ಹುಬ್ಬಳ್ಳಿ ತಿರಂಗ ಯಾತ್ರೆಯಲ್ಲಿ ಡೊಳ್ಳು ಬಾರಿಸಿ ಸಂತಸ ಪ್ರದರ್ಶಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ತಿರಂಗಾ ಯಾತ್ರೆಯಲ್ಲಿ ಹಲವಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು. ಭಾರೀ ಗಾತ್ರದ ರಾಷ್ಟ್ರಧ್ವಜವನ್ನು ಶಾಲೆಯೊಂದರ ಮಕ್ಕಳು ಹಿಡಿದುಕೊಂಡು ಸಾಗಿದರು. ಎಲ್ಲರ ಬಾಯಲ್ಲೂ ಭಾರತ್ ಮಾತಾ ಕೀ ಜೈ ಘೋಷಣೆ. ಈ ಯಾತ್ರೆಯ ಆರಂಭ ಮಾತ್ರ ಕಾಣುತ್ತದೆ, ಕೊನೆ ಎಲ್ಲಿದೆ ಅಂತ ಗೊತ್ತಾಗೋದೇ ಇಲ್ಲ, ಅಂದರೆ ಅಷ್ಟು ಪ್ರಮಾಣದಲ್ಲಿ ಕಾರ್ಯಕರ್ತರು ಮತ್ತು ಜನ ಸೇರಿದ್ದಾರೆ.
ಬೆಂಗಳೂರು, ಮೇ 16: ಭಾರತದ ಸೇನೆಯು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ (Operation Sindoor) ಮೂಲಕ ಸಾಧಿಸಿದ ಪ್ರಚಂಡ ಯಶಸನ್ನು ಸೆಲಿಬ್ರೇಟ್ ಮಾಡಲು ಬಿಜೆಪಿ ಕಾರ್ಯಕರ್ತರು ದೇಶದಾದ್ಯಂತ ತಿರಂಗಾ ಯಾತ್ರೆ ಆಯೋಜಿಸಿದ್ದಾರೆ. ಅದರ ಭಾಗವಾಗಿ ಹುಬ್ಬಳ್ಳಿ ನಗರದಲ್ಲಿ ನಡೆದ ಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗಿಯಾಗಿದ್ದರು. ಸಚಿವ ಜೋಶಿ ತಮ್ಮ ಸಂತಸವನ್ನು ಡೊಳ್ಳು ಬಾರಿಸುವ ಪ್ರದರ್ಶಿಸಿದರು. ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಕೈಯಲ್ಲಿ ತಿರಂಗಾ ಮತ್ತು ಆಪರರೇಷನ್ ಸಿಂಧೂರ ಪ್ಲಕಾರ್ಡ್ಗಳನ್ನು ಹಿಡಿದು ಭಾಗವಹಿಸಿದರು. ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಅವರ ಪೋಸ್ಟರ್ ಗಳನ್ನೂ ನೋಡಬಹುದು.
ಇದನ್ನೂ ಓದಿ: ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

