ಒಮೈಕ್ರಾನ್ ತನಗಿಂತಲೂ ವೇಗವಾಗಿ ಹರಡುವ ಉಪರೂಪಾಂತರಿಯನ್ನು ಹೊಂದಿದೆ ಆದರೆ ಗಂಡಾಂತರಕಾರಿಯಲ್ಲ!!

ಒಮೈಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತದೆ. ಒಮೈಕ್ರಾನ್ ನ ಸಬ್ ವೇರಿಯಂಟ್ ಅದಕ್ಕಿಂತ ವೇಗವಾಗಿ ಹರಡುತ್ತದೆ. ಡೆನ್ಮಾರ್ಕ್ ದೇಶದ ಉದಾಹರಣೆಯನ್ನು ನಾವು ತೆಗೆದುಕೊಂಡರೆ ಅಲ್ಲಿ ಬಿಎ.2 ತ್ವರಿತವಾಗಿ ತನ್ನ ಪ್ರಾಬಲ್ಯ ಮೆರೆಯಲಾರಂಭಿಸಿದೆ.

ಒಮೈಕ್ರಾನ್ ತನಗಿಂತಲೂ ವೇಗವಾಗಿ ಹರಡುವ ಉಪರೂಪಾಂತರಿಯನ್ನು ಹೊಂದಿದೆ ಆದರೆ ಗಂಡಾಂತರಕಾರಿಯಲ್ಲ!!
ಒಮೈಕ್ರಾನ್ ಉಪರೂಪಾಂತರಿ ಬಿಎ.2
Follow us
TV9 Web
| Updated By: shivaprasad.hs

Updated on: Feb 06, 2022 | 7:46 AM

ಕೊರೊನಾ ವೈರಸ್ ಮನುಕುಲಕ್ಕೆ ಯಮದೂತನಾಗಿ ಕಾಡಲಾರಂಭಿಸಿ ಎರಡು ವರ್ಷಗಳು ಕಳೆದವು ಮಾರಾಯ್ರೇ. ಈ ಪೀಡೆ ನಮ್ಮನ್ನು ಈಗಲೂ ಬಿಡುವಂತೆ ಕಾಣಿತ್ತಿಲ್ಲ. ಯಾಕೆ ಗೊತ್ತಾ? ಒಮೈಕ್ರಾನ್ ರೂಪಾಂತರಿ (Omicron Variant) ನಮ್ಮಲ್ಲಿ ತಲ್ಲಣ ಸೃಷ್ಟಿಸಿದ್ದು ಸ್ವಲ್ಪ ಹಳೆಯ ಸಂಗತಿ. ಇದು ಭಾವಿಸಿದಷ್ಟು ಅಪಾಯಕಾರಿ ಅಲ್ಲ ಅಂತ ಗೊತ್ತಾದ ಮೇಲೆ ಕೊಂಚ ನಿರಾಳರಾಗಿದ್ದೇವೆ. ಅದರೆ ಒಮೈಕ್ರಾನ್ ಉಪರೂಪಾಂತರಿ (ಸಬ್ ವೇರಿಯಂಟ್) (subvariant) ಎನ್ನಲಾಗುತ್ತಿರುವ ಬಿಎ.2 (BA.2) ವೈರಸ್ ಹೊಸ ಸವಾಲಾಗಿ ವಿಜ್ಞಾನಿಗಳು, ಸಂಶೋಧಕರು ಮತ್ತು ವೈದ್ಯಲೋಕದ ಎದುರು ಧುತ್ತನೆ ಬಂದು ನಿಂತಿದೆ. ಕನಿಷ್ಠ 57 ದೇಶಗಳಲ್ಲಿ ಪತ್ತೆಯಾಗಿರುವ ಸಬ್‌ವೇರಿಯಂಟ್ ಮೂಲಕ್ಕಿಂತ ಹೆಚ್ಚು ಸುಲಭವಾಗಿ ಹರಡುತ್ತದಂತೆ. ಆದರೆ ಇದುವರೆಗೆ ಅದು ತೀವ್ರ ಸ್ವರೂಪದ ಅಪಾಯಕಾರಿ ಸೋಂಕು ಎನಿಸಿಲ್ಲ. ಲಸಿಕೆ ಮತ್ತು ಬೂಸ್ಟರ್ ಡೋಸ್ಗಳು (Booster Dose) ಅದರ ವಿರುದ್ಧ ಪರಿಣಾಮಕಾರಿ ಗುರಾಣಿಗಳಾಗಿವೆ. ಆದರೆ ಈ ರೂಪಾಂತರಿಯ ರೂಪಾಂತರಿ ವಿಜ್ಞಾನಿಗಳಲ್ಲಿ ಒಂದಷ್ಟು ಆತಂಕ ಮೂಡಿಸಿರುವುದಂತೂ ಸತ್ಯ

ಒಮೈಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತದೆ. ಒಮೈಕ್ರಾನ್ ನ ಸಬ್ ವೇರಿಯಂಟ್ ಅದಕ್ಕಿಂತ ವೇಗವಾಗಿ ಹರಡುತ್ತದೆ. ಡೆನ್ಮಾರ್ಕ್ ದೇಶದ ಉದಾಹರಣೆಯನ್ನು ನಾವು ತೆಗೆದುಕೊಂಡರೆ ಅಲ್ಲಿ ಬಿಎ.2 ತ್ವರಿತವಾಗಿ ತನ್ನ ಪ್ರಾಬಲ್ಯ ಮೆರೆಯಲಾರಂಭಿಸಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಸುಮಾರು 8,500 ಕುಟುಂಬಗಳನ್ನು ಆಧರಿಸಿ ನಡೆಸಲಾದ ಅಧ್ಯಯನವು ಬಿಎ.2 ಸೋಂಕಿಗೆ ಒಳಗಾದ ವ್ಯಕ್ತಿ ಸೋಂಕನ್ನು ತನ್ನ ಕುಟುಂಬದ ಶೇಕಡಾ 39 ಸದಸ್ಯರಿಗೆ ಹರಡುತ್ತಾನೆ ಎಂದು ತಿಳಿಸಿದೆ. ಒಮೈಕ್ರಾನ್ ರೂಪಾಂತರಿಯಲ್ಲಿ ಇದು ಶೇಕಡ 29 ರಷ್ಟಿದೆ. ಈ ಡಾಟಾ ಯನೈಟೆಡ್ ಕಿಂಗ್ ಡಮ್ ನ ಡಾಟಾದೊಂದಿಗೆ ಸಾಮ್ಯತೆ ಹೊಂದುತ್ತದೆ.

ಒಮೈಕ್ರಾನ್ ಮತ್ತು ಅದರ ಸಂಬಂಧಿತ ರೂಪಾಂತರಿಗಳು ಗಂಭೀರವಾದ ಹಿಂದಿನ ರೂಪಾಂತರಿಗಳಿಗಿಂತ ಕಡಿಮೆ ಅಸ್ವಸ್ಥತೆಯನ್ನು ಉಂಟು ಮಾಡುತ್ತವೆ, ಅದರಲ್ಲೂ ವಿಶೇಷವಾಗಿ ಲಸಿಕೆ ಹಾಕಿದ ಜನರಲ್ಲಿ. ಬಿಎ.2 ಸಬ್ ವೇರಿಯಂಟ್ ಮೂಲ ಒಮೈಕ್ರಾನ್ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ತೋರುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈ ವಾರ ನೀಡಿದ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಡೆನ್ಮಾರ್ಕ್‌ ನಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಅದರ ಹರಡುವಿಕೆಯು ಆಸ್ಪತ್ರೆಗಳಲ್ಲಿ ಸೋಂಕಿತರ ಅನಿರೀಕ್ಷಿತ ಹೆಚ್ಚಳಕ್ಕೆ ಕಾರಣವಾಗಿಲ್ಲ. ಕಳೆದ ತಿಂಗಳ ಕೊನೆಯಲ್ಲಿ ಕೊರೋನಾ ವೈರಸ್ ಸಂಬಂಧಿತ ನಿರ್ಬಂಧಗಳನ್ನು ತೆರವು ಮಾಡುವಾಗ ಡ್ಯಾನಿಶ್ ಸರ್ಕಾರವು ಈ ರೋಗವು ಇನ್ನು ಮುಂದೆ ಸಮಾಜಕ್ಕೆ ಅಪಾಯವನ್ನು ಉಂಟುಮಾಡುವುದಿಲ್ಲ ಎಂದು ಘೋಷಿತು.

ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ ಸೋಂಕಿನ ಪ್ರಕರಣ ದಾಖಲೆಯ ಗರಿಷ್ಠ ಪ್ರಮಾಣದಲ್ಲಿದ್ದರೂ ಡ್ಯಾನಿಶ್ ಸರ್ಕಾರ ಅಂಥ ಘೋಷಣೆ ಮಾಡಿತು.

ಕೆಲವು ಕೋವಿಡ್ ಲಸಿಕೆಗಳು ಹಿಂದಿನ ರೂಪಾಂತರಗಳಿಗಿಂತ ಒಮೈಕ್ರಾನ್‌ನಿಂದ ಉಂಟಾದ ಸೋಂಕನ್ನು ತಡೆಗಟ್ಟುವಲ್ಲಿ ಕಡಿಮೆ ಪರಿಣಾಮಕಾರಿ ಎಂದು ಡಾಟಾ ಸೂಚಿಸುತ್ತದಾದರೂ ತೀವ್ರವಾದ ಕಾಯಿಲೆಯಿಂದ ರಕ್ಷಿಸುವಲ್ಲಿ ಉತ್ತಮ ಕೆಲಸವನ್ನು ಮಾಡುತ್ತಿದೆ. ಸಬ್‌ವೇರಿಯಂಟ್ ಇನ್ನೂ ಹೆಚ್ಚು ಸಾಂಕ್ರಾಮಿಕವಾಗಿ ಕಂಡುಬಂದರೂ, ಯುಕೆ ಆರೋಗ್ಯ ಅಧಿಕಾರಿಗಳ ಆರಂಭಿಕ ಸಂಶೋಧನೆಗಳ ಪ್ರಕಾರ, ಕೋವಿಡ್ ಲಸಿಕೆಗಳು-ನಿರ್ದಿಷ್ಟವಾಗಿ ಬೂಸ್ಟರ್ ಡೋಸ್‌ಗಳು – ಬಿಎ.2 ವಿರುದ್ಧ ಪರಿಣಾಮಕಾರಿಯಾಗಿವೆ.

ಎರಡನೇ ಡೋಸ್‌ನ ನಂತರ 25 ವಾರಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದಲ್ಲಿ, ಲಸಿಕೆಗಳು ಶೇಕಡ 13 ಪ್ರಕರಣಗಳನ್ನ ತಡೆದರೆ ಬೂಸ್ಟರ್‌ ಡೋಸ್ ತೆಗೆದುಕೊಂಡ ಎರಡು ವಾರಗಳ ನಂತರ ಈ ಪ್ರಮಾಣವು ಶೇಕಡಾ 70 ಕ್ಕೆ ಏರಿತು!

ಕೊರೋನಾ ವೈರಸ್‌ನ ಇತ್ತೀಚಿನ ಪುನರಾವರ್ತನೆಯು ಸಣ್ಣ ಪ್ರಮಾಣದ ಸೋಂಕುಗಳನ್ನು ಪ್ರತಿನಿಧಿಸುತ್ತದೆ ಆದರೆ ದಕ್ಷಿಣ ಆಫ್ರಿಕಾ, ಡೆನ್ಮಾರ್ಕ್, ಭಾರತ ಮತ್ತು ಇಂಗ್ಲೆಂಡ್‌ ಮೊದಲಾದ ದೇಶಗಳಲ್ಲಿ ವೇಗವಾಗಿ ಹರಡಿದೆ. ಎರಡು ಆವೃತ್ತಿಗಳು ಬಿಎ.2 ನ ಏರಿಕೆ ಕಂಡ ಪ್ರದೇಶದಲ್ಲಿ ಪ್ರಮುಖ ಬದಲಾವಣೆ ಒಳಗೊಂಡಂತೆ ಕೆಲವು 40 ರೂಪಾಂತರಿಗಳಿಂದ ಭಿನ್ನವಾಗಿವೆ. ಇವುಗಳ ನಡುವೆ ಸಂಬಂಧವಿದ್ದರೂ, ನಡವಳಿಕೆಯಲ್ಲಿ ಬದಲಾವಣೆ ಹೆಚ್ಚಿಸುವ ಸಾಕಷ್ಟು ಭಿನ್ನತೆಗಳಿವೆ.

ಲಸಿಕೆ ಹಾಕಿದ ಜನರಲ್ಲಿ ಹೆಚ್ಚಿನ ಒಮೈಕ್ರಾನ್ ಪ್ರಕರಣಗಳ ಸೌಮ್ಯ ರೂಪವು ಅಸ್ತಿತ್ವದಲ್ಲಿರುವ ವೈರಸ್ ಮತ್ತು ಭವಿಷ್ಯದ ರೂಪಾಂತರಗಳಿಂದ ಸೋಂಕಿತರಾಗಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸಂಶೋಧಕರು ಹೇಳುತ್ತಾರೆ.

ವೈರಸ್ ಕೊನೆಗಾಣಿಸಲು ಪ್ರಯತ್ನದಲ್ಲಿರುವವರು ಬಿಎ.2 ನ ಗುಣಲಕ್ಷಣಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಭವಿಷ್ಯದ ರೂಪಾಂತರಿಗಳನ್ನು ಸಮರ್ಥವಾಗಿ ನಿಭಾಯಿಸಲು ಅದರ ಅವಶ್ಯಕತೆಯಿದೆ ಎಂದು ಹೇಳುವ ಸಂಶೋಧಕರಲ್ಲಿ ಕೆಲವರು ಬಿಎ.2 ಒಮೈಕ್ರಾನ್ ಅಲೆಯನ್ನು ವಿಸ್ತರಿಸುವ ಸಾಧ್ಯತೆ ಇದೆಯೆಂದು ನಂಬುತ್ತಾರೆ.

ಸಬ್‌ವೇರಿಯಂಟ್‌ನ ಗುಣಲಕ್ಷಣಗಳನ್ನು ಗಮನಿಸುತ್ತಿದ್ದರೆ ಅದು ಒಮೈಕ್ರಾನ್‌ ಅಲೆಯ ಬಾಲ ಬೆಳೆಯಲು ನೆರಾವಾಗುವ ಸಾಧ್ಯತೆಯಿದೆ ಎಂದು ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ಕಂಪ್ಯೂಟೇಶನಲ್ ಬಯಾಲಜಿಸ್ಟ್ ಟ್ರೆವರ್ ಬೆಡ್‌ಫೋರ್ಡ್ ಜನವರಿ 28 ರ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಕರಣಗಳಲ್ಲಿ ಸಂಭಾವ್ಯ ನಿಧಾನಗತಿಯ ಇಳಕೆ ಪ್ರಮಾಣವು ಆಸ್ಪತ್ರೆಗಳಲ್ಲಿ ಹೆಚ್ಚು ಸೋಂಕಿತರು ಕಾಣುವ ಸನ್ನಿವೇಶವನ್ನ ಸೃಷ್ಟಿಬಹುದು ಮತ್ತು ಕಡಿಮೆ ವ್ಯಾಕ್ಸಿನೇಷನ್ ಪ್ರಮಾಣ ಹೊಂದಿರುವ ದೇಶಗಳಿಗೆ ಸಮಸ್ಯೆ ಉಂಟುಮಾಡಬಹುದು.

ಇದನ್ನೂ ಓದಿ:   ಆತಂಕ ಬೇಡ, ಒಮೈಕ್ರಾನ್ ರೂಪಾಂತರಿ ಭಾರತಕ್ಕೆ ಲಗ್ಗೆಯಿಟ್ಟರೆ ಆಕಾಶವೇನೂ ಕಳಚಿ ನಮ್ಮ ಮೇಲೆ ಬೀಳದು: ಡಾ ದೇವಿಪ್ರಸಾದ್​ ಶೆಟ್ಟಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ