ಸಂತೋಷ್ ಲಾಡ್ ದೇಶಭಕ್ತ ಮರಾಠಾ ಸಮುದಾಯದಲ್ಲಿ ಹುಟ್ಟಿದರೂ ಅಫ್ಜಲ್ ಖಾನ್ ಹಾಗೆ ಮಾತಾಡುತ್ತಾರೆ: ಪ್ರತಾಪ್ ಸಿಂಹ
ಪ್ರಾಮಾಣಿಕ ಮತ್ತು ದಕ್ಷಮಂತ್ರಿಯ ಹಾಗೆ ಪೋಸು ಬಿಗಿಯುವ ಸಂತೋಷ್ ಲಾಡ್ ಅವರಿಗೆ ತಮ್ಮ ಇಲಾಖೆಯಲ್ಲ್ಲಿ ನಡೆದಿರುವ ಭಾರೀ ಪ್ರಮಾಣದ ಅವ್ಯವಹಾರದ ಬಗ್ಗೆ ಮಾಹಿತಿಯಿಲ್ಲ, ರಕ್ತಹೀನತೆ ಮತ್ತು ನಿಶ್ಶಕ್ತಿಯಿಂದ ಬಳಳುತ್ತಿರುವ ಮಹಿಳಾ ಕಾರ್ಮಿಕರ ಆರೋಗ್ಯ ಸುಧಾರಣೆಗಾಗಿ ನೀಡಲಾಗುತ್ತಿರುವ ಔಷಧಿ ಕಿಟ್ ₹ 600 ಗಳಿಗೆ ಸಿಗುತ್ತಿದೆ, ಅದರೆ ಪ್ರತಿ ಕಿಟ್ಗೆ ₹2,600 ರಂತೆ ಲೆಕ್ಕ ತೋರಿಸಲಾಗಿದೆ, ಕೇಳಿದರೆ ಮಂತ್ರಿಯಿಂದ ಉಡಾಫೆ ಉತ್ತರ ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರು, ಮೇ 17: ಸಿದ್ದರಾಮಯ್ಯ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿರುವ ಸಂತೋಷ್ ಲಾಡ್ (Santosh Lad) ಪ್ರತಿನಿತ್ಯ ಸುದ್ದಿಗೋಷ್ಠಿ ನಡಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವುದೇ ಮೇಧಾವಿತನ ಅಂದುಕೊಂಡಿದ್ದಾರೆ, ಮೋದಿಯವರು ತಮ್ಮನ್ನು ತಾವು ಸುಪ್ರೀಮ್ ಅಂದುಕೊಂಡಿದ್ದಾರೆ ಎಂದು ಲಾಡ್ ಹೇಳುತ್ತಾರೆ; ಅವರನ್ನು 140 ಕೋಟಿ ಭಾರತೀಯರು ಮೂರನೇ ಬಾರಿ ಆಯ್ಕೆ ಮಾಡಿ ಪ್ರಧಾನ ಮಂತ್ರಿಯಾಗಿ ಮಾಡಿದ್ದಾರೆ, ಅವರು ಸುಪ್ರೀಮ್ ಆಗದೆ ಮತ್ಯಾರಾಗುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು. ದೇಶಭಕ್ತ ಮರಾಠಾ ಸಮುದಾಯದಲ್ಲಿ ಹುಟ್ಟಿದ ಲಾಡ್ ದೇಶಪ್ರೇಮಿಗಳ ಹಾಗೆ ಮಾತಾಡುವ ಬದಲು ಅಫ್ಜಲ್ ಖಾನ್ ಹಾಗೆ ಮಾತಾಡುತ್ತಾರೆ, ಒಂದು ವರ್ಷವಾದರೂ ನೇಹಾ ಕೊಲೆ ಹಿರೇಮಠ ಕೊಲೆ ಪ್ರಕರಣ ಇತ್ಯರ್ಥ ಮಾಡಲಾಗದ ಇವರ ಸರ್ಕಾರಕ್ಕೆ ಅತ್ಯಾಚಾರಿಗಳನ್ನು ಎನ್ಕೌಂಟರ್ನಲ್ಲಿ ಮುಗಿಸಲು ಪ್ರಧಾನಿ ಮೋದಿಯವರು ಅನುಮತಿ ನೀಡಬೇಕಂತೆ ಮತ್ತು ಐಪಿಸಿಯಲ್ಲಿ ಬದಲಾವಣೆ ಮಾಡಬೇಕಂತೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಾ ಮೋದಿಯವರಾ ಎಂದು ಪ್ರತಾಪ್ ಮೂದಲಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಕನ್ನಡ-ಕನ್ನಡೇತರ ಹಣೆಪಟ್ಟಿ ಕಟ್ಟಲಾಗುತ್ತಿದೆ: ಪ್ರತಾಪ್ ಸಿಂಹ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ