Aircraft Crash: ಪೆರುವಿನಲ್ಲಿ ಪ್ರವಾಸಿಗರಿದ್ದ ವಿಮಾನ ಪತನ; 7 ಪ್ರಯಾಣಿಕರ ದುರಂತ ಅಂತ್ಯ

ಪೆರುವಿನಲ್ಲಿ ಪತನವಾದ ಈ ವಿಮಾನದಲ್ಲಿ ಇಬ್ಬರು ಚಿಲಿಯ ಪ್ರವಾಸಿಗರು, ಮೂವರು ಡಚ್ ಪ್ರವಾಸಿಗರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು.

Aircraft Crash: ಪೆರುವಿನಲ್ಲಿ ಪ್ರವಾಸಿಗರಿದ್ದ ವಿಮಾನ ಪತನ; 7 ಪ್ರಯಾಣಿಕರ ದುರಂತ ಅಂತ್ಯ
ವಿಮಾನ ಪತನವಾದ ದೃಶ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 05, 2022 | 8:09 PM

ಪೆರು: ಪೆರುವಿನ ಪ್ರಸಿದ್ಧ ನಾಜ್ಕಾ ಲೈನ್​ಗಳನ್ನು ವೀಕ್ಷಿಸಲು ಹೋಗುತ್ತಿದ್ದ ಪ್ರಯಾಣಿಕರಿದ್ದ ವಿಮಾನವು (Flight)  ಅಪಘಾತಕ್ಕೀಡಾಗಿದ್ದು, ಐವರು ಪ್ರವಾಸಿಗರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪೆರು ಸಾರಿಗೆ ಸಚಿವಾಲಯ ತಿಳಿಸಿದೆ. ಏರೋಸಾಂಟೋಸ್ ಪ್ರವಾಸೋದ್ಯಮ ಕಂಪನಿಗೆ ಸೇರಿದ ಸೆಸ್ನಾ 207 ಸಿಂಗಲ್ ಇಂಜಿನ್ ವಿಮಾನವು ನಜ್ಕಾದ ಮಾರಿಯಾ ರೀಚೆಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ ಟೇಕಾಫ್ ಆದ ವಿಮಾನ ಸ್ವಲ್ಪ ಸಮಯದ ನಂತರ ಪತನವಾಗಿದೆ.

ಈ ವಿಮಾನದಲ್ಲಿ ಇಬ್ಬರು ಚಿಲಿಯ ಪ್ರವಾಸಿಗರು, ಮೂವರು ಡಚ್ ಪ್ರವಾಸಿಗರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಮಾರಿಯಾ ರೀಚೆ ಏರ್‌ಫೀಲ್ಡ್‌ನಿಂದ ಡಜನ್‌ಗಟ್ಟಲೆ ವಿಮಾನಗಳು ಕಾರ್ಯ ನಿರ್ವಹಿಸುತ್ತವೆ. ಪ್ರವಾಸಿಗರು ಅದರಲ್ಲೂ ಮುಖ್ಯವಾಗಿ ವಿದೇಶಿಯರು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ನಾಜ್ಕಾ ಲೈನ್ ವೀಕ್ಷಿಸಲು ಹೆಚ್ಚಾಗಿ ಇಲ್ಲಿಗೆ ಆಗಮಿಸುತ್ತಾರೆ.

UNESCO ಪ್ರಕಾರ, ಕ್ರಿ.ಪೂ. 500ರ ಅವಧಿಯಲ್ಲಿ ಲಿಮಾದ ದಕ್ಷಿಣಕ್ಕೆ 220 ಮೈಲಿಗಳಲ್ಲಿ (350 ಕಿಲೋಮೀಟರ್) ಮರುಭೂಮಿಯ ನೆಲದ ಮೇಲೆ ರೇಖೆಗಳನ್ನು ಕೆತ್ತಲಾಗಿದೆ ಮತ್ತು ಪ್ರಾಣಿಗಳು, ಸಸ್ಯಗಳು, ಕಾಲ್ಪನಿಕ ಜೀವಿಗಳು ಮತ್ತು ಹಲವಾರು ಕಿಲೋಮೀಟರ್ ಉದ್ದದ ಜ್ಯಾಮಿತೀಯ ಆಕೃತಿಗಳನ್ನು ಚಿತ್ರಿಸಲಾಗಿದೆ.

2010ರ ಅಕ್ಟೋಬರ್ ತಿಂಗಳಲ್ಲಿ ನಾಲ್ಕು ಬ್ರಿಟಿಷ್ ಪ್ರವಾಸಿಗರು ಮತ್ತು ಇಬ್ಬರು ಪೆರುವಿಯನ್ ಸಿಬ್ಬಂದಿ ಸದಸ್ಯರಿದ್ದ ಏರ್ನಾಸ್ಕಾ ವಿಮಾನವು ಇದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿತ್ತು.

ಇದನ್ನೂ ಓದಿ: ಟೇಕಾಫ್ ಆಗಿ ಕೆಲವೇ ನಿಮಿಷದಲ್ಲಿ ಜಪಾನೀಸ್ ಯುದ್ಧ ವಿಮಾನ ಕಣ್ಮರೆ; ಮುಂದುವರಿದ ಶೋಧ ಕಾರ್ಯ

ಬಿಹಾರದ ಗಯಾದಲ್ಲಿ ಭಾರತೀಯ ಸೇನಾ ತರಬೇತಿ ವಿಮಾನ ಪತನ; ಪೈಲಟ್​ಗಳು ಸೇಫ್