ಶ್ರೀವಲ್ಲಿ ಹಾಡಿಗೆ ಜ್ವಾಲಾಗುಟ್ಟ ತಾಯಿಯ ಮಸ್ತ್​ ಸ್ಟೆಪ್​: ವಿಡಿಯೋ ಹಂಚಿಕೊಂಡ ಬ್ಯಾಡ್ಮಿಂಟನ್​ ತಾರೆ

ಬ್ಯಾಡ್ಮಿಂಟನ್​ ತಾರೆ ಜ್ವಾಲಾಗುಟ್ಟಾ ಅವರ ತಾಯಿ ಶ್ರೀವಲ್ಲಿ ಹಾಡಿಗೆ ಸಖತ್​ ಹೆಜ್ಜೆ ಹಾಕಿದ್ದಾರೆ.  ಜ್ವಾಲಾ ಗುಟ್ಟಾ ತಾಯಿ ಯೆಲನಾ ಗುಟ್ಟಾ ಶ್ರೀವಲ್ಲಿ ಹಾಡಿನ ಸಿಗ್ನೇಚರ್​ ಸ್ಟೆಪ್​ ಹಾಕಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ಶ್ರೀವಲ್ಲಿ ಹಾಡಿಗೆ ಜ್ವಾಲಾಗುಟ್ಟ ತಾಯಿಯ ಮಸ್ತ್​ ಸ್ಟೆಪ್​: ವಿಡಿಯೋ ಹಂಚಿಕೊಂಡ ಬ್ಯಾಡ್ಮಿಂಟನ್​ ತಾರೆ
ಜ್ವಾಲಾಗುಟ್ಟ ತಾಯಿ
TV9kannada Web Team

| Edited By: Pavitra Bhat Jigalemane

Mar 09, 2022 | 1:02 PM

ಕಳೆದ ಎರಡು ತಿಂಗಳಿನಿಂದ ಪುಷ್ಪ (Pushpa) ಚಿತ್ರದ ಶ್ರೀವಲ್ಲಿ(Srivalli song) ಹಾಡು ಹೊಸ ಟ್ರೆಂಡ್​ಅನ್ನೇ ಸೃಷ್ಟಿ ಮಾಡಿದೆ. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳ್ಳೂ ಸುದ್ದಿ ಮಾಡಿದ್ದು ತಿಳಿದಿದೆ. ಇದೀಗ ಬ್ಯಾಡ್ಮಿಂಟನ್​ ತಾರೆ ಜ್ವಾಲಾಗುಟ್ಟಾ (Jwala Gutta)  ಅವರ ತಾಯಿ ಶ್ರೀವಲ್ಲಿ ಹಾಡಿಗೆ ಸಖತ್​ ಹೆಜ್ಜೆ ಹಾಕಿದ್ದಾರೆ.  ಜ್ವಾಲಾ ಗುಟ್ಟಾ ತಾಯಿ ಯೆಲನಾ ಗುಟ್ಟಾ ಶ್ರೀವಲ್ಲಿ ಹಾಡಿನ ಸಿಗ್ನೇಚರ್​ ಸ್ಟೆಪ್​ ಹಾಕಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ಜ್ವಾಲಾ ಗುಟ್ಟ ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ನನ್ನ ಅಮ್ಮನಿಗೂ ಪುಷ್ಪ ಮ್ಯಾಡ್​ನೆಸ್​ ಶುರುವಾಗಿದೆ ಎಂದು ಕ್ಯಾಪ್ಷನ್​ ನೀಡಿದ್ದಾರೆ.  ವಿಡಿಯೋ ನೋಡಿ ಅಲ್ಲು ಅರ್ಜುನ್​ ಕೂಡ ಕಾಮೆಂಟ್​ ಮಾಡಿದ್ದಾರೆ. ಯೆಲನಾ ಗುಟ್ಟ ಸ್ಟೆಪ್​ ನೋಡಿ ನಗುವ ಎಮೋಜಿಯೊಂದಿಗೆ ಕಾಮೆಂಟ್​ ಮಾಡಿದ್ದಾರೆ.

ಟ್ವಿಟರ್​ನಲ್ಲಿ ವೈರಲ್​ ಆದ ವಿಡಿಯೋ  11 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು,ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.  ಜ್ವಾಲಾಗುಟ್ಟ ಭಾರತೀಯ ಬ್ಯಾಡ್ಮಿಂಟನ್​ ಆಟಗಾರ್ತಿ. ಇವರು ನಟ ವಿಷ್ಣು ವಿಶಾಲ್​ ಅವರನ್ನು ವಿವಾಹವಾಗಿದ್ದಾರೆ. 199 ರಿಂದ ಭಾರತವನ್ನು ಬ್ಯಾಡ್ಮಿಂಟನ್​ನಲ್ಲಿ ಪ್ರತಿನಿಧಿಸುತ್ತಿದ್ದರು.

ಜ್ವಾಲಾಗುಟ್ಟಾ  ಮಹಿಳಾ ದಿನಾಚರಣೆಯ ದಿನ ಮಾತನಾಡಿ,  ನಾನಿರುವ ರೂಪವನ್ನು ನೋಡಿ ಚೀನಾ ಮೂಲದವರು, ಭಾರತೀಯರೆನ್ನಲು ಪುರಾವೆಗಳನ್ನು ತೋರಿಸಿ ಎನ್ನುವ ಹಲವು ಟೀಕೆಯ ಮಾತುಗಳು ಈ ಹಿಂದೆ ಕೇಳಿಬಂದಿವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಲತಾ ಮಂಗೇಶ್ಕರ್​ ಹಾಡನ್ನು ಹಾಡಿ ನೆಟ್ಟಿಗರ ಮನಗೆದ್ದ ತಂದೆ ಮಗಳ ಜೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada