ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿದ್ದೇ ರೋಚಕ: ಇಲ್ಲಿದೆ ಆರೋಪಿಗಳ ಪ್ಲ್ಯಾನ್ನ ಇನ್ಸೈಡ್ ಡಿಟೇಲ್ಸ್
ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಗುರುವಾರ (ಮೇ.01) ಕೊಲೆ ಮಾಡಲಾಗಿತ್ತು. ಸುಹಾಸ್ ಶೆಟ್ಟಿ ಕೊಲೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ, ಸುಹಾಸ್ ಶೆಟ್ಟಿ ಕೊಲೆ ಪಕ್ಕಾ ಪ್ಲಾನ್ ಮಾಡಲಾಗಿದೆ ಎಂಬುವುದು ತಿಳಿದುಬಂದಿದ್ದು, ಪ್ಲಾನ್ ರೂಪಿಸಿದವರು ಯಾರು? ಸುಪಾರಿ ನೀಡಿದವರು ಯಾರು? ಎಂಬುವುದು ರಿವಿಲ್ ಆಗಿದೆ.

ಮಂಗಳೂರು, ಮೇ 04: ಹಿಂದೂ ಕಾರ್ಯಕರ್ತ (Hindu Activist) ಸುಹಾಸ್ ಶೆಟ್ಟಿ (Suhas Shetty) ಕೊಲೆ ಬಳಿಕ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸ್ಕೆಚ್ ಸಿದ್ಧವಾಗಿತ್ತು. ಕೊಲೆಯಾದ ಫಾಜಿಲ್ ತಮ್ಮ ಆದಿಲ್ ಸುಹಾಸ್ ಶೆಟ್ಟಿ ಹತ್ಯೆಗೆ ಜನವರಿಯಲ್ಲೇ ಸಫ್ವಾನ್ ಟೀಂಗೆ 3 ಲಕ್ಷ ರೂ. ಹಣ ಕೊಟ್ಟಿದ್ದನು ಎಂಬುವುದು ತಿಳಿದುಬಂದಿದೆ.
ಆದಿಲ್ ಮತ್ತು ಸಫ್ವಾನ್ 2023ರಲ್ಲಿ ಪರಿಚಯವಾಗಿದ್ದಾರೆ. 2023ರ ಸಪ್ಟೆಂಬರ್ 3ರಂದು ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್, ಸಫ್ವಾನ್ಗೆ ಚಾಕುವಿನಿಂದ ಇರಿದಿದ್ದನು. ಈ ವಿಷಯ ತಿಳಿದ ಆದಿಲ್, ಸಫ್ವಾನ್ ನೋಡಲು ಆಸ್ಪತ್ರೆಗೆ ಹೋಗಿದ್ದನು. ಅದೇ ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಸಫ್ವಾನ್ ಮತ್ತು ಆದಿಲ್ ಭೇಟಿಯಾಗುತ್ತಾರೆ. ಆಸ್ಪತ್ರೆಯಲ್ಲಿ ಸಫ್ವಾನ್ ಗ್ಯಾಂಗ್ನ ಮುಝಾಮಿಲ್, ಅದಿಲ್ನ ಮೊಬೈಲ್ ನಂಬರ್ ಪಡೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಫೋನ್ನಲ್ಲೇ ಹಲವು ವಿಚಾರಗಳ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ್ದಾರೆ. ಈ ನಡುವೆ ಸಫ್ವಾನ್ ಗ್ಯಾಂಗ್ನಿಂದ ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಲಾಗಿದೆ. ಆಗ ಆದಿಲ್ ಬಳಿ ಹಣಕಾಸು ನೆರವು ಕೇಳುವ ಬಗ್ಗೆ ಸಫ್ವಾನ್ಗೆ ಮುಝಾಮಿಲ್ ಸಲಹೆ ನೀಡಿದ್ದಾನೆ. ಅದರಂತೆ ಕಳೆದ ಜನವರಿಯಲ್ಲಿ ಮುಝಾಮಿಲ್, ಮೃತ ಫಾಜಿಲ್ ಸಹೋದರ ಆದಿಲ್ನನ್ನ ಭೇಟಿಯಾಗಿದ್ದನು.
ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿರುವ ಬಗ್ಗೆ ಅದಿಲ್ಗೆ ಮುಝಾಮಿಲ್ ಮಾಹಿತಿ ನೀಡಿದ್ದಾನೆ. ಆಗ, ಆದಿಲ್ ಐದು ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿದ್ದಾನೆ. ಆದಿಲ್ ಕೆಲವೇ ದಿನಗಳಲ್ಲಿ ಮೂರು ಲಕ್ಷ ಹಣವನ್ನು ಮುಝಾಮಿಲ್ಗೆ ನೀಡಿದ್ದಾನೆ. ಹಣ ಪಡೆದು ಸುಹಾಸ್ ಹತ್ಯೆಗೆ ಸಫ್ವಾನ್ ಟೀಂ ಪ್ರಾಥಮಿಕ ಯೋಜನೆ ಸಿದ್ದಪಡಿಸಿತ್ತು.
ಇದನ್ನೂ ಓದಿ: ಸುಹಾಸ್ ಬೆನ್ನಲ್ಲೇ ಮತ್ತಿಬ್ಬರು ಹಿಂದೂ ಮುಖಂಡರಿಗೆ ಬೆದರಿಕೆ: ಹತ್ಯೆಗೆ ಸ್ಥಳ, ದಿನಾಂಕ ಫಿಕ್ಸ್
ಮಾರ್ಚ್ನಲ್ಲೇ ಹತ್ಯೆಗೆ ಪ್ಲಾನ್
ಎಲ್ಲ ಪ್ಲಾನ್ ರೂಪಿಸಿ ಮಾರ್ಚ್ 31 ರೊಳಗೆ ಹತ್ಯೆ ಮಾಡಲು ಗ್ಯಾಂಗ್ ಯೋಜನೆ ರೂಪಿಸಿತು. ಈ ನಡುವೆ ಸಫ್ವಾನ್ ಟೀಂ ಮತ್ತೆ ಅದಿಲ್ ಬಳಿ ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿತು. ಆದರೆ ಸದ್ಯ ಹಣ ಇಲ್ಲ, ಕೆಲಸ ಆದ ಮೇಲೆ ಕೊಡುವುದಾಗಿ ಆದಿಲ್ ಹೇಳಿದ್ದಾನೆ. ಹೀಗಾಗಿ, ಸಫ್ವಾನ್ ಟೀಂ ಏಪ್ರಿಲ್ 24ರಂದೇ ಎರಡು ವಾಹನ ಬಾಡಿಗೆಗೆ ಪಡೆದಿತ್ತು. ಮೀನಿನ ಪಿಕಪ್ ವಾಹನ ಮನೆಯಲ್ಲೇ ಇಟ್ಟು ಸ್ವಿಫ್ಟ್ ಕಾರಿನಲ್ಲಿ ಸುತ್ತಾಡಿಕೊಂಡು, ಸುಹಾಸ್ ಶೆಟ್ಟಿಯ ಚಲನವಲನವನ್ನು ಗಮನಿಸುತ್ತಿತ್ತು. ಕೊನೆಗೆ ಪಕ್ಕಾ ಪ್ಲಾನ್ ರೂಪಿಸಿ ಗುರುವಾರ (ಮೇ.1) ರಂದು ಸುಹಾಸ್ ಶೆಟ್ಟಿ ಮೇಲೆ ತಲ್ವಾರ್ನಿಂದ ಹಲ್ಲೆ ಮಾಡಿ, ಸಫ್ವಾನ್ ಗ್ಯಾಂಗ್ ಕೊಲೆ ಮಾಡಿತು.