AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಲಿಟರಿ ಚೆಕ್​ಪಾಯಿಂಟ್​ನಲ್ಲಿ ಮಂಡಿಯೂರಿ ಯುವತಿಗೆ ಪ್ರಪೋಸ್​ ಮಾಡಿದ ಉಕ್ರೇನ್​ ಸೈನಿಕ: ವಿಡಿಯೋ ವೈರಲ್​

ಉಕ್ರೇನ್​ ಸೈನಿಕನೊಬ್ಬ ಮಿಲಿಟರಿ ಚೆಕ್​ ಪಾಯಿಂಟ್​ನಲ್ಲಿ ಮಂಡಿಯೂರಿ ಯುವತಿಗೆ ಪ್ರಪೋಸ್​ ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಿಲಿಟರಿ ಚೆಕ್​ಪಾಯಿಂಟ್​ನಲ್ಲಿ ಮಂಡಿಯೂರಿ ಯುವತಿಗೆ ಪ್ರಪೋಸ್​ ಮಾಡಿದ ಉಕ್ರೇನ್​ ಸೈನಿಕ: ವಿಡಿಯೋ ವೈರಲ್​
ಪ್ರಪೋಸ್​ ಮಾಡಿದ ಸೈನಿಕ
TV9 Web
| Edited By: |

Updated on:Mar 09, 2022 | 9:41 AM

Share

ರಷ್ಯಾ ಉಕ್ರೇನ್​ ರಣಭೀಕರ ಯುದ್ಧ (Russia Ukraine War) 14ನೇ ದಿನಕ್ಕೆ ಕಾಲಿಟ್ಟಿದೆ. ಜಗತ್ತಿನ ವಿವಿಧ ದೇಶಗಳು ರಷ್ಯಾವನ್ನು ವಿರೋಧಿಸಿದರೂ ಉಕ್ರೇನ್​ ಮೇಲಿನ ಯುದ್ಧವನ್ನು ಮುಂದುವರೆಸಿದೆ. ಈ ನಡುವೆ ಉಕ್ರೇನ್​ ನೆಲದ ಸಾಕಷ್ಟು  ವಿಡಿಯೋ ಫೋಟೋಗಳು ವೈರಲ್​ ಆಗಿವೆ. ಒಂದಷ್ಟು ಮನಕಲಕುವ ದೃಶ್ಯಗಳು ಉಕ್ರೇನ್​ನಲ್ಲಿ ಕಂಡುಬರುತ್ತಿವೆ. ಈ ನಡುವೆ ಉಕ್ರೇನ್​ ಸೈನಿಕನೊಬ್ಬ(Ukraine Soldier) ಮಿಲಿಟರಿ ಚೆಕ್​ ಪಾಯಿಂಟ್​ನಲ್ಲಿ ಮಂಡಿಯೂರಿ ಗೆಳತಿಗೆ ಪ್ರಪೋಸ್ ​(Propose) ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜನರ ಸಾವು, ನೋವು, ಭಯದಲ್ಲಿ ಬದುಕುತ್ತಿರುವುದರ ನಡುವೆಯೂ ಈ ರೀತಿ ಪ್ರೇಮ ನಿವೇದನೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಉಕ್ರೇನ್​ ನಾಗರಿಕರನ್ನು ಮಿಲಿಟರಿ ಚೆಕ್​ ಪಾಯಿಂಟ್​ನಲ್ಲಿ ತಪಾಸಣೆ ಮಾಡಲು ನಿಲ್ಲಿಸಲಾಗಿತ್ತು. ಈ ವೇಳೆ ಸೈನಿಕರ ಗುಂಪು ಅವರನ್ನು ತಪಾಸಣೆ ಮಾಡುತ್ತಿತ್ತು. ಗಾಡಿಯೆಡೆಗೆ ಮುಖ ಮಾಡಿ ನಿಂತಿದ್ದ ಯುವತಿಯನ್ನು ತಿರುಗುಸಿ ಸೈನಿಕನೊಬ್ಬ ಮಂಡಿಯೂರಿ ಪ್ರಪೋಸ್​​ ಮಾಡಿದ್ದಾನೆ. ಇದನ್ನು ಕಂಡು ಆಕೆ ಅಚ್ಚರಿಗೊಂಡಿದ್ದಾಳೆ.  ಪುಟ್ಟ ಹೂವನ್ನು ನೀಡಿ ಸೈನಿಕ ಪ್ರೇಮ ನಿವೇದನೆ ಮಾಡಿದ್ದಾನೆ.

ಅಚ್ಚರಿಯಿಂದ ಖುಷಿಗೊಂಡ ಯುವತಿ ಸೈನಿಕನನ್ನು ಹಗ್​ ಮಾಡಿದ್ದಾಳೆ ಇದರ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. 4 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಭೀಕರ ದೃಶ್ಯಗಳ ನಡುವೆ ಹೃದಯಸ್ಪರ್ಶಿ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

ವ್ಲಾಡಿಮಿರ್ ಪುಟಿನ್ ವಿರುದ್ಧ ವಿನೂತನ ಪ್ರತಿಭಟನೆ ಮಾಡುತ್ತಿರುವ ಬ್ರಿಟನ್ ಪಬ್; ಹೇಗೆ ಅಂತೀರಾ? ಇಲ್ಲಿದೆ ನೋಡಿ

Published On - 9:38 am, Wed, 9 March 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ