Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್
ಸಾಂದರ್ಭಿಕ ಚಿತ್ರ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಬಯಸುವ ಹೊಸ ಹೂಡಿಕೆದಾರರಿಗೆ 5 ಟಿಪ್ಸ್​ಗಳು ಇಲ್ಲಿವೆ. ಇವುಗಳನ್ನು ಅನುಸರಿಸಿದರೆ ಬಂಡವಾಳವನ್ನು ಕಾಪಾಡಿಕೊಳ್ಳುವುದಕ್ಕೆ ನೆರವಾಗುವ ಜತೆಗೆ ಲಾಭವೂ ನಿರೀಕ್ಷಿಸಬಹುದು.

TV9kannada Web Team

| Edited By: Srinivas Mata

Dec 14, 2021 | 5:38 PM

ಕೊರೊನಾ ಕಾಲಿಟ್ಟ ನಂತರದಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ-50 ಭಾರೀ ಏರಿಕೆ ಕಂಡಿವೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರು ಪೇಟೆಯೊಳಗೆ ಭಾರೀ ಪ್ರಮಾಣದಲ್ಲಿ ಕಾಲಿಡುತ್ತಿದ್ದಾರೆ. ಈ ಕಾರಣದಿಂದಾಗಿ 2020ರ ಮಾರ್ಚ್ ಹೊತ್ತಿಗೆ 2.12 ಕೋಟಿ ಇದ್ದ ಹೂಡಿಕೆದಾರರ ಸಂಖ್ಯೆಯು 2021ರ ಸೆಪ್ಟೆಂಬರ್ ಹೊತ್ತಿಗೆ ಸಿಡಿಎಸ್​ಎಲ್​ನಲ್ಲಿ ದುಪ್ಪಟ್ಟಿಗೂ ಹೆಚ್ಚಾಗಿ 4.64 ಕೋಟಿ ಮುಟ್ಟಿದೆ. ಈ ಪೈಕಿ 1.3 ಕೋಟಿ ಖಾತೆಗಳು 2021ರ ಏಪ್ರಿಲ್​ನಿಂದ ಸೆಪ್ಟೆಂಬರ್​ ಮಧ್ಯೆ ಆರು ತಿಂಗಳಲ್ಲಿ ತೆರೆಯಲಾಗಿದೆ. ಈ ಸಂಖ್ಯೆಯೇ ಹೇಳುತ್ತದೆ; ಅದಯಾವ ಪ್ರಮಾಣದಲ್ಲಿ ಹೊಸಬರ ಆಗಮನ ಆಗುತ್ತಿದೆ ಎಂಬ ಸಂಗತಿ. ಮ್ಯೂಚುವಲ್ ಫಂಡ್ಸ್​ನಂತೆ ಅಲ್ಲದೆ ಸ್ಟಾಕ್ಸ್​ನಲ್ಲಿ ನೇರ ಹೂಡಿಕೆ ಮಾಡುವುದರಿಂದ ಅಪಾಯ ಹಾಗೂ ಪ್ರತಿಫಲ ಎರಡೂ ಹೆಚ್ಚು. ಗುಣಮಟ್ಟದ ಷೇರುಗಳನ್ನು ದೀರ್ಘಾವಧಿಗೆ ಇರಿಸಿಕೊಳ್ಳುವ ಬದಲಿಗೆ ಹಲವು ಹೂಡಿಕೆದಾರರು ಅಲ್ಪಾವಧಿ ಅಥವಾ ಡೇ ಟ್ರೇಡಿಂಗ್​ ಪ್ರಯತ್ನಿಸುತ್ತಿದ್ದಾರೆ.

ಹೂಡಿಕೆದಾರರಿಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಷೇರು ಮಾರುಕಟ್ಟೆಯ ಹೂಡಿಕೆಯು ಲಾಭ ತಂದುಕೊಟ್ಟಂತೆಯೇ ನಷ್ಟವನ್ನೂ ಉಂಟು ಮಾಡಬಹುದು. ಹೀಗಾಗುವುದರಿಂದ ಬಂಡವಾಳವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಯಾವಾಗಲೂ ಮಾರುಕಟ್ಟೆ ಏರಿಕೆಯಲ್ಲೇ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಇಳಿಕೆ ಹಾದಿಯನ್ನೂ ಹಿಡಿಯಬಹುದು. ಅಲ್ಪಾವಧಿಯಿಂದ ಮಧ್ಯಮಾವಧಿಗೆ ಷೇರುಗಳ ಖರೀದಿ ಮಾಡಬೇಕು ಅಂದರೆ ಮೂಲಭೂತ ಅಂಶಗಳು, ತಾಂತ್ರಿಕ ಕಾರಣಗಳು ಇವೆಲ್ಲವನ್ನೂ ಗಮನಿಸಬೇಕು. ಷೇರು ಮಾರುಕಟ್ಟೆಗೆ ಪ್ರವೇಶಿಸುವ ಹೊಸಬರು ಗಮನಿಸಬೇಕಾದ ಅಂಶಗಳಿವು.

1. ಬಂಡವಾಳದ ರಕ್ಷಣೆ ನಿಧಾನ ಹಾಗೂ ಸ್ಥಿರವಾದ ಹೆಜ್ಜೆಗಳನ್ನು ಇರಿಸುವುದೇ ಗೆಲ್ಲುವುದಕ್ಕೆ ಮೂಲಮಂತ್ರ. ಇನ್ನು ಹೂಡಿಕೆಯ ಮೂಲ ಅಂಶ ಏನೆಂದರೆ, ಬಂಡವಾಳ ಮೊತ್ತವನ್ನು ಕಾಪಾಡಿಕೊಳ್ಳುವ ಕಡೆಗೆ ಗಮನ ನೀಡಬೇಕು ಎನ್ನುವುದು. ಇದಕ್ಕಾಗಿ ತೆಗೆದುಕೊಳ್ಳುವ ತೀರ್ಮಾನದ ವಿಚಾರದಲ್ಲಿ ಎರಡು ಅಭ್ಯಾಸಗಳನ್ನು ಅನುಸರಿಸಬೇಕು.

ಅ) ವಹಿವಾಟಿಗೆ ಇಂತಿಷ್ಟೇ ಎಂಬ ನಷ್ಟಕ್ಕೆ ಮಿತಿ ಇರಲಿ: ಒಂದು ವಹಿವಾಟಿನಲ್ಲಿ ಭರಿಸಬಹುದಾದ ಗರಿಷ್ಠ ಮೊತ್ತವನ್ನು ಮೊದಲ ನಿಶ್ಚಯ ಮಾಡಿಕೊಳ್ಳಬೇಕು. ಆ ನಿರ್ಧಾರದಲ್ಲಿ ಸ್ಥಿರವಾಗಿರಬೇಕು ಮತ್ತು ಅಷ್ಟು ಮೊತ್ತ ನಷ್ಟವಾದಲ್ಲಿ ಆ ವಹಿವಾಟಿನಿಂದ ಆಚೆ ಬಂದುಬಿಡಬೇಕು.

ಆ) ಭಾಗಶಃ ಹೂಡಿಕೆ: ಯಾವುದೇ ಸ್ಟಾಕ್ ಬಗ್ಗೆ ಅದೆಂಥ ವಿಶ್ವಾಸ ಇದ್ದರೂ ಪೂರ್ಣವಾಗಿ ಬಂಡವಾಳವನ್ನು ಹೂಡಿಕೆ ಮಾಡಬಾರದು.

2. ನಿರೀಕ್ಷೆ ಎಷ್ಟಿರಬೇಕು ಎಂಬುದು ಗೊತ್ತಿರಲಿ ಹೊಸ ಟ್ರೇಡರ್ ಅಥವಾ ಹೂಡಿಕೆದಾರರಿರಲಿ ಅಥವಾ ಹಳಬರೇ ಇರಲಿ, ಷೇರು ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ತಿಳಿಯುವುದು ಕಷ್ಟ. ಅನುಭವ ಇರುವಂಥವರೇ ತಮ್ಮ ಟ್ರೇಡ್​ಗಳಲ್ಲೇ ತಪ್ಪೆಸಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಟ್ರೇಡ್​ನಲ್ಲಿ ಎಷ್ಟು ಲಾಭ ಮಾಡಬಹುದು ಎಂಬ ಬಗ್ಗೆಯೂ ತಿಳಿದಿರಬೇಕು.

3. ವಾಸ್ತವ ಪರಿಶೀಲಿಸಿ ಹೂಡಿಕೆ ದುಪ್ಪಟ್ಟು ಮಾಡಲು ಪ್ರತಿ ವರ್ಷ ಶೇ 100ರಷ್ಟು ಲಾಭ ಮಾಡುವುದು ವಾಸ್ತವದಲ್ಲಿ ಸಾಧ್ಯವಿಲ್ಲ. ದೀರ್ಘಾವಧಿಯಲ್ಲಿ ಇದು ಕಾರ್ಯಸಾಧುವಲ್ಲ. ವಾಸ್ತವದಲ್ಲಿ ಸಾಧ್ಯವಾಗುವಂಥ ಗುರಿ ಹಾಕಿಕೊಳ್ಳುವುದು ಯಶಸ್ಸಿನ ಮೊದಲ ಹೆಜ್ಜೆಯಾಗುತ್ತದೆ. ಶೇ 20ರಿಂದ 25ರಷ್ಟು ಲಾಭ ಮಾಡಿಕೊಳ್ಳುವ ಗುರಿ ಹಾಕಿಕೊಳ್ಳುವುದು ಸುರಕ್ಷಿತ. ಅತಿ ಹೆಚ್ಚಿನ ರಿಟರ್ನ್ಸ್ ಆಮಿಷಕ್ಕೆ ಬೀಳಬಾರದು.

4. ನಗದು ಸೆಗ್ಮೆಂಟ್​ನಲ್ಲಿ ಹೂಡಿಕೆ ಅನನುಭವಿ ಹೂಡಿಕೆದಾರರು ನಗದು ಸ್ಟಾಕ್ ಹೂಡಿಕೆಗಳ ವಿಭಾಗದಲ್ಲೇ ಹೂಡಿಕೆ ಮಾಡುವುದು ಉತ್ತಮ. ಫ್ಯೂಚರ್ಸ್ ಅಂಡ್ ಆಪ್ಷನ್ಸ್​ಗಳಲ್ಲಿ ಪ್ರಯತ್ನಿಸಬಾರದು. ಇವುಗಳ್ಲಲಿಬ ಹೂಡಿಕೆಯು ಹೇಗೆ ಹೆಚ್ಚಿನ ಲಾಭವನ್ನು ತರುತ್ತದೋ ಅದೇ ರೀತಿ ನಷ್ಟವನ್ನೂ ಉಂಟು ಮಾಡುತ್ತದೆ.

5. ಸರಳವಾಗಿ ಇರಿಸಿಕೊಳ್ಳಬೇಕು ಷೇರುಗಳ ಖರೀದಿಗೆ ಸಂಬಂಧಿಸಿದಂತೆ ಹಲವು ಸಾಫ್ಟ್​ವೇರ್​ಗಳು ಬಂದಿವೆ. ಆದರೆ ಆರ್ಥಿಕ ಸ್ಥಿರತೆಗಾಗಿ ವಿಶ್ಲೇಷಣೆ ಸರಳವಾಗಿ ಮಾಡಿಕೊಳ್ಳಬೇಕು. ಇನ್ನು ಕೊನೆಯ ಮಾತು, ಕಡೆಗಣಿಸುವುದಕ್ಕೆ ಸಾಧ್ಯವಿಲ್ಲದ ಸಲಹೆ ಅಂದರೆ, ದೊಡ್ಡ ಕಂಪೆನಿಗಳ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡಬೇಕು. ಹೂಡಿಕೆದಾರರು ಟಾಪ್ 200 ಕಂಪೆನಿಗಳಲ್ಲಿ ಹೂಡಬೇಕು. ಉತ್ತಮವಾದ ಷೇರುಗಳು ಹಾಗೂ ಅವುಗಳು ಅತ್ಯುತ್ತಮವಾದ ರಿಟರ್ನ್ಸ್ ನೀಡುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಇದನ್ನೂ ಓದಿ: Multibagger Stocks: ಈ ಕಂಪೆನಿ ಷೇರುಗಳ ಮೇಲೆ ಮಾಡಿದ ರೂ. 1 ಲಕ್ಷದ ಹೂಡಿಕೆ 3 ವರ್ಷದಲ್ಲಿ 5.67 ಕೋಟಿ ರೂಪಾಯಿ

Follow us on

Related Stories

Most Read Stories

Click on your DTH Provider to Add TV9 Kannada