Basavaraj Bommai: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಆಯೋಗ ರಚನೆ: ಸಿಎಂ ಬೊಮ್ಮಾಯಿ ಘೋಷಣೆ

7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಗೆ ಅಧಿಕಾರಿಗಳ ವೇತನ ಸಮಿತಿ ಮಾಡುವಂತೆ ಸಿಎಂಗೆ ಮಾಜಿ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದರು.

Basavaraj Bommai: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಆಯೋಗ ರಚನೆ: ಸಿಎಂ ಬೊಮ್ಮಾಯಿ ಘೋಷಣೆ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Mar 16, 2022 | 7:46 PM

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರದಿಂದ ಆಯೋಗ ರಚನೆ ಬಗ್ಗೆ ಸಿಎಂ ಬೊಮ್ಮಾಯಿ‌ ಘೋಷಣೆ ಮಾಡಿದ್ದಾರೆ. 7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಗೆ ಅಧಿಕಾರಿಗಳ ವೇತನ ಸಮಿತಿ ಮಾಡುವಂತೆ ಸಿಎಂಗೆ ಮಾಜಿ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದರು.

ಸಿಎಂಗೆ ಹೂಗುಚ್ಛ ನೀಡಿ ಧನ್ಯವಾದ ತಿಳಿಸಿದ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಂದ ಸಿಎಂ ಬೊಮ್ಮಾಯಿಗೆ ಹೂಗುಚ್ಛ ನೀಡಿ ಧನ್ಯವಾದ ತಿಳಿಸಲಾಗಿದೆ. ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಹೂಗುಚ್ಛ ನೀಡಿ ಧನ್ಯವಾದ ಅರ್ಪಿಸಿದ್ದಾರೆ. ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಮಾದರಿಯ ವೇತನ ನೀಡುವ ಭರವಸೆ ನೀಡಿದ ಹಿನ್ನೆಲೆ ವಿಧಾನ ಸೌಧದಲ್ಲಿ ಸಿಎಂರನ್ನ ಭೇಟಿ ಮಾಡಿ ಹೂಗುಚ್ಛ ನೀಡಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಸಿಎಂ ಬೊಮ್ಮಾಯಿ ಉತ್ತರ-ರಾಜ್ಯದಲ್ಲಿ ಪ್ರಥಮ ಬಾರಿಗೆ ಹಸಿರು ಬಜೆಟ್ ಮಾಡಿದ್ದೇವೆ, ಪ್ರತಿ ವರ್ಷ ಎಕಲಾಜಿಕಲ್ ಡೆಫಿಸಿಟ್ ಏನಾಗುತ್ತೋ ಅದಕ್ಕೆ ಎಕಲಾಜಿಕಲ್ ಬಜೆಟ್ ಮೀಸಲಿಡಬೇಕು, ಈಗ ಪರಿಸರ ನಾಶವಾದರೆ ಮುಂದೆ ಸರಿಪಡಿಸಲು ಆಗಲ್ಲ. ಹಾಗಾಗಿ ಬಜೆಟ್‌ನಲ್ಲಿ ಹೊಸ ರೂಪ ನೀಡಿದ್ದೇವೆ, ನಮ್ಮದು ಸೂಕ್ಷ್ಮ ಬಜೆಟ್ ಆಗಿದೆ ಎಂದಿದ್ದಾರೆ.

ಉತ್ತರ-ಹಳ್ಳಿಗಳಿಗೆ ಡಿಜಿಟಲ್ ತಲುಪಿಸಲು ಕೆಲಸ ನಡೆಯುತ್ತಿದೆ. ಅನುಭವಕ್ಕೆ, ಗಮನಕ್ಕೆ ಬಾರದ ವಲಯಕ್ಕೆ ಪರಿಹಾರ ನೀಡದಿರುವ ಜನತೆಗೂ ಪರಿಹಾರ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ, ಌಸಿಡ್ ದಾಳಿಗೊಳಗಾದ ಮಹಿಳೆಯರ ಮಾಸಾಶನ 3 ಸಾವಿರದಿಂದ 10 ಸಾವಿರಕ್ಕೆ ಏರಿಸಿದ್ದೇವೆ. ಉತ್ತರ-ಗ್ರಾಮ ಸಹಾಯಕರಿಗೆ ಒಂದು ಸಾವಿರ ಹೆಚ್ಚು ಮಾಡಿದ್ದೇವೆ, ಪೌರ ಕಾರ್ಮಿಕರಿಗೆ 2 ಸಾವಿರ ಹಾರ್ಡ್‌ಶಿಪ್ ನೀಡುತ್ತಿದ್ದೇವೆ. ಹಿರಿಯ ನಾಗರಿಕರಿಗೆ ಪ್ರಥಮ ಬಾರಿಗೆ ಎಲ್ಲರಿಗೂ ಕಣ್ಣಿನ ತಪಾಸಣೆ, ಉಚಿತ ಸರ್ಜರಿ, ಎಲ್ಲರಿಗೂ ಕನ್ನಡಕ ಕೊಡುವ ಕೆಲಸ ಮಾಡಲಾಗುತ್ತಿದೆ; ಇದು ಪಕ್ಕದ ರಾಜ್ಯ ಆಂಧ್ರದಲ್ಲಿ ಬಹಳ ಯಶಸ್ವಿಯಾಗಿದೆ ಎಂದರು.

ಸಿಎಂರಿಂದ 2021ನೇ ಸಾಲಿನ ಸಿಎಜಿ ವರದಿ ಮಂಡನೆ ಸಿಎಂ ಬಸವರಾಜ ಬೊಮ್ಮಾಯಿ‌ ವಿಧಾನಸಭೆಯಲ್ಲಿ 2021ನೇ ಸಾಲಿನ ಸಿಎಜಿ ವರದಿ ಮಂಡನೆ ಮಾಡಿದ್ದಾರೆ. ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯನಿರ್ವಹಣಾ ವರದಿ ಮಂಡನೆ ಮಾಡಲಾಗಿದೆ. 2020ರಲ್ಲಿ ಲಾಕ್​ಡೌನ್ ಕಾರಣದಿಂದಾಗಿ ಅಪಘಾತ ಕಡಿಮೆಯಾಗಿತ್ತು. ಆದರೆ ಸಂಭವಿಸಿರುವಂತಹ ಅಪಘಾತಗಳು ತೀವ್ರ ತರದ್ದು. ಹೀಗಾಗಿ ರಸ್ತೆ ಸುರಕ್ಷತಾ ನೀತಿ ನಿಗದಿತ ಗುರಿಯನ್ನ ಸಾಧಿಸಿಲ್ಲ. ರಸ್ತೆ ಸುರಕ್ಷತಾ ನಿಧಿಗಾಗಿ 480.50 ಕೋಟಿ ರೂ. ಸಂಗ್ರಹ ಮಾಡಲಾಗಿದೆ. 2017-20ರ ಅವಧಿಯಲ್ಲಿ 480.50 ಕೋಟಿ ರೂ. ಸಂಗ್ರಹ. ಈ ಪೈಕಿ 2020-21ರಲ್ಲಿ 100 ಕೋಟಿ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆಗೆ ಬಳಕೆಗೆ ಅನುಮೋದನೆ ನೀಡಲಾಗಿದೆ. ಆದರೆ ಈ ಅನುದಾನ ಬಳಕೆ ಪ್ರಮಾಣಪತ್ರ ಪಡೆದಿಲ್ಲ. ಬಿಬಿಎಂಪಿ ರಸ್ತೆಗಳು ಅತ್ಯಂತ ಅಪಾಯಕಾರಿ, ಮಾರಣಾಂತಿಕ ಯಾವುದೇ ಸುರಕ್ಷತಾ ನಿಯಮಗಳು ಪಾಲನೆಯಾಗಿಲ್ಲ. ವರದಿಯುದ್ದಕ್ಕೂ ಬಿಬಿಎಂಪಿ ರಸ್ತೆ ನಿರ್ವಹಣೆ ಬಗ್ಗೆ ಬೇಸರವಿದೆ ಎಂದು ಸಿಎಂ ಬೊಮ್ಮಾಯಿ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ರಿಯಾಯಿತಿ ಬೆಲೆಯಲ್ಲಿ ರಷ್ಯಾ ತೈಲ ಮಾರಾಟ ಮಾಡಲು ಕಾರಣವೇನು?

ರಥ ಎಳೆಯುವ ಸಂದರ್ಭದಲ್ಲಿ ಅಹಿತಕರ ಘಟನೆ; ನೂಕು ನುಗ್ಗಲಿಗೆ ಸಿಲುಕಿ ಕಾಲು ಕಳೆದುಕೊಂಡ ಭಕ್ತ

Published On - 4:25 pm, Wed, 16 March 22