ಈ ಯುವತಿಗೆ ಹಣ್ಣು,ತರಕಾರಿಗಳ ಫೋಬಿಯಾ: 22 ವರ್ಷಗಳಿಂದ ಚಿಕನ್ ನೆಗೆಟ್ ಮಾತ್ರ ಈಕೆಯ ಆಹಾರ
ಇಲ್ಲೊಬ್ಬಳು ಯುವತಿಗೆ ಹಣ್ಣು ಮತ್ತು ತರಕಾರಿಯ ಫೋಬಿಯಾವಿದೆಯಂತೆ. 25 ವರ್ಷದ ಈ ಯುವತಿ ಕಳೆದ 22 ವರ್ಷಗಳಿಂದ ಹಣ್ಣು ಮತ್ತು ತರಕಾರಿ ಸೇವಿಸದೆ ಕೇವಲ ಚಿಕೆನ್ ನೆಗೆಟ್ ಸೇವಿಸಿ ಬದುಕುತ್ತಿದ್ದಾಳೆ.
ಕೆಲವರಿಗೆ ನೀರು, ಬೆಂಕಿ ಕಂಡರೆ ಭಯ ಇರುತ್ತದೆ. ಇದನ್ನು ಫೋಬಿಯಾ ಎನ್ನುತ್ತಾರೆ. ಆದರೆ ಇಲ್ಲೊಬ್ಬಳು ಯುವತಿಗೆ ಹಣ್ಣು ಮತ್ತು ತರಕಾರಿಯ ಫೋಬಿಯಾವಿದೆಯಂತೆ. ಹೌದು, 25 ವರ್ಷದ ಈ ಯುವತಿ ಕಳೆದ 22 ವರ್ಷಗಳಿಂದ ಹಣ್ಣು ಮತ್ತು ತರಕಾರಿ ಸೇವಿಸದೆ ಕೇವಲ ಚಿಕನ್ ನೆಗೆಟ್ ಸೇವಿಸಿ ಬದುಕುತ್ತಿದ್ದಾಳೆ. ಸದ್ಯ ಈ ವಿಚಾರ ಜಗತ್ತಿನಾದ್ಯಂತ ವೈರಲ್ ಆಗಿದೆ.
ಸಮ್ಮರ್ ಮನ್ರೋ ಎನ್ನುವ ಯುವತಿ ಯುಕೆಯ ಕ್ಯಾಂಬ್ರಿಡ್ಜ್ ಮೂಲದವಳು. ಈಕೆ ಆಹಾರವನ್ನು ನಿರ್ಬಂಧಿಸುವ ಕಾಯಿಲೆಯನ್ನು ಹೊಂದಿದ್ದಳು ಇದನ್ನು avoidant restrictive food intake disorder ಎಂದು ಕರೆಯುತ್ತಾರೆ. ಸಮ್ಮರ್ ಮೂರು ವರ್ಷದವಳಿದ್ದಾಗ ಹಿಸುಕಿದ ಆಲೂಗಡ್ಡೆ ತಿನ್ನಲು ಒತ್ತಾಯಿಸಿದ್ದಕ್ಕಾಗಿ ಆಹಾರ ಫೋಬಿಯಾಗೆ ತುತ್ತಾದಳು ಎನ್ನಲಾಗಿದ್ದು, ಈಗ, ಅವಳು ಚಿಕನ್ಗಳನ್ನು ಮಾತ್ರ ತಿಂದು ಬದುಕುತ್ತಿದ್ದಾಳೆ. ಹಣ್ಣುಗಳು ಮತ್ತು ತರಕಾರಿಗಳನ್ನು ಹತ್ತಿರದಿಂದ ನೋಡಿದರೂ ಆಕೆಅನಾರೋಗ್ಯಕ್ಕೆ ಒಳಗಾಗುತ್ತಾಳಂತೆ.
ಈ ಕುರಿತು ಸಮ್ಮರ್ ಹೇಳಿಕೊಂಡಿದ್ದು, ನಾನು ತರಕಾರಿಗಳನ್ನು ಯಾವಾಗ ಸೇವಿದ್ದೇನೆ ಎನ್ನುವುದೇ ನೆನಪಿಲ್ಲ. ನೆಗೆಟ್ಗಳನ್ನೇ ಸೇವಿಸಿ ಬದುಕುತ್ತಿದ್ದೇನೆ. ಇದರಿಂದ ನನ್ನ ದೇಹದ ತೂಕದಲ್ಲಿ ವ್ಯತ್ಯಾಸವಾಗುತ್ತದೆ, ಅದನ್ನು ನಿಭಾಯಿಸುತ್ತೇನೆ. ಬೇರೆಯವರು ಊಟದ ವೇಳೆ ಸಲಾಡ್ಗಳನ್ನು ತಿನ್ನುತ್ತಿರುವಾಗ. ನಾನು ಅದನ್ನು ತಿನ್ನಲು ಪ್ರಯತ್ನಿಸಿಲ್ಲ. ಏಕೆಂದರೆ ಆರೋಗ್ಯ ಹದಗೆಡಬಹುದು ಎನ್ನುವ ಭಯ ಕಾಡುತ್ತದೆ. ಚಿಕೆನ್ ನೆಗೆಟ್ ಕೂಡ ಗರಿಗರಿಯಾಗಿದ್ದರೆ ಮಾತ್ರ ತಿನ್ನುತ್ತೇನೆ . ಈ ಫೋಬಿಯಾಕ್ಕೆ ನನ್ನ ಸಂಗಾತಿ ಕೂಡ ಸಪೋರ್ಟಿವ್ ಆಗಿ ಇದ್ದಾರೆ. ಹಣ್ಣು, ತರಕಾರಿ ತಿನ್ನಲು ಒತ್ತಾಯಿಸುವುದಿಲ್ಲ ಎಂದು ಡೈಲಿ ಮೇಲ್ ಗೆ ಹೇಳಿಕೆ ನೀಡಿದ್ದಾಳೆ.
ಕಳೆದ ವರ್ಷ, ಚಿಕನ್ ನೆಗೆಟ್ನಲ್ಲಿ ರಕ್ತನಾಳ ಕಾಣಿಸಿಕೊಂಡ ಕಾರಣ, ಅವಳು ಮೂರು ತಿಂಗಳ ಕಾಲ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿದಳು. ಆ ಸಮಯದಲ್ಲಿ ಅವಳು ಕೇವಲ ಕ್ರಿಪ್ಸ್ ಮಾತ್ರ ಸೇವಿಸುತ್ತಿದ್ದಳು ಎಂದು ಟೈಮ್ಸ್ ನೌನ ವರದಿ ತಿಳಿಸಿದೆ.
ಇದನ್ನೂ ಓದಿ: