Sign In

By signing in or creating an account, you agree with Associated Broadcasting Company's Terms & Conditions and Privacy Policy.

New Covid Variant: ಇಸ್ರೇಲ್​ನಲ್ಲಿ ಹೊಸ ಕೊವಿಡ್ ರೂಪಾಂತರಿ ವೈರಸ್ ಪತ್ತೆ; ಮತ್ತೆ ಹೆಚ್ಚಿದ ಆತಂಕ

ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಿಗೆ ಕೊವಿಡ್ ಪರೀಕ್ಷೆ ಮಾಡಿದಾಗ ಈ ಹೊಸ ಸ್ಟ್ರೈನ್‌ ತಗುಲಿರುವುದು ಪತ್ತೆಯಾಗಿದೆ.

New Covid Variant: ಇಸ್ರೇಲ್​ನಲ್ಲಿ ಹೊಸ ಕೊವಿಡ್ ರೂಪಾಂತರಿ ವೈರಸ್ ಪತ್ತೆ; ಮತ್ತೆ ಹೆಚ್ಚಿದ ಆತಂಕ
ಲಸಿಕೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 16, 2022 | 9:24 PM

ನವದೆಹಲಿ: ಎರಡು ವರ್ಷಗಳಿಂದ ಜಗತ್ತನ್ನೇ ಕಂಗೆಡಿಸಿರುವ ಕೊರೊನಾವೈರಸ್​ (Coronavirus) ರೂಪಾಂತರಗೊಳ್ಳುತ್ತಾ ಮತ್ತಷ್ಟು ಆತಂಕ ಹೆಚ್ಚಿಸಿತ್ತು. ಈಗಾಗಲೇ ಅನೇಕ ರೂಪಾಂತರಗಳನ್ನು ಪಡೆದಿರುವ ಕೊವಿಡ್-19ನಿಂದ ಪಾರಾಗಲು ವಿಶ್ವಾದ್ಯಂತ ಕೊರೊನಾ ಲಸಿಕೆಗಳನ್ನು (Covid Vaccine) ನೀಡಲಾಗುತ್ತಿದೆ. ಹೀಗಾಗಿ, ಕೊವಿಡ್ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿರುವುದರಿಂದ ಅನೇಕ ದೇಶಗಳಲ್ಲಿ ಜನಜೀವನ ಸುಧಾರಿಸಿದೆ. ಆದರೆ, ಪ್ರಪಂಚಕ್ಕೆ ತಿಳಿದಿಲ್ಲದ ಹೊಸ ಕೊವಿಡ್ ರೂಪಾಂತರಿಯ 2 ಪ್ರಕರಣಗಳು ಇಸ್ರೇಲ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಇಸ್ರೇಲ್‌ನ ಆರೋಗ್ಯ ಸಚಿವಾಲಯವು ದಾಖಲಾದ ಹೊಸ ಕೊವಿಡ್ ರೂಪಾಂತರಿಯ ಎರಡು ಪ್ರಕರಣಗಳು COVID-BA.1 ಮತ್ತು BA.2ನ ಓಮಿಕ್ರಾನ್ ಆವೃತ್ತಿಯ ಎರಡು ಉಪ-ವ್ಯತ್ಯಯಗಳ ಸಂಯೋಜನೆಯಾಗಿದೆ ಎಂದು ಹೇಳಿದೆ. ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಿಗೆ ಕೊವಿಡ್ ಪರೀಕ್ಷೆ ಮಾಡಿದಾಗ ಈ ಹೊಸ ಸ್ಟ್ರೈನ್‌ ತಗುಲಿರುವುದು ಪತ್ತೆಯಾಗಿದೆ. ಈ ಹೊಸ ಕೊವಿಡ್ ರೂಪಾಂತರಿಯ ಬಗ್ಗೆ ಬೇರೆ ದೇಶಗಳೂ ಎಚ್ಚರಿಕೆಯಿಂದಿರಲು ಇಸ್ರೇಲ್ ತಿಳಿಸಿದೆ.

ಇಸ್ರೇಲ್​ನಲ್ಲಿ ಹೊಸ COVID ರೂಪಾಂತರ ಸೋಂಕಿಗೆ ಒಳಗಾದ ಇಬ್ಬರು ರೋಗಿಗಳು ಜ್ವರ, ತಲೆನೋವು ಮತ್ತು ಸ್ನಾಯು ಡಿಸ್ಟ್ರೋಫಿಯಗಳಿಂದ ಬಳಲುತ್ತಿದ್ದರು. ಈ ರೂಪಾಂತರವು ಪ್ರಪಂಚದಾದ್ಯಂತ ಇನ್ನೂ ತಿಳಿದಿಲ್ಲ. ಕೊರೊನಾ ರೂಪಾಂತರಿಯ 2 ಪ್ರಕರಣಗಳು ಇಲ್ಲಿಯವರೆಗೆ ಪತ್ತೆಯಾಗಿವೆ, ಜ್ವರ, ತಲೆನೋವು ಮತ್ತು ಸ್ನಾಯು ಡಿಸ್ಟ್ರೋಫಿಯದಿಂದ ಅವರು ಬಳಲುತ್ತಿದ್ದರು. ಇದಕ್ಕೆ ವಿಶೇಷ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Covid Vaccine: 12ರಿಂದ 15 ವರ್ಷದ ಮಕ್ಕಳಿಗೆ ಇಂದಿನಿಂದ ಕೊವಿಡ್ ನಿರೋಧಕ ಲಸಿಕೆ

12-14 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ: ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್