AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಹಾಸ್​ ಶೆಟ್ಟಿ ಕೊಲೆಯ ಪ್ರತೀಕಾರಕ್ಕೆ ಹಿಂದೂ ಸಮಾಜ ಕಾದು ಕೂತಿದೆ: ಭಜರಂಗದಳ ಮುಖಂಡ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗದಳ ಮುಖಂಡ ಭರತ್ ಕುಮ್ಡೇಲು ಅವರು ಪ್ರತೀಕಾರದ ಮಾತುಗಳನ್ನು ಆಡಿದ್ದಾರೆ. ಸುಹಾಸ್ ಶೆಟ್ಟಿಯವರ ಹತ್ಯೆಯನ್ನು ಮುಸಲ್ಮಾನರು ವಿಜೃಂಭಿಸುತ್ತಿದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸುಹಾಸ್​ ಶೆಟ್ಟಿ ಕೊಲೆಯ ಪ್ರತೀಕಾರಕ್ಕೆ ಹಿಂದೂ ಸಮಾಜ ಕಾದು ಕೂತಿದೆ: ಭಜರಂಗದಳ ಮುಖಂಡ
ಭರತ್‌ ಕುಮ್ಡೇಲು
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:May 16, 2025 | 3:36 PM

Share

ಮಂಗಳೂರು, ಮೇ 16: ಮಂಗಳೂರು (Mangaluru) ನಗರದ ಬಜ್ಪೆ ಬಳಿ ನಡೆದ “ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆಯ ಪ್ರತೀಕಾರಕ್ಕೆ ಹಿಂದೂ (Hindu) ಸಮಾಜ ಕಾದು ಕೂತಿದೆ” ಎಂದು ಭಜರಂಗದಳ ಮುಖಂಡ ಭರತ್‌ ಕುಮ್ಡೇಲು ಅವರು ಪ್ರಜೋದನಕಾರಿ ಮಾತುಗಳನ್ನು ಆಡಿದ್ದಾರೆ. ಪುತ್ತೂರಿನಲ್ಲಿ ನಡೆದ ಸುಹಾಸ್‌ ಶೆಟ್ಟಿ ಶ್ರದ್ದಾಂಜಲಿ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಸುಹಾಸನನ್ನು ಯಾವ ರೀತಿ ಕೊಲೆ ಮಾಡಿದ್ದಾರೆ ಅದೇರೀತಿ ಪ್ರತೀಕಾರವಾಗಬೇಕು” ಎಂದರು.

“ಮುಸಲ್ಮಾನರು ಸುಹಾಸ್‌ ಹತ್ಯೆಯನ್ನು ವಿಜೃಂಭಣೆ ಮಾಡುತ್ತಿದ್ದಾರೆ. ಆ ಹತ್ಯೆಯಲ್ಲಿ ಮುಸಲ್ಮಾನರ ಬರ್ಬರತೆ ಕಂಡು ಹಿಂದೂ ಸಮಾಜ ಹೆದರಿ ಹೋಯ್ತು. ಆದರೆ, ಹಿಂದೂ ಸಮಾಜಕ್ಕೆ ಗೊತ್ತಿರಬೇಕು, ಇಂತಹ ಹತ್ಯೆಗಳು ಇದೇ ಮೊದಲಲ್ಲ. ಅದೆಷ್ಟೋ ಮುಸಲ್ಮಾನರ ಹತ್ಯೆಗಳು ಇದೇ ರೀತಿ ನಡೆದಿದೆ. ದೇಹ ಮತ್ತು ತಲೆ ಬೇರೆ ಬೇರೆ ಆಗಿದೆ. ಮರಣೋತ್ತರ ಪರೀಕ್ಷೆ ಮಾಡುವಾಗ ಹೊಲಿಗೆ ಹಾಕಲು ಜಾಗ ಇರಲಿಲ್ಲ. ಮುಖದ ಪರಿಚಯ ಕೂಡ ಸಿಗುತ್ತಿರಲಿಲ್ಲ. ಆ ರೀತಿ ಕೊಚ್ಚಿ ಕೊಂದವರು ನಮ್ಮ ಹಿಂದೂಗಳಲ್ಲಿ ಇದ್ದಾರೆ, ಇದೇನೂ ಹೊಸತಲ್ಲ, ಇದು ಅವರ ಸಾಧನೆಯೂ ಅಲ್ಲ” ಎಂದು ಹೇಳಿದರು.

“ವಿಷ ಕೊಟ್ಟು ಯಾರನ್ನೂ ಕೊಂದಿದ್ದಿಲ್ಲ. ಎಲ್ಲ ಹತ್ಯೆಗಳು ಇದೇರೀತಿ ಆಗಿರುವುದು. ಹೀಗಾಗಿ, ಹಿಂದೂ ಸಮಾಜ ಇದಕ್ಕೆ ಭಯ ಪಡಬೇಕಿಲ್ಲ. ಭಯ ಪಡುವ ಅವಶ್ಯಕತೆಯೂ ಇಲ್ಲ. ಈ ರೀತಿ ಹಿಂದೂ ಕಾರ್ಯಕರ್ತನ ಹತ್ಯೆಯಾದರೆ ಅದಕ್ಕೆ ಪ್ರತೀಕಾರವಾಗಿ ಇನ್ನೊಂದು ಹತ್ಯೆ ಆಗುತ್ತೆ‌” ಎಂದಿದ್ದಾರೆ.

ಇದನ್ನೂ ಓದಿ
Image
ಸುಹಾಸ್ ಶೆಟ್ಟಿ ಕೊಲೆಗೆ ವಿದೇಶದಿಂದ ಹಣ ಸಂದಾಯವಾಗಿರುವ ಶಂಕೆ
Image
ಸುಹಾಸ್ ಶೆಟ್ಟಿ ಕೊಲೆ: ಇಲ್ಲಿದೆ ಆರೋಪಿಗಳ ಪ್ಲ್ಯಾನ್​​ನ ಇನ್​ಸೈಡ್ ಡಿಟೇಲ್ಸ್
Image
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರಿನ 3 ಕಡೆ ಚಾಕು ಇರಿತ: 7 ಜನರ ಬಂಧನ
Image
ಸುಹಾಸ್ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿರುವ ಇಬ್ಬರು ಹಿಂದೂಗಳು ಯಾರು?

“ಆದರೆ ಈ ಕೇಸಲ್ಲಿ ಆ ರೀತಿ ಆಗಿಲ್ಲ. ಹಾಗಂತ ಹಿಂದೂ ಸಮಾಜಕ್ಕೆ ಸಾಮರ್ಥ್ಯ ಇಲ್ಲದೆ ಕೂತಿಲ್ಲ. ಹತ್ಯೆಯಾಗುವುದಾದರೆ, ಪ್ರತೀಕಾರ ಆಗೋದಾದರೆ ಸುಹಾಸನನ್ನ ಯಾವ ರೀತಿ ಕೊಲೆ ಮಾಡಿದ್ದಾರೆ ಅದೇರೀತಿ ಪ್ರತೀಕಾರ ಆಗಬೇಕು. ಅದೇರೀತಿಯ ಪ್ರತೀಕಾರಕ್ಕೆ ಹಿಂದೂ ಸಮಾಜ ಕಾದು ಕೂತಿದೆ” ಎಂದು ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ, ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ

“ಪ್ರತಿಕ್ರಿಯೆ ಮಾಡದೆ ಸುಮ್ಮನಿರಲು ಇದು ಕಾಶ್ಮೀರ ಅಲ್ಲ, ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ಮಾಡಿದ್ದಾರೆ. ಇದು ಮಂಗಳೂರು, ಇದು ಕಾಶ್ಮೀರ ಅಲ್ಲ, ಇಲ್ಲಿ ಬಿಡುವ ಪ್ರಶ್ನೆಯೇ ಇಲ್ಲ. ಹಿಂದೂ ಕಾರ್ಯಕರ್ತರು, ಹಿಂದೂಗಳು ಮುಸಲ್ಮಾನರ ಜೊತೆ ವ್ಯಾಪಾರ ಮಾಡಬೇಡಿ. ನಾಯಕರು ಕೂಡ ಯಾವುದೇ ವಹಿವಾಟು ಮಾಡಬಾರದು. ಸುಹಾಸ್ ಕೇಸ್‌ ಎನ್‌ಐಎ ತನಿಖಗೆ ಕೊಡಲೇಬೇಕು” ಎಂದು ಒತ್ತಾಯಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Fri, 16 May 25

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?