Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಯಾಯಿತಿ ಬೆಲೆಯಲ್ಲಿ ರಷ್ಯಾ ತೈಲ ಮಾರಾಟ ಮಾಡಲು ಕಾರಣವೇನು?

ರಷ್ಯಾ ಮತ್ತು ಉಕ್ರೇನ್​ಗಳ ನಡುವಿನ ಯುದ್ಧದಿಂದ ಈಗಾಗಲೇ ಅನೇಕ ರಾಷ್ಟ್ರಗಳ ವಿರೋಧ ಕಟ್ಟಿಕೊಂಡಿರುವ ರಷ್ಯಾ ಇದೀಗ ಕಡಿಮೆ ಬೆಲೆಯಲ್ಲಿ ತೈಲ ಪೂರೈಕೆ ಮಾಡಲು ಮುಂದಾಗಿರಲು ಕಾರಣವೇನು?

ರಿಯಾಯಿತಿ ಬೆಲೆಯಲ್ಲಿ ರಷ್ಯಾ ತೈಲ ಮಾರಾಟ ಮಾಡಲು ಕಾರಣವೇನು?
ರಷ್ಯಾ ಅಧ್ಯಕ್ಷ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 16, 2022 | 4:16 PM

ನವದೆಹಲಿ: ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳ ಸುರಿಮಳೆಯ ಮೂಲಕ ರಷ್ಯಾವನ್ನು (Russia) ಪ್ರತ್ಯೇಕಿಸಲು ಅಮೆರಿಕಾ (United States)  ಮತ್ತು ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳ ಪ್ರಯತ್ನಗಳ ಮಧ್ಯೆ ರಷ್ಯಾ ತೈಲ ಮತ್ತು ಇತರ ಸರಕುಗಳನ್ನು ಭಾರೀ ರಿಯಾಯಿತಿಯಲ್ಲಿ ನೀಡುತ್ತಿದೆ. ಫೆಬ್ರವರಿಯಲ್ಲಿ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಆಕ್ರಮಣ ನಡೆಸಲು ತನ್ನ ದೇಶದ ಸೇನೆಗೆ ಆದೇಶ ನೀಡಿದ ಬೆನ್ನಲ್ಲೇ ಇದೀಗ ಇತರೆ ದೇಶಗಳಿಗೆ ಅಗ್ಗದ ಬೆಲೆಯಲ್ಲಿ ರಷ್ಯಾ ತೈಲ ಪೂರೈಕೆ ಮಾಡುತ್ತಿದೆ. ಈ ರಿಯಾಯಿತಿಯಲ್ಲಿ ಕಚ್ಚಾ ತೈಲ ನೀಡುವ ರಷ್ಯಾದ ಪ್ರಸ್ತಾಪವನ್ನು ಭಾರತ ಕೂಡ ಸ್ವೀಕರಿಸಬಹುದು. ಅಂದಹಾಗೆ, ರಷ್ಯಾ ಮತ್ತು ಉಕ್ರೇನ್​ಗಳ ನಡುವಿನ ಯುದ್ಧದಿಂದ ಈಗಾಗಲೇ ಅನೇಕ ರಾಷ್ಟ್ರಗಳ ವಿರೋಧ ಕಟ್ಟಿಕೊಂಡಿರುವ ರಷ್ಯಾ ಇದೀಗ ಕಡಿಮೆ ಬೆಲೆಯಲ್ಲಿ ತೈಲ ಪೂರೈಕೆ ಮಾಡಲು ಮುಂದಾಗಿರಲು ಕಾರಣವೇನು? ಎಂಬ ಕುತೂಹಲ ಮೂಡುವುದು ಸಹಜ. ಆ ಕುರಿತು ಮಾಹಿತಿ ಇಲ್ಲಿದೆ.

  1. ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದಂತೆ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಮಾಸ್ಕೋವನ್ನು ಜಾಗತಿಕ ಆರ್ಥಿಕ ಪರಿಯಾ ಟ್ಯಾಗ್‌ನೊಂದಿಗೆ ಮೂಲೆಗುಂಪು ಮಾಡುವ ಸಲುವಾಗಿ ಆಮದು ಮಾಡಿಕೊಂಡ ರಷ್ಯಾದ ತೈಲದ ಮೇಲೆ ಅಮೆರಿಕದಲ್ಲಿ ನಿಷೇಧವನ್ನು ಘೋಷಿಸಿದರು.
  2. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಉಕ್ರೇನ್‌ನೊಂದಿಗಿನ ಸಂಘರ್ಷದ ವಿರುದ್ಧ ಪ್ರತಿಭಟಿಸಿ ರಷ್ಯಾದ ವಿರುದ್ಧ ಅಂತಾರಾಷ್ಟ್ರೀಯ ಒಕ್ಕೂಟವನ್ನು ನಿರ್ಮಿಸಲು ಮತ್ತು ಅದರ ತೈಲ ಮತ್ತು ಅನಿಲ ರಫ್ತುಗಳ ಮೇಲಿನ ಅವಲಂಬನೆಯನ್ನು ದೂರವಿಡುವ ಉದ್ದೇಶವನ್ನು ಘೋಷಿಸಿದ್ದರು.
  3. ಇದರ ನಡುವೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲದ ರಷ್ಯಾದ ಪ್ರಸ್ತಾಪವನ್ನು ಭಾರತ ಪರಿಗಣಿಸುವುದು ಅಮೆರಿಕದ ನಿರ್ಬಂಧಗಳ ಉಲ್ಲಂಘನೆಯಾಗುವುದಿಲ್ಲ ಎಂದು ಅಮೆರಿಕ ಹೇಳಿದೆ.
  4. ಇನ್ನೊಂದೆಡೆ ರಷ್ಯಾದ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಭಾರತ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಬಗ್ಗೆ ಭಾರತೀಯ- ಅಮೆರಿಕನ್ ಕಾಂಗ್ರೆಸ್ ಸದಸ್ಯ ಡಾ. ಅಮಿ ಬೆರಾ ಬೇಸರ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮತ್ತು ಕ್ವಾಡ್‌ನ ನಾಯಕನಾಗಿ, ಪುಟಿನ್ ಮತ್ತು ಅವರ ಆಕ್ರಮಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಭಾರತದ್ದಾಗಿದೆ ಎಂದು ಅವರು ಹೇಳಿದ್ದಾರೆ.
  5. ರಷ್ಯಾದ ತೈಲ ರಫ್ತಿನ ಒಂದು ಸಣ್ಣ ಪಾಲನ್ನು ಅಮೆರಿಕಾ ಆಮದು ಮಾಡಿಕೊಳ್ಳುವುದರಿಂದ ಮತ್ತು ಅದರ ಯಾವುದೇ ನೈಸರ್ಗಿಕ ಅನಿಲವನ್ನು ಖರೀದಿಸುವುದಿಲ್ಲವಾದ್ದರಿಂದ ರಷ್ಯಾದ ಮೇಲೆ ಅಮೆರಿಕಾದ ವ್ಯವಹಾರದ ಪ್ರಭಾವವು ಕಡಿಮೆ ಇರುತ್ತದೆ.
  6. ಹೋಂ ಹೀಟಿಂಗ್, ವಿದ್ಯುತ್ ಮತ್ತು ಉದ್ಯಮದ ಬಳಕೆಗಾಗಿ ಯುರೋಪ್​ನ ನೈಸರ್ಗಿಕ ಅನಿಲದ ಸುಮಾರು ಶೇ. 40ರಷ್ಟನ್ನು ರಷ್ಯಾ ಒದಗಿಸುತ್ತದೆ ಮತ್ತು ಯುರೋಪ್​ನ ತೈಲದ ಕಾಲು ಭಾಗವನ್ನು ರಷ್ಯಾ ಪೂರೈಕೆ ಮಾಡುತ್ತದೆ.
  7. ಸೌದಿ ಅರೇಬಿಯಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ದೇಶವಾಗಿರುವ ರಷ್ಯಾ ಚೀನಾ ಅಥವಾ ಭಾರತ ಸೇರಿದಂತೆ ಬೇರೆ ಕಡೆಗಳಲ್ಲಿ ತೈಲವನ್ನು ಮಾರಾಟ ಮಾಡಬಹುದು. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಕಡಿಮೆ ಖರೀದಿದಾರರು ರಷ್ಯಾದ ತೈಲವನ್ನು ಸ್ವೀಕರಿಸುತ್ತಿರುವ ಕಾರಣ ರಷ್ಯಾ ತೈಲವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕಾಗಬಹುದು.
  8. ರಾಯಿಟರ್ಸ್‌ನ ವರದಿಯ ಪ್ರಕಾರ, ಶೇ. 80ರಷ್ಟು ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಭಾರತವು ಸಾಮಾನ್ಯವಾಗಿ ರಷ್ಯಾದಿಂದ ಕೇವಲ ಶೇ. 2-3ರಷ್ಟು ತೈಲವನ್ನು ಮಾತ್ರ ಖರೀದಿಸುತ್ತದೆ. ಆದರೆ ಈ ವರ್ಷ ಇಲ್ಲಿಯವರೆಗೆ ತೈಲ ಬೆಲೆಗಳು ಶೇ. 40ರಷ್ಟು ಏರಿಕೆಯಾಗಿರುವುದರಿಂದ, ಏರುತ್ತಿರುವ ಇಂಧನ ಬಿಲ್ ಅನ್ನು ಕಡಿಮೆ ಮಾಡಲು ತೈಲದ ಆಮದನ್ನು ಭಾರತ ಹೆಚ್ಚಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಯುದ್ಧದಲ್ಲಿ ಅಫ್ಘಾನಿಸ್ತಾನವನ್ನು ಮರೆಯಬೇಡಿ, ಅದು ಅಪಾಯಕ್ಕೆ ಕಾರಣವಾಗಬಹುದು: ವಿಶ್ವಸಂಸ್ಥೆ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ