ಬದಲಾದ ‘ಕಚ್ಚಾ ಬದಾಮ್’ ಸಿಂಗರ್ ಬದುಕು; ಕಾಡುತ್ತಿದೆ ಅವಮಾನ ಎದುರಿಸುವ ಆತಂಕ
ಪಶ್ಚಿಮ ಬಂಗಾಳದ ಹಳ್ಳಿಗಳಲ್ಲಿ ಹಾಡು ಹೇಳುತ್ತ ಕಡಲೆಕಾಯಿ (ಶೇಂಗಾ) ಮಾರುತ್ತಾ ಜೀವನ ಸಾಗಿಸುತ್ತಿದ್ದವರು ಭುಬನ್. ಈ ಹಾಡನ್ನು ಊರಿನವರೇ ಕೆಲವರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ರಾತ್ರಿ ಬೆಳಗಾಗುವುದರೊಳಗೆ ಯಾರು ಬೇಕಾದರೂ ಫೇಮಸ್ ಆಗಿ ಬಿಡಬಹುದು. ಬೀದಿ ಬದಿಯಲ್ಲಿ ನಿಂತು ಸಖತ್ ಆಗಿ ಹಾಡು ಹೇಳುವ ಭಿಕ್ಷುಕ ಮರುದಿನ ಸೆಲೆಬ್ರಿಟಿ ಆದ ಉದಾಹರಣೆ ಸಾಕಷ್ಟಿದೆ. ರೈಲ್ವೆ ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ರಾನು ಮಂಡಲ್ (Ranu Mandal) ರಾತ್ರೋರಾತ್ರಿ ಸೆಲೆಬ್ರಿಟಿ ಆದರು. ಅದೇ ರೀತಿ ‘ಕಚ್ಚಾ ಬಾದಾಮ್..’ (Kacha Badam) ಹಾಡು ಹೇಳಿದ್ದ ಭುಬನ್ ಬಡ್ಯಾಕರ್ (Bhuban Badyakar) ಈಗ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ. ಪಶ್ಚಿಮ ಬಂಗಾಳದ ಭುಬನ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಅವರಿಗೆ ಈಗ ಆತಂಕವೊಂದು ಕಾಡುತ್ತಿದೆ.
ಪಶ್ಚಿಮ ಬಂಗಾಳದ ಹಳ್ಳಿಗಳಲ್ಲಿ ಹಾಡು ಹೇಳುತ್ತ ಕಡಲೆಕಾಯಿ (ಶೇಂಗಾ) ಮಾರುತ್ತಾ ಜೀವನ ಸಾಗಿಸುತ್ತಿದ್ದವರು ಭುಬನ್. ಈ ಹಾಡನ್ನು ಊರಿನವರೇ ಕೆಲವರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ, ಭುಬನ್ ಹಾಡಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಹೀಗಾಗಿ, ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ಸೌಂಡ್ ಮಾಡುತ್ತಿದೆ. ಭುಬನ್ ಕರೆಸಿ ‘ಕಚ್ಚಾ ಬಾದಾಮ್..’ ಹಾಡನ್ನು ರೆಕಾರ್ಡ್ ಮಾಡಿ, ಸಾಂಗ್ ಒಂದನ್ನು ಬಿಡಲಾಗಿದೆ. ಹೀಗಾಗಿ, ಅವರನ್ನು ನೋಡುವ ದೃಷ್ಟಿ ಈಗ ಬದಲಾಗಿದೆ. ಈಗ ಅವರು ಮತ್ತೆ ಕಡಲೆಕಾಯಿ ಮಾರಾಟ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
‘ನಾನು ಕಲಾವಿದನಾಗಿ ಉಳಿಯಲು ಬಯಸುತ್ತೇನೆ. ನಾನೀಗ ಸೆಲೆಬ್ರಿಟಿಯಾಗಿದ್ದೇನೆ. ನಾನೊಬ್ಬ ಸೆಲೆಬ್ರಿಟಿಯಾಗಿ ಕಡಲೆಕಾಯಿ ಮಾರಲು ಹೊರಟರೆ ಅವಮಾನ ಎದುರಿಸಬೇಕಾಗುತ್ತದೆ’ ಎಂದು ಆತಂಕ ಹೊರಹಾಕಿದ್ದಾರೆ ಬುಬನ್. ಅವರು ಹೀಗೆ ಹೇಳುವ ಮೂಲಕ ಇನ್ನುಮುಂದೆ ಕಡಲೆಕಾಯಿ ಮಾರಾಟ ಮಾಡುವುದಿಲ್ಲ ಎಂಬುದನ್ನು ಹೇಳಿದ್ದಾರೆ ಭುಬನ್.
“Kacha Badam” live performance by the creator Bhuvan Badyokar himself at the Someplace Else, Park Hotel, Kolkata! pic.twitter.com/jNW33nePWM
— Shibasish Dasgupta (@dr_shibasish) February 19, 2022
#Trending:Kacha Badam Singer Receives Rs 3 lakh From Music Company For His Viral Song. pic.twitter.com/SHBKWgdrSy
— Falak Bhat (@FalakBhat2000) February 19, 2022
ಹಳೆಯ ಚೈನ್, ಮೊಬೈಲ್ಗಳನ್ನು ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಕಡಲೆಕಾಯಿ ನೀಡುತ್ತಿದ್ದರು ಭುಬನ್. ಈ ಹಾಡಿನ ಸಾಹಿತ್ಯ ಕೂಡ ಅದೇ ಅರ್ಥವನ್ನು ನೀಡುತ್ತದೆ. ಅವರಿಗೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದಕ್ಕೆ ಖುಷಿ ಇದೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಪೊಲೀಸರು ಭುಬನ್ ಅವರನ್ನು ಸನ್ಮಾನಿಸಿದ್ದಾರೆ.
ಇದನ್ನೂ ಓದಿ: ಕಚ್ಚಾ ಬಾದಾಮ್ ಹಾಡಿದವರು ಇವರೇ ನೋಡಿ; ಭುವನ್ ಬದ್ಯಕರ್
Viral Video: ಕಚ್ಚಾ ಬಾದಾಮ್ ಹಾಡಿಗೆ ಬೀದಿಯಲ್ಲಿ ನಿಂತು ಬಿಂದಾಸ್ ಸ್ಟೆಪ್ ಹಾಕಿದ ಫ್ರೆಂಚ್ ಡ್ಯಾನ್ಸರ್ಸ್
Published On - 1:41 pm, Tue, 22 February 22