ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ಬಿವೈ ವಿಜಯೇಂದ್ರ
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಯನಗರದ ಬಿಜೆಪಿ ಘಟಕ ಕೊರಗಜ್ಜನಿಗೆ ಹರಕೆ ಹೊತ್ತುಕೊಂಡಿತ್ತು. ಇದೀಗ ವಿಶೇಷ ನೇಮದ ಮೂಲಕ ಹರಕೆ ತೀರಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗಿಯಾದರು. ದಕ್ಷಿಣ ಕನ್ನಡ ಸಂಸದರ ಮೂಲಕ ಕೊರಗಜ್ಜನ ಪ್ರಸಾದವನ್ನು ಪ್ರಧಾನಿ ಮೋದಿಗೆ ತಲುಪಿಸಲಾಗುತ್ತದೆ ಎಂದು ಸುಳ್ಯ ಬಿಜೆಪಿ ತಿಳಿಸಿದೆ.
ಮಂಗಳೂರು, ಮೇ 17: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೋರಂಬಡ್ಕದಲ್ಲಿ ನಡೆದ ಕೊರಗಜ್ಜ ದೈವದ ವಿಶೇಷ ಹರಕೆ ನೇಮೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗಿಯಾದರು. ಸುಳ್ಯ ಜಯನಗರದ ಶ್ರೀನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಶ್ರೀಗುಳಿಗ ದೈವ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ವಿಶೇಷ ಹರಕೆಯ ಶ್ರೀಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳ ತಂಬಿಲ ಸೇವೆ ಕಾರ್ಯಕ್ರಮ ನಡೆಯಿತು. ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವಂತೆ ಸಂಕಲ್ಪ ಮಾಡಿ ಬಿಜೆಪಿ ಜಯನಗರ ಬೂತ್ ಸಮಿತಿ ಹರಕೆ ಹೇಳಿತ್ತು. ಇದೀಗ ಬಿಜೆಪಿ ವತಿಯಿಂದ ಹರಕೆ ನೇಮೋತ್ಸವ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಈ ವೇಳೆ ಸಂಸದ ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿ ಹಲವು ಮಂದಿ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಸುಳ್ಯ ಬಿಜೆಪಿ ಘಟಕ ಸಂಸದ ಬ್ರಿಜೇಶ್ ಚೌಟ ಮೂಲಕ ಕೊರಗಜ್ಜ ದೈವದ ಪ್ರಸಾದವನ್ನು ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ

ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ

ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!

ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
