಾಜ್ ಫೈನಾನ್ಸ್ ಶೇ 4.86

ರಿಲಯನ್ಸ್ ಶೇ 4.77

ಬಜಾಜ್ ಫಿನ್​ಸರ್ವ್ ಶೇ 4.67

ಮಹೀಂದ್ರಾ ಅಂಡ್ ಮಹೀಂದ್ರಾ ಶೇ 4.56

ಅದಾನಿ ಪೋರ್ಟ್ಸ್ ಶೇ 4.01

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಶ್ರೀ ಸಿಮೆಂಟ್ಸ್ ಶೇ -2.62

ಪವರ್​ ಗ್ರಿಡ್ ಕಾರ್ಪೊರೇಷನ್ ಶೇ -1.95

ಎನ್​ಟಿಪಿಸಿ ಶೇ -1.79

ಒಎನ್​ಜಿಸಿ ಶೇ -1.34

ಟಾಟಾ ಸ್ಟೀಲ್ ಶೇ -0.93

ಇದನ್ನೂ ಓದಿ: TCS Shares Buyback: ಮಾರ್ಚ್​ 9ರಿಂದ 23ರ ಮಧ್ಯೆ 18 ಸಾವಿರ ಕೋಟಿ ರೂ. ಮೊತ್ತದ ಟಿಸಿಎಸ್​ ಷೇರು ಮರುಖರೀದಿ

Follow Us
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್