AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೆಹಬೂಬಾ..’ ಹಾಡಿಗೆ ಅತೀ ಕೆಟ್ಟದಾಗಿ ಡಾನ್ಸ್​ ಮಾಡಿದ ರಾನು ಮಂಡಲ್​; ನೆಟ್ಟಿಗರಿಂದ ಛೀಮಾರಿ

ತೌಹಿಂದಾ ಎಂಬುವವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾನು ‘ಮೆಹಬೂಬಾ..’ ಹಾಡನ್ನು ಹಾಡುತ್ತಾ ಡಾನ್ಸ್​ ಮಾಡಿದ್ದಾರೆ. 

‘ಮೆಹಬೂಬಾ..’ ಹಾಡಿಗೆ ಅತೀ ಕೆಟ್ಟದಾಗಿ ಡಾನ್ಸ್​ ಮಾಡಿದ ರಾನು ಮಂಡಲ್​; ನೆಟ್ಟಿಗರಿಂದ ಛೀಮಾರಿ
ರಾನು ಮಂಡಲ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Mar 09, 2022 | 6:29 AM

Share

ರಾತ್ರಿ ಬೆಳಗಾಗುವದರೊಳಗೆ ಸೋಶಿಯಲ್​ ಮೀಡಿಯಾದಲ್ಲಿ ಸ್ಟಾರ್​ ಆದವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಈ ಖ್ಯಾತಿ ಹೆಚ್ಚು ದಿನ ಇರುವಂತಹದ್ದಲ್ಲ. ಫೇಮಸ್​ ಆದಾಗ ಬಾಯ್ತುಂಬ ಹೊಗಳಿಸಿಕೊಳ್ಳುವವರು, ಕೆಟ್ಟ ಕೆಲಸ ಮಾಡಿ ಬಾಯಿಗೆ ಬಂದಂತೆ ಬಯ್ಯಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿರುವ ರಾನು ಮಂಡಲ್​ ಕೂಡ ಇದೇ ಸಾಲಿಗೆ ಸೇರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ರಾನು ಮಂಡಲ್ (Ranu Mandal)​ ಹೊಸ ಸಂಚಲನ ಸೃಷ್ಟಿ ಮಾಡಿದ್ದರು. ಅವರ ಹಾಡನ್ನು ಕೇಳಿ ಗಾಯಕ ಹಿಮೇಶ್​ ರೇಷಮಿಯಾ​ (Himesh Reshammiya) ಕೂಡ ಫಿದಾ ಆಗಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಅವರು ಮೂಲೆಗುಂಪಾದರು. ಅವರ ಬಗ್ಗೆ ನಾನಾ ಸುದ್ದಿಗಳು ಹರಿದಾಡೋಕೆ ಆರಂಭವಾದವು. ಈಗ ರಾನು ಮಂಡಲ್​ ಮಾಡಿದ ಡಾನ್ಸ್​ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ರಾನು ಮಂಡಲ್​ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರ ‘ಏಕ್​ ಪ್ಯಾರ್​ ಕಾ ನಗ್ಮಾ ಹೈ..’ ಹಾಡನ್ನು ರೈಲು ನಿಲ್ದಾಣದಲ್ಲಿ ಹಾಡಿದ್ದರು. ಇದನ್ನು ಕೆಲವರು ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದು ಕೆಲವೇ ದಿನಗಳಲ್ಲಿ ಸಾಕಷ್ಟು ವೈರಲ್​ ಆಗಿತ್ತು. ಅನೇಕರು ರಾನು ಗಾಯನವನ್ನು ಕೊಂಡಾಡಿದ್ದರು. ರಾನು ರಾತ್ರಿ ಬೆಳಗಾಗುವುದರೊಳಗೆ ಸೋಶಿಯಲ್​ ಮೀಡಿಯಾ ಸ್ಟಾರ್​ ಆದರು. ಹಿಮೇಶ್​ ಅವರು ‘ತೇರಿ ಮೇರಿ ಕಹಾನಿ..’ ಹಾಡು ಹೇಳೋಕೆ ರಾನುಗೆ ಅವಕಾಶ ನೀಡಿದ್ದರು. ಇದಾದ ನಂತರದಲ್ಲಿ ಸಾಕಷ್ಟು ಶೋಗಳಿಗೆ ಅತಿಥಿ​ ಆಗುವ ಅವಕಾಶ ಅವರಿಗೆ ಸಿಕ್ಕಿತ್ತು.  ರಾನು ಈಗ ಡಾನ್ಸ್ ಕಲಿಯುತ್ತಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ತೌಹಿಂದಾ ಎಂಬುವವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾನು ‘ಮೆಹಬೂಬಾ..’ ಹಾಡನ್ನು ಹಾಡುತ್ತಾ ಡಾನ್ಸ್​ ಮಾಡಿದ್ದಾರೆ.  ಈ ವಿಡಿಯೋ ಈಗ ವೈರಲ್​ ಆಗಿದ್ದು, ಸಾಕಷ್ಟು ನೆಗೆಟಿವ್​ ಕಮೆಂಟ್​ಗಳು ಬರುತ್ತಿವೆ.

View this post on Instagram

A post shared by Touhida Onay (@tauhida_onay)

‘ನಿಮ್ಮ ಹಾಡನ್ನು ಯಾರೂ ಕೇಳಲು ಇಷ್ಟಪಡುವುದಿಲ್ಲ, ಡ್ಯಾನ್ಸ್ಅಂತೂ ನೋಡೋಕೆ ಸಾಧ್ಯವಿಲ್ಲ​’ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.  ‘ದೇವರೇ ದಯವಿಟ್ಟು ನನ್ನ ಪ್ರಾಣವನ್ನು ತೆಗೆದುಕೋ’ ಎಂದು ಮತ್ತೋರ್ವ ಬರೆದಿದ್ದಾನೆ.

ರಾನು ಮಂಡಲ್​ ಬಯೋಪಿಕ್​ ಸಿದ್ಧಗೊಳ್ಳಲಿದೆ ಎನ್ನುವ ಬಗ್ಗೆ ಇತ್ತೀಚೆಗೆ ಸುದ್ದಿ ಹರಿದಾಡಿತ್ತು. ರಿಶಿಕೇಶ್​ ಮಂಡಲ್​ ಅವರು ಈ ಬಯೋಪಿಕ್​ ನಿರ್ದೇಶನ ಮಾಡುತ್ತಿದ್ದಾರೆ. ಇಶಿಕಾ ಡೇ ಅವರು ರಾನು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮಿಸ್​ ರಾನು ಮರಿಯಾ’ ಎಂದು ಸಿನಿಮಾಗೆ ಟೈಟಲ್​ ಫಿಕ್ಸ್​ ಮಾಡಲಾಗಿದೆ.

ಇದನ್ನೂ ಓದಿ: ಬದಲಾದ ‘ಕಚ್ಚಾ ಬದಾಮ್​’ ಸಿಂಗರ್ ಬದುಕು; ಕಾಡುತ್ತಿದೆ ಅವಮಾನ ಎದುರಿಸುವ ಆತಂಕ

Ranu Mondal: ರಾನು ಮಂಡಲ್​ ಕಂಠದಲ್ಲಿ ‘ಮನಿಕೆ ಮಗೆ ಹಿತೆ’; ಕಿರಿಕಿರಿ ತಾಳಲಾಗದೇ ಕಮೆಂಟ್​ ಮಾಡುತ್ತಿರುವ ನೆಟ್ಟಿಗರು

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!