AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ಅಧ್ಯಕ್ಷ ಬೈಡೆನ್, ಕೆನಡಾ ಪ್ರಧಾನಿ ಟ್ರುಡೋ ವಿರುದ್ಧ ನಿರ್ಬಂಧ ಘೋಷಿಸಿದ ರಷ್ಯಾ

ಬೈಡೆನ್ ಅವರ ಮಗ ಹಂಟರ್ ಮತ್ತು ಮಾಜಿ ಗೃಹ ಕಾರ್ಯದರ್ಶಿ ಹಾಗೂ ಡೆಮೊಕ್ರ್ಯಾಟ್ಸ್ ಪಕ್ಷದ ಅಧ್ಯಕ್ಷೀಯ ಉಮೇದುವಾರರಾಗಿದ್ದ ಹಿಲರಿ ಕ್ಲಿಂಟನ್ ಅವರನ್ನು ತನ್ನ ಗಡಿ ಪ್ರವೇಶಿಸದಂತೆ ರಷ್ಯಾ ನಿಷೇಧ ಹೇರಿದೆ.

ಅಮೆರಿಕ ಅಧ್ಯಕ್ಷ ಬೈಡೆನ್, ಕೆನಡಾ ಪ್ರಧಾನಿ ಟ್ರುಡೋ ವಿರುದ್ಧ ನಿರ್ಬಂಧ ಘೋಷಿಸಿದ ರಷ್ಯಾ
ಜೋ ಬೈಡೆನ್ ಮತ್ತು ಜಸ್ಟಿನ್ ಟ್ರುಡೋ
TV9 Web
| Edited By: |

Updated on: Mar 16, 2022 | 6:39 AM

Share

ಮಾಸ್ಕೋ: ಯುಎಸ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು (Western Countries) ತನ್ನ ವಿರುದ್ಧ ಪ್ರತಿದಿನ ವಿಧಿಸುತ್ತಿರುವ ನಿರ್ಭಂಧಗಳಿಗೆ (sanctions) ಪ್ರತೀಕಾರದ ಕ್ರಮವಾಗಿ ರಷ್ಯಾದ ವಿದೇಶಾಂಗ ಸಚಿವಾಲಯವು ಮಂಗಳವಾರದಂದು ಅಮೇರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ (Justin Trudeau) ವಿರುದ್ಧ ನಿರ್ಬಂಧಗಳನ್ನು ಘೋಷಿಸಿದೆ. ರಷ್ಯಾ ಘೋಷಿಸಿರುವ ನಿರ್ಬಂಧಗಳು ಅಮೇರಿಕಾದ ಗೃಹ ಕಾರ್ಯದರ್ಶಿ ಮತ್ತು ವಿದೇಶಾಂಗ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೂ ಅನ್ವಯಿಸುತ್ತವೆ. ‘ರಷ್ಯಾದ ವಿರುದ್ಧ ವಿಪರೀತ ಭಯದ ನೀತಿಯನ್ನು ವಾಷಿಂಗ್ಟನ್ ಅನುಸರಿಸುತ್ತಿರುವುದರಿಂದ’ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಸ್ಕೋ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮಂಗಳವಾರದಂದೇ ಬಿಡುಗಡೆ ಮಾಡಿರುವ ಮತ್ತೊಂದು ಹೇಳಿಕೆಯಲ್ಲಿ ರಷ್ಯಾದ ವಿದೇಶಾಂಗ ಸಚಿವಾಲಯವು ಜಸ್ಟಿನ್ ಟ್ರುಡೋ ಸೇರಿದಂತೆ ಕೆನಾಡಾದ 313 ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಗಳನ್ನು ಘೋಷಿಸಿದೆ.

ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಬಳಿಕ ಯುಎಸ್ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೀ ಲಾವ್ರೋವ್ ವಿರುದ್ಧ ನಿಷೇಧ ಹೇರಿದೆ. ಅಷ್ಟು ಮಾತ್ರವಲ್ಲದೆ ವಿಶ್ವದ ಬಹುತೇಕ ರಾಷ್ಟ್ರಗಳೊಂದಿಗೆ ರಷ್ಯಾ ಹೊಂದಿದ್ದ ಆರ್ಥಿಕ ಸಂಪರ್ಕಗಳನ್ನು ಯುಎಸ್ ಮೊಟಕುಗೊಳ್ಳುವಂತೆ ಮಾಡಿದೆ.

ತಾನು ತೆಗೆದುಕೊಂಡಿರುವ ಶಿಸ್ತಿನ ಕ್ರಮಗಳ ನಿರ್ದಿಷ್ಟ ಸ್ವರೂಪದ ಬಗ್ಗೆ ರಷ್ಯಾ ಸ್ಪಷ್ಟಪಡಿಸಿಲ್ಲವಾದರೂ ಅವುಗಳನ್ನು ವೈಯಕ್ತಿಕ ನಿರ್ಬಂಧಗಳು ಅಂತ ಕರೆದಿದ್ದು ಅವು ಪರಸ್ಪರ ಪ್ರತೀಕಾರದ ತತ್ವದ ಮೇಲೆ ಆಧಾರಗೊಂಡಿವೆ ಎಂದು ಹೇಳಿದೆ. ಅಂದರೆ ಬೇರೆಯವರು ತನಗೆ ಮಾಡಿದ್ದನ್ನೇ ಅವರಿಗೆ ಮಾಡುವ ತತ್ವವನ್ನು ರಷ್ಯಾ ಅನುಸರಿಸುತ್ತಿದೆ.

ರಷ್ಯಾದ ಆದ್ಯತಾ ಪಟ್ಟಿಯಲ್ಲಿ ಯುಎಸ್ ಜಂಟಿ ಮುಖ್ಯಸ್ಥರ ಅಧ್ಯಕ್ಷ ಮಾರ್ಕ್ ಮಿಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಕೇಂದ್ರ ಗುಪ್ತಚರ ಸಂಸ್ಥೆಯ ನಿರ್ದೇಶಕ ವಿಲಿಯಂ ಬರ್ನ್ಸ್ ಮತ್ತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಕೂಡ ಸೇರಿದ್ದಾರೆ.

ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್, ಅಂತರರಾಷ್ಟ್ರೀಯ ಅಭಿವೃದ್ಧಿಯ ಯುಎಸ್ ಏಜೆನ್ಸಿ ಮುಖ್ಯಸ್ಥ ಸಮಂತಾ ಪೊವರ್, ಉಪ ಖಜಾನೆ ಕಾರ್ಯದರ್ಶಿ ಅಡೆವಾಲೆ ಅಡೆಯೆಮೊ ಮತ್ತು ಯುಎಸ್ ರಫ್ತು-ಆಮದು ಬ್ಯಾಂಕ್ ಮುಖ್ಯಸ್ಥ ರೆಟಾ ಜೋ ಲೂಯಿಸ್ ಮೊದಲಾದವರ ಹೆಸರುಗಳು ಕೂಡ ರಷ್ಯಾದ ಪಟ್ಟಿಯಲ್ಲಿವೆ.

ಬೈಡೆನ್ ಅವರ ಮಗ ಹಂಟರ್ ಮತ್ತು ಮಾಜಿ ಗೃಹ ಕಾರ್ಯದರ್ಶಿ ಹಾಗೂ ಡೆಮೊಕ್ರ್ಯಾಟ್ಸ್ ಪಕ್ಷದ ಅಧ್ಯಕ್ಷೀಯ ಉಮೇದುವಾರರಾಗಿದ್ದ ಹಿಲರಿ ಕ್ಲಿಂಟನ್ ಅವರನ್ನು ತನ್ನ ಗಡಿ ಪ್ರವೇಶಿಸದಂತೆ ರಷ್ಯಾ ನಿಷೇಧ ಹೇರಿದೆ.

ರಷ್ಯಾದ ಬಗ್ಗೆ ಭೀತಿ ತಳೆದಿರುವ ಅಮೆರಿಕಾದ ಅಧ್ಯಕ್ಷರು, ಮಿಲಿಟರಿ ಅಧಿಕಾರಿಗಳು, ಜನ ಪ್ರತಿನಿಧಿಗಳು, ಉದ್ದಿಮೆದಾರರು ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವವರ ವಿರುದ್ಧವೂ ನಿರ್ಬಂಧಗಳನ್ನು ಇಷ್ಟರಲ್ಲೇ ಪ್ರಕಟಿಸುವುದಾಗಿ ರಷ್ಯಾದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:   Russia Ukraine Conflict: ಇನ್ನೂ ಎರಡು ತಿಂಗಳು ಯುದ್ಧ ಮುಂದುವರಿಯಲಿದೆ ಎಂದ ಉಕ್ರೇನ್: ದಾಳಿ ತೀವ್ರಗೊಳಿಸಿದ ರಷ್ಯಾ

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್