ಬಿಹಾರದ ಗಯಾದಲ್ಲಿ ಭಾರತೀಯ ಸೇನಾ ತರಬೇತಿ ವಿಮಾನ ಪತನ; ಪೈಲಟ್​ಗಳು ಸೇಫ್

ಬಿಹಾರದ ಗಯಾದಲ್ಲಿ ಭಾರತೀಯ ಸೇನಾ ತರಬೇತಿ ವಿಮಾನ ಪತನ; ಪೈಲಟ್​ಗಳು ಸೇಫ್
ಸೇನಾ ವಿಮಾನ ಪತನ

ಸೇನಾ ವಿಮಾನದ ಇಬ್ಬರು ಪೈಲಟ್‌ಗಳು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಬೋಧಗಯಾ ಬ್ಲಾಕ್‌ನ ಗ್ರಾಮಕ್ಕೆ ಹೊಂದಿಕೊಂಡಿರುವ ಹೊಲದಲ್ಲಿ ಅಪಘಾತ ಸಂಭವಿಸಿದೆ

TV9kannada Web Team

| Edited By: Sushma Chakre

Jan 28, 2022 | 6:33 PM

ನವದೆಹಲಿ: ಬಿಹಾರದ ಗಯಾದಲ್ಲಿರುವ ಭಾರತೀಯ ಸೇನೆಯ (Indian Army) ಅಧಿಕಾರಿಗಳ ತರಬೇತಿ ಅಕಾಡೆಮಿಯ ವಿಮಾನವು ಇಬ್ಬರು ಟ್ರೈನಿ ಪೈಲಟ್‌ಗಳೊಂದಿಗೆ ಇಂದು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಬಂಗಜೀತ್ ಸಹಾ ಅವರ ಪ್ರಕಾರ, ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ.

ಸೇನಾ ವಿಮಾನದ ಇಬ್ಬರು ಪೈಲಟ್‌ಗಳು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಬೋಧಗಯಾ ಬ್ಲಾಕ್‌ನ ಗ್ರಾಮಕ್ಕೆ ಹೊಂದಿಕೊಂಡಿರುವ ಹೊಲದಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ತರಬೇತಿ ನೀಡುತ್ತಿದ್ದ ವಿಮಾನ ಕೆಳಗೆ ಬೀಳುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕೆಡೆಟ್‌ಗಳನ್ನು ಹೊರಗೆಳೆದಿದ್ದಾರೆ.

ಕೂಡಲೇ ಬಂದ ಸೇನಾ ಸಿಬ್ಬಂದಿಯನ್ನು ಅವರು ಆಸ್ಪತ್ರೆಗೆ ಕರೆದೊಯ್ದರು. ಅಪಘಾತಕ್ಕೀಡಾದ ವಿಮಾನದ ಅವಶೇಷಗಳನ್ನೂ ಅವರು ಸಂಗ್ರಹಿಸಿದ್ದಾರೆ. “ಅಪಘಾತಕ್ಕೆ ಕಾರಣವಾಗಬಹುದಾದ ತಾಂತ್ರಿಕ ದೋಷದ ಸ್ವರೂಪವು ತಜ್ಞರ ಪರೀಕ್ಷೆಯ ನಂತರವೇ ತಿಳಿಯುತ್ತದೆ” ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: Kulgam Blast: ಕಾಶ್ಮೀರದ ಕುಲ್ಗಾಮ್​ನಲ್ಲಿ ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ

ತಮಿಳುನಾಡು ಸೇನಾ ಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಬ್ರಿಗೇಡಿಯರ್​ ಲಿಡ್ಡರ್​ ಕುಟುಂಬಕ್ಕೆ 50 ಲಕ್ಷ ರೂ.ನೆರವು; ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ

Follow us on

Related Stories

Most Read Stories

Click on your DTH Provider to Add TV9 Kannada